ಬಾಳೆಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಎಲ್ಲರೂ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಇನ್ಮುಂದೆ ತಪ್ಪು ಮಾಡಬೇಡಿ. ಕೇವಲ ಬಾಳೆಹಣ್ಣಿನ ಸಿಪ್ಪೆಯಿಂದಲೇ ನಿಮ್ಮ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
life Mar 13 2026
Author: Sathish Kumar KH Image Credits:Freepik
Kannada
ಒಣ ಚರ್ಮವನ್ನು ಮೃದುವಾಗಿಸಲು ಸಹಾಯ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದೆ. ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ, ಒಣ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ.
Image credits: Pinterest
Kannada
ಚರ್ಮದ ಮೇಲಿನ ಸುಕ್ಕುಗಳನ್ನು ನಿವಾರಿಸುತ್ತೆ
ಬಾಳೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹೀಗಾಗಿ, ಇದು ಚರ್ಮದ ಮೇಲಿನ ಸಣ್ಣಗೆರೆಗಳು ಮತ್ತು ಸುಕ್ಕುಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
Image credits: Pinterest
Kannada
ಮೊಡವೆಗಳನ್ನು ಹೋಗಲಾಡಿಸಲು ಸಹಾಯ
ಬಾಳೆಹಣ್ಣಿನ ಸಿಪ್ಪೆಯಿಂದ ಚರ್ಮದ ಮೇಲೆ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
Image credits: Pinterest
Kannada
ಮುಖದ ಸಣ್ಣಗೆರೆಗಳನ್ನು ದೂರ ಮಾಡುತ್ತೆ
ಮೊಡವೆಗಳನ್ನು ಹೋಗಲಾಡಿಸಲು, ಪ್ರತಿದಿನ ಐದು ನಿಮಿಷಗಳ ಕಾಲ ಮುಖ ಮತ್ತು ದೇಹದ ಮೇಲೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಮುಖದ ಸುಕ್ಕುಗಳು, ಸಣ್ಣಗೆರೆಗಳನ್ನು ಅಳಿಸಿಹಾಕಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಉಪಯುಕ್ತ.
Image credits: Pinterest
Kannada
ಕೂದಲು ತುಂಡಾಗುವುದನ್ನು ತಡೆಯುತ್ತದೆ
ಇದು ನೆತ್ತಿಯಲ್ಲಿ ತೇವಾಂಶವನ್ನು ಕಾಪಾಡಿ, ಶುಷ್ಕತೆ ಕಡಿಮೆ ಮಾಡುತ್ತದೆ. ಕೂದಲು ತುಂಡಾಗುವುದನ್ನು ತಡೆಯುತ್ತದೆ. ಅಕಾಲಿಕವಾಗಿ ಕೂದಲು ಬಿಳಿಯಾಗಲು ಮುಖ್ಯ ಕಾರಣವಾದ ಆಕ್ಸಿಡೇಟಿವ್ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.
Image credits: Freepik
Kannada
ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು ಬಾಳೆ ಸಿಪ್ಪೆ ಬೆಸ್ಟ್
ಕಣ್ಣಿನ ಕೆಳಗಿನ ಕಪ್ಪು ಬಣ್ಣ ಮತ್ತು ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಒಳ್ಳೆಯದು. ಬಾಳೆಹಣ್ಣಿನ ಸಿಪ್ಪೆ ಮತ್ತು ಅಲೋವೆರಾ ಸೇರಿಸಿ ರುಬ್ಬಿದ ಪೇಸ್ಟ್ ಅನ್ನು ಕಣ್ಣುಗಳ ಸುತ್ತಲೂ ಹಚ್ಚಿಕೊಳ್ಳಿ.