ಮುಖದ ಕಾಂತಿ ಕಳೆಗುಂದುವ ಭಯವೇ, ಮನೆಯಲ್ಲೇ ಫೇಸ್‌ಮಾಸ್ಕ್ ತಯಾರಿಸಿ, ಅಂದ ಹೆಚ್ಚಿಸಿಕೊಳ್ಳಿ
ಮನೆಯಲ್ಲಿ ಸಿಗುವ ಸಾಮಾಗ್ರಿಗಳಿಂದ ಮುಖಕ್ಕೆ ಹಚ್ಚುವುದರಿಂದ ಸಹಜವಾಗಿಯೇ ಮುಖದ ಕಾಂತಿ ಹೆಚ್ಚುತ್ತದೆ. ಮುಖ್ಯವಾಗಿ ಮೂರು ಸಾಮಾಗ್ರಿಗಳು ಮುಖದ ಕಾಂತಿ ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತವೆ.

ಎಲ್ಲರಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ವಯಸ್ಸಾದಂತೆ ಚರ್ಮದ ಕಾಂತಿ ಕಡಿಮೆಯಾಗದಂತೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಎಣ್ಣೆ, ಸೀರಮ್‌ಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿ ಸಿಗುವ ಸಾಮಾಗ್ರಿಗಳಿಂದಲೇ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಮನೆಯಲ್ಲಿ ಸಿಗುವ ಕೆಲವು ಸಾಮಾಗ್ರಿಗಳನ್ನು ಪ್ರತಿದಿನ ಮುಖಕ್ಕೆ ಹಚ್ಚುವುದರಿಂದ ಸಹಜವಾಗಿಯೇ ಮುಖದ ಕಾಂತಿ ಹೆಚ್ಚುತ್ತದೆ. ಮುಖ್ಯವಾಗಿ ಮೂರು ಸಾಮಾಗ್ರಿಗಳು ಮುಖದ ಕಾಂತಿ ಹೆಚ್ಚಿಸಲು ತುಂಬಾ ಸಹಾಯಕಾರಿ.
ಟೊಮೆಟೊ, ಬಾಳೆಹಣ್ಣು ಮತ್ತು ಆಲೂಗಡ್ಡೆಯನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು. ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಟೊಮೆಟೊದಲ್ಲಿ ಲೈಕೋಪೀನ್ ಎಂಬ ಯಾಂಟಿಆಕ್ಸಿಡೆಂಟ್ ಇದೆ, ಇದು ಸೂರ್ಯನ ಹಾನಿಕಾರಕ UV ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಮೇಲಿನ ಚರ್ಮವನ್ನು ತೆಗೆದುಹಾಕುತ್ತದೆ. ಆಲೂಗಡ್ಡೆ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ.
ಒಂದು ಟೀ ಚಮಚ ಟೊಮೆಟೊ ರಸ, ಒಂದು ಟೀ ಚಮಚ ಮೊಸರು, ಒಂದು ಟೀ ಚಮಚ ಆಲೂಗಡ್ಡೆ ರಸ ತೆಗೆದುಕೊಳ್ಳಿ. ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ವಾರಕ್ಕೆ ಎರಡು ಮೂರು ಬಾರಿ ಹಚ್ಚಿ.
ಮೊಡವೆಗಳಿಗೆ ಟೊಮೆಟೊ, ಆಲೂಗಡ್ಡೆ ಮತ್ತು ಜೇನುತುಪ್ಪ ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು. ಇದನ್ನು ದಿನಕ್ಕೆ ಎರಡು ಬಾರಿ ಹಚ್ಚಿ.