High Blood Pressure Control: ಯೋಗ ಗುರು ಡಾ.ಹಂಸಜಿ ಯೋಗೇಂದ್ರ ಅವರು ಕೇವಲ 60 ಸೆಕೆಂಡುಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾದ 3 ಟೆಕ್ನಿಕ್ ಹೇಳಿದ್ದಾರೆ.

ಅಧಿಕ ರಕ್ತದೊತ್ತಡವನ್ನು (ಹೈ ಬಿಪಿ) ಸೈಲೆಂಟ್ ಕಿಲ್ಲರ್ ಎಂದು ಹೇಳಲಾಗುತ್ತದೆ. ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸಿಕೊಳ್ಳದಿದ್ದರೆ ಅದು ನಿಮ್ಮ ಹೃದಯ ಮತ್ತು ಮೂತ್ರಪಿಂಡಗಳ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ನೀವು ಕೂಡ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ರಕ್ತದೊತ್ತಡ ಕಾಲಕಾಲಕ್ಕೆ ಹೆಚ್ಚಾಗುತ್ತಿದ್ದರೆ, ಇಲ್ಲಿ 3 ಸುಲಭ ಟೆಕ್ನಿಕ್ಸ್ ಕೊಡಲಾಗಿದೆ. ಈ ಟೆಕ್ನಿಕ್ಸ್‌ ಕೇವಲ 60 ಸೆಕೆಂಡುಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ರಕ್ತದೊತ್ತಡವನ್ನು ಯಾವಾಗಲೂ ನಿಯಂತ್ರಣದಲ್ಲಿಡಬಹುದಾದ ಆ 5 ಅಭ್ಯಾಸಗಳ ಬಗ್ಗೆ ದಿ ಯೋಗ ಸಂಸ್ಥೆಯ ನಿರ್ದೇಶಕ ಡಾ.ಹಂಸಜಿ ಯೋಗೇಂದ್ರ ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ...

ಮೊದಲನೆಯ ಟೆಕ್ನಿಕ್: ಯೋಗೇಂದ್ರ ಪ್ರಾಣಾಯಾಮ 1
ವಿಡಿಯೋದಲ್ಲಿ ಯೋಗೇಂದ್ರ ಪ್ರಾಣಾಯಾಮ 1 ಮಾಡುವುದರಿಂದ ಹೃದಯ ಬಡಿತವನ್ನು ನಿಯಂತ್ರಿಸುವ, ಒತ್ತಡವನ್ನು ಕಡಿಮೆ ಮಾಡುವ, ಮನಸ್ಸಿಗೆ ಶಾಂತಿಯನ್ನು ತರುವ ಮತ್ತು ರಕ್ತದೊತ್ತಡವನ್ನು ಸಾಮಾನ್ಯಗೊಳಿಸುವ ಸ್ವಾಯತ್ತ ನರಮಂಡಲವನ್ನು ಸಮತೋಲನಗೊಳಿಸುತ್ತದೆ ಎಂದು ಹಂಸಜಿ ವಿವರಿಸುತ್ತಾರೆ.

ಮಾಡುವುದು ಹೇಗೆ?
ಇದನ್ನು ಮಾಡಲು 4 ರವರೆಗೆ ಎಣಿಸುವಾಗ ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳಿ, ಸ್ವಲ್ಪ ಹೊತ್ತು ಹಾಗೆಯೇ ಹಿಡಿದುಕೊಳ್ಳಿ, ನಂತರ 4 ರವರೆಗೆ ಎಣಿಸುವಾಗ ಉಸಿರನ್ನು ಬಿಡಿ. ಈ ಪ್ರಕ್ರಿಯೆಯನ್ನು ಒಂದು ನಿಮಿಷ ಪುನರಾವರ್ತಿಸಿ.

ಎರಡನೇಯ ಟೆಕ್ನಿಕ್: ನಿಮ್ಮ ಮುಖಕ್ಕೆ ತಣ್ಣೀರಿನಿಂದ ಚಿಮುಕಿಸುವುದು
ಮುಖದ ಮೇಲೆ ತಣ್ಣೀರು ಸಿಂಪಡಿಸುವುದರಿಂದ ಸಸ್ತನಿಗಳ ಡೈವ್ ರಿಫ್ಲೆಕ್ಸ್ ಸಕ್ರಿಯಗೊಳ್ಳುತ್ತದೆ, ಇದು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಹೀಗಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಹಂಸಜಿ ವಿವರಿಸುತ್ತಾರೆ.

ಮಾಡುವುದು ಹೇಗೆ ?

ಮೊದಲಿಗೆ ನಿಮ್ಮ ಮುಖದ ಮೇಲೆ, ವಿಶೇಷವಾಗಿ ಹಣೆ, ಕಣ್ಣುಗಳು ಮತ್ತು ಕೆನ್ನೆಗಳ ಮೇಲೆ ತಣ್ಣೀರು ಸಿಂಪಡಿಸಬೇಕು. ಅಥವಾ ನೀವು ಬಯಸಿದರೆ, ತಣ್ಣೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಮ್ಮ ಮುಖದ ಮೇಲೆ ಇಡಬಹುದು. ಇದು ನಿಮಗೆ ತಕ್ಷಣಕ್ಕೆ ಪರಿಹಾರವನ್ನು ನೀಡುತ್ತದೆ.

ಮೂರನೇಯ ಟೆಕ್ನಿಕ್: ತ್ವರಿತ ಪ್ರಗತಿಶೀಲ ಸ್ನಾಯು ವಿಶ್ರಾಂತಿ (PMR)
ಈ ಟೆಕ್ನಿಕ್‌ನಲ್ಲಿ ನೀವು ನಿಮ್ಮ ದೇಹದ ವಿವಿಧ ಭಾಗಗಳ ಸ್ನಾಯುಗಳನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಬೇಕು. ನಂತರ 30 ಸೆಕೆಂಡುಗಳ ಕಾಲ ಅವುಗಳನ್ನು ಸಡಿಲಗೊಳಿಸಬೇಕು. ಮೊದಲನೆಯದಾಗಿ ನಿಮ್ಮ ಮುಷ್ಟಿಯನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಿ ನಂತರ ಅವುಗಳನ್ನು ಸಡಿಲಗೊಳಿಸಿ. ನಂತರ ನಿಮ್ಮ ಭುಜಗಳನ್ನು ಮೇಲಕ್ಕೆ ಎಳೆದು ನಂತರ ನಿಧಾನವಾಗಿ ಬಿಡುಗಡೆ ಮಾಡಿ, ನಿಮ್ಮ ಕಾಲ್ಬೆರಳುಗಳನ್ನು ಬಿಗಿಗೊಳಿಸಿ ನಂತರ ಅವುಗಳನ್ನು ಬಿಡುಗಡೆ ಮಾಡಿ ಎಂದು ಡಾ. ಹಂಸಜಿ ಹೇಳುತ್ತಾರೆ. ಈ ಟೆಕ್ನಿಕ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ 5 ಟೆಕ್ನಿಕ್‌ನಿಂದ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ ರಕ್ತದೊತ್ತಡ
ಸಮತೋಲಿತ ಉಪ್ಪು ಸೇವನೆ: ಡಾ. ಹಂಸಜಿ ಅವರು ವಿಶೇಷವಾಗಿ ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ. ಆಹಾರದಲ್ಲಿ ಬಿಳಿ ಉಪ್ಪಿನ ಬದಲಿಗೆ ಕಪ್ಪು ಮತ್ತು ಕಲ್ಲು ಉಪ್ಪನ್ನು ಬಳಸುವಂತೆ ಶಿಫಾರಸು ಮಾಡುತ್ತಾರೆ.

ನಿಯಮಿತ ವ್ಯಾಯಾಮ: ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು.

ಧ್ಯಾನ ಮತ್ತು ಯೋಗ: ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ನೀವು ಪ್ರತಿದಿನ ಧ್ಯಾನ, ಪ್ರಾಣಾಯಾಮ ಅಥವಾ ಯೋಗವನ್ನು ಅಭ್ಯಾಸ ಮಾಡಬಹುದು.

ಒಳ್ಳೆಯ ನಿದ್ರೆ: ರಕ್ತದೊತ್ತಡವನ್ನು ನಿಯಂತ್ರಿಸಲು ನಿದ್ರೆ ಅತ್ಯಂತ ಮುಖ್ಯ ಎಂದು ಹಂಸಜಿ ಹೇಳುತ್ತಾರೆ. ಹಾಗಾಗಿ ರಾತ್ರಿ 7-8 ಗಂಟೆಗಳ ಕಾಲ ಡೀಪ್ ಸ್ಲೀಪ್ ಮಾಡಿ.

ರಕ್ತದೊತ್ತಡ ಮೇಲ್ವಿಚಾರಣೆ: ಇದೆಲ್ಲದರ ಹೊರತಾಗಿ, ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿ.

YouTube video player