Kannada

ಕೂದಲನ್ನು ಸ್ವಾಭಾವಿಕವಾಗಿ ಬಲಪಡಿಸುವ 6 ಆಹಾರಗಳು

ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ನಿಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿಕೊಂಡರೆ, ಕೂದಲು ನೈಸರ್ಗಿಕವಾಗಿ ದಟ್ಟ ಹಾಗೂ ಬಲವಾಗುತ್ತದೆ. ಅಂತಹ 6 ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

Kannada

ಸೂರ್ಯಕಾಂತಿ ಬೀಜಗಳು

ನಿಮ್ಮ ಆಹಾರದಲ್ಲಿ 1 ಟೇಬಲ್ ಸ್ಪೂನ್ ಸೂರ್ಯಕಾಂತಿ ಬೀಜಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮ ಕೂದಲಿನ ಎಳೆಗಳನ್ನು ಬಲಶಾಲಿಯಾಗಿಸುತ್ತದೆ.

Image credits: Getty
Kannada

ನುಗ್ಗೆ ಸೊಪ್ಪಿನ ಪುಡಿ

ನುಗ್ಗೆ ಸೊಪ್ಪಿನ ಪುಡಿಯಲ್ಲಿ ವಿಟಮಿನ್ ಎ, ಸಿ, ಇ, ಸತು, ಕಬ್ಬಿಣ ಮತ್ತು ಅಮೈನೋ ಆಸಿಡ್‌ಗಳಿವೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

Image credits: Getty
Kannada

ಪನೀರ್

ಪನೀರ್‌ನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಇ ಮತ್ತು ಸೆಲೆನಿಯಂ ಕೂಡ ಇದೆ. ಇದು ಕೂದಲಿಗೆ ದೀರ್ಘಕಾಲದ ಪೋಷಣೆಯನ್ನು ನೀಡಲು ಸಹಾಯ ಮಾಡುತ್ತದೆ.

Image credits: Getty
Kannada

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಕಬ್ಬಿಣದಂಶ ಹೇರಳವಾಗಿದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ತಲೆಹೊಟ್ಟು ತಡೆಯುತ್ತದೆ ಮತ್ತು ಅಕಾಲಿಕ ಬಿಳಿ ಕೂದಲನ್ನು ಕಡಿಮೆ ಮಾಡಲಿದೆ.

Image credits: Getty
Kannada

ಅಗಸೆ ಬೀಜಗಳು

ನಿಮ್ಮ ಆಹಾರದಲ್ಲಿ 1 ಟೇಬಲ್ ಸ್ಪೂನ್ ಅಗಸೆ ಬೀಜಗಳನ್ನು ಸೇರಿಸಿಕೊಳ್ಳಿ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಮೊಸರು

ಮೊಸರಿನಲ್ಲಿ ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಲ್ಯಾಕ್ಟಿಕ್ ಆಸಿಡ್ ಸಮೃದ್ಧವಾಗಿದೆ. ಇದು ಕೂದಲು ಉದುರುವುದನ್ನು ನಿಯಂತ್ರಿಸಲು ಮತ್ತು ನೆತ್ತಿಯ ತುರಿಕೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

Image credits: Getty

ದಿನಾ ಕೊತ್ತಂಬರಿ ಬೀಜದ ನೀರು ಕುಡಿದರೆ ಸಿಗುತ್ತೆ ಈ 7 ಅದ್ಭುತ ಪ್ರಯೋಜನ

English Ivy: ಬೆಡ್‌ರೂಮ್‌ನಲ್ಲಿ ಇಂಗ್ಲಿಷ್ ಐವಿ ಬೆಳೆಸುವುದರಿಂದ ಸಿಗುತ್ತೆ 7 ಅದ್ಭುತ ಪ್ರಯೋಜನ!

ಮಲಬದ್ಧತೆ ಸಮಸ್ಯೆ ಇದೆಯಾ? ಈ 6 ಪಾನೀಯಗಳನ್ನ ಟ್ರೈ ಮಾಡಿ ನೋಡಿ

ದಿನಕ್ಕೆ ಎಷ್ಟು ಗೋಡಂಬಿ, ಬಾದಾಮಿ ತಿನ್ನಬೇಕು ಗೊತ್ತಾ?