ಈ ಎಲೆಯಿಂದ ಒಂದೇ ರಾತ್ರಿಯಲ್ಲಿ ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ!
Bhringraj for grey hair: ಇಂತಹ ಸಮಯದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಈ ಸೊಪ್ಪು ಪವಾಡದಂತೆ ಕೆಲಸ ಮಾಡುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ತರುವ ಈ ಅದ್ಭುತ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ನರೆ ಕೂದಲು
ಇಂದಿನ ವೇಗದ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ 'ಅಕಾಲಿಕ ನರೆ' (ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು). 25 ವರ್ಷ ತುಂಬುವ ಮೊದಲೇ ತಲೆ ಕೂದಲು ಬಿಳಿಯಾಗುತ್ತಿದ್ದರೆ, ಜನರು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳ ಮೊರೆ ಹೋಗುತ್ತಾರೆ. ಇವು ತಾತ್ಕಾಲಿಕವಾಗಿ ಬಣ್ಣ ನೀಡಿದರೂ, ಚರ್ಮದ ಅಲರ್ಜಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಒಂದೇ ಒಂದು ಎಲೆಯಿಂದ ಬಿಳಿ ಕೂದಲು ಕಪ್ಪು
ಈ ಹಿನ್ನೆಲೆಯಲ್ಲಿ, ನಮ್ಮ ಪೂರ್ವಜರು ಬಳಸುತ್ತಿದ್ದ ಹಳೆಯದಾದ ಒಂದು ಆಯುರ್ವೇದ ಚಿಕಿತ್ಸೆ ಈಗ ಮತ್ತೆ ಸಖತ್ ಟ್ರೆಂಡ್ ಆಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ಕೇವಲ ಒಂದು ಎಲೆಯಿಂದಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಭೃಂಗರಾಜ ಪವಾಡ
ಹೌದು. ಆಯುರ್ವೇದ ಶಾಸ್ತ್ರದಲ್ಲಿ 'ಭೃಂಗರಾಜ' ಎಂದು ಕರೆಯಲ್ಪಡುವ ಇದು ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲದು. ಇದರಲ್ಲಿರುವ ಅಂಶಗಳು ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ನೀಡುವ 'ಮೆಲನಿನ್' ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಸಂಶೋಧನೆಗಳ ಪ್ರಕಾರ, ಈ ಗಿಡದ ಹಳದಿ ಹೂವುಗಳು ಕೂದಲಿನ ಸಂರಕ್ಷಣೆಯಲ್ಲಿ ತುಂಬಾ ಸಹಕಾರಿ.
ಬಳಸುವ ವಿಧಾನ
ಈ ಸೊಪ್ಪಿನ ಜೊತೆಗೆ ಸ್ವಲ್ಪ ಗೋರಂಟಿ ಮತ್ತು ಆಮ್ಲಾ ಪುಡಿಯನ್ನು ಸೇರಿಸಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ದಿನ ಪೂರ್ತಿ ಹಾಗೆಯೇ ಬಿಡಿ. ಮರುದಿನ ಇದನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ನೆನಪಿರಲಿ, ಇದನ್ನು ಕೇವಲ ಮೇಲೆ ಮೇಲೆ ಹಚ್ಚದೆ, ಕೂದಲಿನ ಬುಡಕ್ಕೆ ತಲುಪುವಂತೆ ಹಚ್ಚಬೇಕು. ಆಗಲೇ ಉತ್ತಮ ಬದಲಾವಣೆ ಕಾಣಲು ಸಾಧ್ಯ.
ಗಮನಿಸಿ
"ಇದು ನೈಸರ್ಗಿಕ ಮದ್ದಾದ್ದರಿಂದ ಉತ್ತಮ ಫಲಿತಾಂಶಕ್ಕೆ ಕೆಲವು ದಿನಗಳ ಕಾಲ ಬಳಸಬೇಕು" ಈ ಮಾಹಿತಿಯು ಕೇವಲ ಅರಿವಿಗಾಗಿ ಮಾತ್ರ. ತಜ್ಞರು ನೀಡಿದ ಮಾಹಿತಿಯ ಆಧಾರದ ಮೇಲೆ ಇದನ್ನು ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
