ಒಬ್ಬರಲ್ಲ, ಇಬ್ಬರಲ್ಲ…. ಅಮಿತಾಬ್ ಬಚ್ಚನ್ ಗೆ ಇತ್ತು ಐದು ಜನರ ಜೊತೆ ಅಫೇರ್
ಅಮಿತಾಬ್ ಬಚ್ಚನ್ ಅವರ ವೃತ್ತಿಪರ ಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನವೂ ಯಾವಾಗಲೂ ಸುದ್ದಿಯಲ್ಲಿರುತ್ತೆ. ನಿಮಗೆ ಗೊತ್ತಾ? ಜಯಾ ಬಚ್ಚನ್ ಅವರನ್ನು ಲವ್ ಮಾಡೋದಕ್ಕೂ ಮುನ್ನ ಅಮಿತಾಬ್ ಬಚ್ಚನ್ ಜೀವನದಲ್ಲಿ ಎಷ್ಟು ಬಾರಿ ಲವ್ ಆಗಿದೆ ಗೊತ್ತಾ?

ಅಮಿತಾಬ್ ಬಚ್ಚನ್ (Amitabh Bachchan) ತಮ್ಮ ಸೂಪರ್ ಹಿಟ್ ಚಲನಚಿತ್ರಗಳು ಮತ್ತು ನಟನೆಗಾಗಿ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದರೂ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಇವತ್ತಿಗೂ ನಡೆಯುತ್ತಿವೆ. ಅಮಿತಾಬ್ ಬಚ್ಚನ್ ಜಯಾ ಅವರೊಂದಿಗಿನ ರಿಲೇಶನ್’ಶಿಪ್ ನಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದರೂ, ಅವರ ಪ್ರೇಮ ಜೀವನದ ಕಥೆಗಳಲ್ಲಿ ಅನೇಕ ಹೆಸರುಗಳು ಕೇಳಿ ಬರುತ್ತಿವೆ.
ಅಮಿತಾಬ್ ಬಚ್ಚನ್ ಅವರ ಒಬ್ಬರು ಗರ್ಲ್ ಫ್ರೆಂಡ್ ಎಲ್ಲರಿಗೂ ಗೊತ್ತು ಅದು ರೇಖಾ. ಇವರಿಬ್ಬರ ಲವ್ ಸ್ಟೋರಿ ಭಾರಿ ಸದ್ದು ಮಾಡಿತ್ತು, ಆ ಕಾಲದಲ್ಲಿ. ಆದರೆ ಅವರ ಜೊತೆ ಮತ್ತೊಂದು ಹೆಸರು ಕೂಡ ಕೇಳಿ ಬಂದಿತ್ತು, ಆಕೆಯನ್ನು ಬಚ್ಚನ್ ಅವರ ಮೊದಲ ಗರ್ಲ್ ಫ್ರೆಂಡ್ ಅಂತಾನೂ ಹೇಳಲಾಗುತ್ತದೆ. ಬಚ್ಚನ್ ಯೌವ್ವನದಲ್ಲಿ ಹಲವು ರಿಲೇಶನ್ ಶಿಪ್ ನಲ್ಲಿದ್ದರೂ ಎನ್ನಲಾಗುತ್ತೆ, ಆದರೆ ಅವರ ಮೊದಲ ಗೆಳತಿ ಬ್ರಿಟಿಷ್ ಏರ್ವೇಸ್‌ನಲ್ಲಿ (British Airways) ಕೆಲಸ ಮಾಡುತ್ತಿದ್ದಳು ಎನ್ನುವ ಸುದ್ದಿಯೂ ಇದೆ.
ಪ್ರಸಿದ್ಧ ಬರಹಗಾರ ಮತ್ತು ಚಲನಚಿತ್ರ ಇತಿಹಾಸಕಾರ, ಹನೀಫ್ ಜವೇರಿ ಅವರು 'ಮೇರಿ ಸಹೇಲಿ' ಪಾಡ್‌ಕ್ಯಾಸ್ಟ್‌ನಲ್ಲಿ ಅಮಿತಾಬ್ ಬಚ್ಚನ್ ಅವರ ಈ ಸಂಬಂಧದ ಕುರಿತು ಮಾತನಾಡಿದ್ದಾರೆ. ಬಚ್ಚನ್ ಅವರು ಜಯಾ ಬಚ್ಚನ್ ಗೂ ಮುನ್ನ ಬ್ರಿಟಿಷ್ ಏರ್ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಯಾ ಎಂಬ ಮಹಿಳೆಯೊಂದಿಗೆ ಲವ್ ರಿಲೇಶನ್’ಶಿಪ್ (love relationship) ನಲ್ಲಿದ್ದರು. ಬಚ್ಚನ್ ಮತ್ತು ಮಾಯಾ ಅವರ ನಡುವಿನ ಪ್ರೀತಿ ಆರಂಭವಾದುದು ಕೋಲ್ಕತ್ತಾದಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ.
ಅಮಿತಾಬ್ ಮಾಯಾಳನ್ನು ತುಂಬಾನೆ ಪ್ರೀತಿಸುತ್ತಿದ್ದರಂತೆ.. ಆದರೆ ನಂತರ, ಬಿಗ್ ಬಿ ತಮ್ಮ ನಟನಾ ಕರಿಯರ್ ಮುಂದುವರಿಸಲು ಮುಂಬೈಗೆ ತೆರಳಿ ತಮ್ಮ ಚಿಕ್ಕಪ್ಪನೊಂದಿಗೆ ಬಂಗಲೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಮಾಯಾ (Maya), ಬಚ್ಚನ್ ಅವರನ್ನು ಭೇಟಿಯಾಗಲು ಹೆಚ್ಚಾಗಿ ಮುಂಬೈಗೆ ಬರುತ್ತಿದ್ದಳಂತೆ. ಆದರೆ ಆಕೆ ಬರೋದು ಬಚ್ಚನ್ ಅವರ ಚಿಕ್ಕಪ್ಪನಿಗೆ ಇಷ್ಟವಾಗುತ್ತಿರಲಿಲ್ಲವಂತೆ.. ಬಚ್ಚನ್ ಕೂಡ ತಮ್ಮ ಲವ್ ಸ್ಟೋರಿ ಮನೆಯವರಿಗೆ ಗೊತ್ತಾದರೆ ಎಂದು ಭಯಪಡುತ್ತಿದ್ದರಂತೆ.
ನಟ ಮೆಹಮೂದ್ ಸಹೋದರ ಅನ್ವರ್ ಅಲಿ ಕೂಡ ಬಿಗ್ ಬಿ ಬಗ್ಗೆ ಮಾತನಾಡುತ್ತಾ 'ಮಾಯಾ ತುಂಬಾ ಧೈರ್ಯಶಾಲಿಯಾಗಿದ್ದಳು ಮತ್ತು ಅಮಿತಾಬ್ ಜೊತೆ ಬಹಿರಂಗವಾಗಿ ಫ್ಲರ್ಟ್ ಮಾಡುತ್ತಿದ್ದಳು, ಇದರಿಂದ ಬಚ್ಚನ್ ಗೆ ಅನ್ ಕಂಫರ್ಟೇಬಲ್ ಆಗುತ್ತಿತ್ತಂತೆ. ಅಮಿತಾಬ್ ತಮ್ಮ ಕಳವಳವನ್ನು ನಟ ಮೆಹಮೂದ್ ಅವರ ಸಹೋದರ ಅನ್ವರ್ ಅಲಿ ಬಳಿ ಹೇಳಿಕೊಂಡಾಗ, ಅವರು ಮಾಯಾದಿಂದ ಬೇರೆಯಾಗಲು ಬಚ್ಚನ್ ಗೆ ಸಲಹೆ ನೀಡಿದ್ದರಂತೆ .
ಅನ್ವರ್ ಬಚ್ಚನ್ ಅವರಿಗೆ, 'ನೀನು ಮಾಯಾ ಜೊತೆ ನಿನ್ನ ಜೀವನ ಕಳೆಯಲು ಸಾಧ್ಯವಾಗುವುದಿಲ್ಲ' ಎಂದಿದ್ದರಂತೆ. ಯಾಕಂದ್ರೆ ಮಾಯಾ ಅವರು ಬಚ್ಚನ್ ಕುಟುಂಬಕ್ಕೆ ಹೊಂದಿಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ನೀವು ಮುಂದುವರೆದಂತೆ, ಹೆಚ್ಚಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರಂತೆ ಅನ್ವರ್. .
ಬಿಗ್ ಬಿ ಮತ್ತು ಮಾಯಾ ನಡುವಿನ ಸಂಬಂಧ ಹೀಗೆ ಕೊನೆಗೊಂಡಿತು ಎಂದು ಹನೀಫ್ ಹೇಳಿದರು. ಇದರ ಮಧ್ಯೆ, ಬಚ್ಚನ್ 1970 ರಲ್ಲಿ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ (Pune Film Institute) ಜಯಾ ಬಚ್ಚನ್ ಅವರನ್ನು ಭೇಟಿಯಾದರು. 'ಏಕ್ ನಜರ್' ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡುವಾಗ, ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಈ ಜೋಡಿ 1973 ರಲ್ಲಿ 'ಜಂಜೀರ್' ಬಿಡುಗಡೆಯಾದ ನಂತರ ವಿವಾಹವಾದರು.
ಇದಾದ ನಂತರ ಬಿಗ್ ಬಿ ರೇಖಾ ಪ್ರೀತಿಯಲ್ಲಿ ಬಿದ್ದಿದ್ದರು, ಇಬ್ಬರು ಜೊತೆಯಾಗಿ ಸಿನಿಮಾ ಕೂಡ ಮಾಡಿದ್ದರು. ಇವರಿಬ್ಬರ ಲವ್ ಸ್ಟೋರಿ (Love story) ಬಗ್ಗೆ ಭಾರಿ ಚರ್ಚೆ ಕೂಡ ನಡೆದಿತ್ತು, ಆದರೆ ಯಾವಾಗ ಬಚ್ಚನ್ ಅನಾರೋಗ್ಯದಿಂದ ಹಾಸಿಗೆ ಹಿಡಿದರೋ, ಆ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೇ ಜಯಾ ಜೊತೆಗಿದ್ದುದನ್ನು ನೋಡಿ, ತಮ್ಮ ಪ್ರೇಮ ಸಂಬಂಧವನ್ನು ಕೈ ಬಿಟ್ಟಿದ್ದರು ಬಚ್ಚನ್.
ಇವರಲ್ಲದೇ ಬಚ್ಚನ್ ಅವರು ತಮ್ಮ ಕೋ ಸ್ಟಾರ್ ಆಗಿದ್ದ ಬೋಲ್ಡ್ ಬ್ಯೂಟಿ ಪರ್ವೀನ್ ಬಾಬಿ (Parveen Bhabi) ಜೊತೆಗೂ ಅಫೇರ್ ಹೊಂದಿದ್ದರು ಎನ್ನುವ ಸುದ್ದಿ ಇತ್ತು. ಈ ಜೋಡಿ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು, ಅಷ್ಟೇ ಅಲ್ಲ, ಬಚ್ಚನ್ ಅವರು ಪರ್ವೀನ್ ಮನೆಗೂ ಹೋಗಿ ಬರುತ್ತಿದ್ದರು. ಇದಲ್ಲದೇ ಝೀನತ್ ಅಮನ್ (Zeenat Aman) ಜೊತೆಗೂ ರಿಲೇಶನ್ ಶಿಪ್ ಇತ್ತು, ಆದ್ರೆ ಇದು ಹೆಚ್ಚು ಸಮಯ ಉಳಿಯಲಿಲ್ಲವಂತೆ. ಇವಿಷ್ಟು ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಅವರ ಲವ್ ಸ್ಟೋರಿ.