ರಾಜ್ಯವೇ ಬೆಚ್ಚಿ ಬಿದ್ದಿರೋ ಬಹುಕೋಟಿ ಮಹಾ ವಂಚಕ, ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದ. 4500 ಕೋಟಿ ದೋಖಾ ಕೇಸ್ ​ರೂವಾರಿ ಈ ಶಿವಾನಂದ್​ನೀಲಣ್ಣನವರ್​, ಮಾಜಿ ನೀಲಿ ತಾರೆ ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು ಗೊತ್ತಾ? ಈ ಸ್ಟೋರಿ ನೋಡಿ.. 

ಮಾಜಿ ನೀಲಿ ತಾರೆಗೆ 1 ಕೋಟಿ ಕೊಟ್ಟಿದ್ದ ನೀಲಣ್ಣನವರ್..!

Add Asianetnews Kannada as a Preferred SourcegooglePreferred

ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್..! 4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ಸನ್ನಿ ಲಿಯೋನ್​..!

ಸ್ಯಾಂಡಲ್​ವುಡ್​​ನಲ್ಲೂ ಶಿವಾನಂದನ ಡಿಂಗರ್​ಬಿಲ್ಲಿ ಆಟ; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ..!

ನಟಿ ಸಲ್ಲಿ ಲಿಯೋನ್​​​ ಮೇಲೆ ದುಡ್ಡು ಸುರಿದವರು ಒಬ್ರಾ ಇಬ್ರಾ..? ಈ 4500 ಕೋಟಿ ವಂಚನೆ ಪ್ರಕರಣಲ್ಲಿ ಸಿಕ್ಕಿ ಬಿದ್ನಲ್ಲಾ ಶಿವಾನಂದ ನೀಲಣ್ಣನವರ್, ಆ ವಂಚಕ ಕೂಡ ಸನ್ನಿ ಮೇಲೆ ಕೋಟಿ ಕೋಟಿ ಸುರಿದಿದ್ದಾನೆ. ಅರೆ ನಮ್ ಸನ್ನಿ ಲೀಯೋನ್​ಗೂ ಶಿವಾನಂದ ನೀಲಣ್ಣನವರ್​ಗು ಎಲ್ಲಿಂದೆಲ್ಲಿ ಸಂಬಂಧ ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..

ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ!

ಇವತ್ತು ಇಡೀ ರಾಜ್ಯವೇ ಬೆಚ್ಚಿ ಬೀಳೋ ಮಹಾ ವಂಚನೆಯೊಂದು ಬೆಳಕಿಗೆ ಬಂದಿದೆ. ಆ ವಂಚನೆಯ ರುವಾರಿ ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್. ಬರೋಬ್ಬರಿ 4500 ಕೋಟಿ ದೋಖಾ ಕೇಸ್ ​ಅನ್ನ ಮೈ ಮೇಲೆ ಎಳೆದುಕೊಂಡಿರೋ ಈ ಶಿವಾನಂದ್​ನೀಲಣ್ಣನವರ್​ಆ ದುಡ್ಡಲ್ಲೊಂದಷ್ಟನ್ನ ನೀಲಿ ತಾರೆ ಮೇಲೆ ಸುರಿದಿದ್ದ.. ಈತ 35 ಸಾವಿರ ಜನರಿಗೆ ಕೋಟಿ ಕೋಟಿ ವಂಚಿಸಿದ್ದ ಅನ್ನೋದಷ್ಟೇ ಅಲ್ಲ, ಸ್ಯಾಂಡಲ್​ವುಡ್​ ಜೊತೆಗೂ ಈ ನೀಲಣ್ಣನವರ್ ಗೆ ಲಿಂಕ್​ ಇತ್ತು ಅನ್ನೋದು ಇಂಟ್ರೆಸ್ಟಿಂಗ್...

4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ನಟಿ ಸನ್ನಿ ಲಿಯೋನ್; ಚಾಂಪಿಯನ್ ಪಟ್ಟಕ್ಕೆ ಸನ್ನಿ ಜೊತೆ ಶಿವಾನಂದ್​ ಡಿಂಗ್ರಿಬಿಲ್ಲಿ ಆಟ!

ಯೆಸ್, ಈ ಶಿವಾನಂದ್​ನೀಲಣ್ಣನವರ್​ಗೆ ಬಡ್ಡಿ ದುಡ್ಡು ಮಾಡೋದೊಂದೇ ವ್ಯಾಪಾರ ಅಲ್ಲ. ಸಿನಿಮಾ ಫ್ಯಾಷನ್ ಕೂಡ ಇತ್ತು. ಅದು ಯಾವ್ ಮಟ್ಟದ ಫ್ಯಾಷನ್ ಅಂದ್ರೆ, ಬಾಲಿವುಡ್​ನ ಹಾಟಿ ನೀಲಿ ತಾರೆ ಅಂತಲೇ ಫೇಮಸ್ ಆಗಿದ್ದ ಸನ್ನಿ ಲಿಯೋನ್​ರನ್ನ ಎಷ್ಟೇ ದುಡ್ಡು ಖರ್ಚಾದ್ರು ಪರವಾಗಿಲ್ಲ, ಕನ್ನಡದ ಸಿನಿಮಾಕ್ಕೆ ಕರೆ ತರಬೇಕು ಅನ್ನೋ ದೊಡ್ಡ ಹಟ.. ಅದು ಚಾಂಪಿಯನ್ ಅನ್ನೋ ಸಿನಿಮಾಕ್ಕಾಗಿ ಮಾಡಿದ ಶಪಥ..

2023ರಲ್ಲಿ ಇದೇ ಶಿವಾನಂದ್​ ನೀಲಣ್ಣನವರ್​ಕನ್ನಡದಲ್ಲಿ ಚಾಂಪಿಯನ್ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನರ್ತಿಸೋಕೆ ನೀಲಿತಾರೆ ಸನ್ನಿ ಲಿಯೋನ್​ರನ್ನ ಕರೆಸಿದ್ದ. ಸನ್ನಿನೋ ನೀಲಣ್ಣ ಕೊಟ್ಟ ಬಿಲ್ಡಪ್​ಗೆ ಮನಸೋತು 'ಡಿಗ್ರಿಬಿಲ್ಲಿ ನಾನು..' ಅಂತ ಸಖತ್ ಆಗಿ ಡಾನ್ಸ್ ಮಾಡಿದ್ಲು..

ಮಾಜಿ ನೀಲಿ ತಾರೆ ಜೊತೆ ಮಾಡಿದ್ದೇನು?

ಪಡ್ಡೆ ಹುಡುಗರ ಮನದರಸಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​'ಚಾಂಪಿಯನ್' ಸಿನಿಮಾದ ಸ್ಪೆಷಲ್​ಹಾಡಿಗೆ ನರ್ತಿಸೋದಕ್ಕಾಗಿ ಭಾರಿ ಡಿಮ್ಯಾಂಡ್ ಮಾಡಿದ್ರು. ಅಂದೋ ಶಿವಾನಂದ್​ಬಳಿ ಕೈ ತುಂಬ ದುಡ್ಡು ಓಡಾಡ್ತಿದ್ದ ಕಾಲ. ಹಿಂದೆ ಮುಂದೆ ಯೋಚ್ನೆ ಮಾಡದೇ ಸನ್ನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಕೊಟ್ಟು ಜೆಸ್ಟ್ ಒಂದೇ ಒಂದು ಹಾಡಿನಲ್ಲಿ ಡಾನ್ಸ್​ ಮಾಡಿಸಿದ್ದ.

ಆದ್ರೆ ಸನ್ನಿ ಕುಣಿದಿದ್ದ ಆ 'ಚಾಂಪಿಯನ್' ಸಿನಿಮಾ ಏನು ದೊಡ್ಡ ಹಿಟ್ ಆಗ್ಲಿಲ್ಲ. ಸ್ಯಾಂಡಲ್​​ವುಡ್​ನಲ್ಲಿ ಚಾಂಪಿಯನ್ ಆಗೋಕೆ ಬಂದಿದ್ದ ಶಿವಾನಂದ್​ನೀಲಣ್ಣನವರ್​ಇವತ್ತು ಕೈಗೆ ಕೋಳ ತೊಡೋ ಹಾಗಾಗಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..