ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್‌ನಿಂದ ಈ ಹಾಡು ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಪಿ.ಆರ್.ಕೆ ಸಂಸ್ಥೆ ಹುಟ್ಟಿಹಾಕಿದ್ದೇ ಹೊಸಬರನ್ನ ಪ್ರೋತ್ಸಾಹಿಸೋದಕ್ಕೆ. ಅಪ್ಪು ಅಗಲಿಕೆ ಬಳಿಕವೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಪಿ.ಆರ್.ಕೆ ಮೂಲಕ ಹೊಸಬರಿಗೆ ಪ್ರೋತ್ಸಾಹ ಮುಂದುವರೆಸಿದ್ದಾರೆ. ಸದ್ಯ PRK ಆಡಿಯೋ ಮೂಲಕ ನವನಟನ ‘ರಕ್ಕಿ’ (Rukky) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.

Add Asianetnews Kannada as a Preferred SourcegooglePreferred

ಬಹು ನಿರೀಕ್ಷಿತ "ರಕ್ಕಿ" ಚಿತ್ರದ ರಗಡೋ ರಕ್ಕಿ ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು "ರಕ್ಕಿ" ಚಿತ್ರದ ಮೊದಲ ಗೀತೆಯಾಗಿದೆ.

ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ ಸಂಯೋಜನೆ ಹಾಗೂ ಕಲರ್‌ಫುಲ್ ದೃಶ್ಯಗಳೊಂದಿಗೆ ಈ ಹಾಡು ರಕ್ಕಿ ಸುರೇಶ್ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸುತ್ತದೆ. ಇಂದಿನ Gen Z ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್, ಯೂತ್‌ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್‌ನಿಂದ ವಿಶೇಷ ಆಕರ್ಷಣೆಯಾಗಿದೆ.

ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್‌ನಿಂದ ಈ ಹಾಡು ಥಿಯೇಟರ್ ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.

ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯವನ್ನು ಲೋಕಿ ತವಸ್ಯ ನೀಡಿದ್ದಾರೆ. ಯುವಜನತೆಯನ್ನು ಸೆಳೆಯುವ ರೀತಿಯ ಸಂಗೀತ ಮತ್ತು ಸಾಹಿತ್ಯ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಕಂಬಿರಾಜು ಅವರ ನೃತ್ಯ ಸಂಯೋಜನೆ ಹಾಡಿಗೆ ಮತ್ತಷ್ಟು ಭರ್ಜರಿತನ ನೀಡಿದ್ದು, ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರನ್ನು ಕುಣಿಯಿಸುವಂತಿದೆ. ಛಾಯಾಗ್ರಾಹಕ ಐ ಸಾಕ್ ಪ್ರಭಾಕರ್ ಅವರು ಕಲರ್‌ಫುಲ್ ಫ್ರೇಮ್ಸ್, ಸ್ಟೈಲಿಶ್ ಲೈಟಿಂಗ್ ಮತ್ತು ಅದ್ದೂರಿ ದೃಶ್ಯ ವಿನ್ಯಾಸದ ಮೂಲಕ ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.

ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ "ರಕ್ಕಿ" ಚಿತ್ರ, ಸದ್ಯ ಸೆನ್ಸಾರ್ ಹಂತದಲ್ಲಿದ್ದು ಶೀಘ್ರದಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದ ಮತ್ತು ಬೆಂಬಲ ದೊರೆತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.

SNR Productions ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ "ರಕ್ಕಿ" ಚಿತ್ರವು ಸಾಹಸ , ಭಾವನೆ, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳಿಂದ ಕೂಡಿದ ಯುವಜನರ ಮನಗೆಲ್ಲುವ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ ಆಗಲಿದೆ. ಈಗಾಗಲೇ ಬಿಡುಗಡೆಯಾದ “ರಗಡೋ ರಕ್ಕಿ” ಹಾಡು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು, ಚಿತ್ರದ ಭರ್ಜರಿ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗ ಈ ಚಿತ್ರದಲ್ಲಿದೆ.