- Home
- Entertainment
- ಅಪ್ಪನ ಅಂಗಿಯಿಂದ ಹೊರಬಂದ ಮಗ; ಯಶ್ ಮಗ ಯಥರ್ವ್ ಬರ್ತಡೇಗೆ, ಅಮ್ಮ ಹಂಚಿಕೊಂಡ ನ್ಯಾಚುರಲ್ ಫೋಟೋ ಇಲ್ಲಿವೆ!
ಅಪ್ಪನ ಅಂಗಿಯಿಂದ ಹೊರಬಂದ ಮಗ; ಯಶ್ ಮಗ ಯಥರ್ವ್ ಬರ್ತಡೇಗೆ, ಅಮ್ಮ ಹಂಚಿಕೊಂಡ ನ್ಯಾಚುರಲ್ ಫೋಟೋ ಇಲ್ಲಿವೆ!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ ಹುಟ್ಟುಹಬ್ಬದ ವಿಶೇಷ ಫೋಟೋಗಳು ವೈರಲ್. ಮಕ್ಕಳೊಂದಿಗೆ ಯಶ್ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ತಿಳಿಯಲು ಇಲ್ಲಿದೆ ವಿವರ.

ಕನ್ನಡದ ಚಿತ್ರರಂಗದ ತಾರಾ ದಂಪತಿ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಅವರ ಪುತ್ರ ಯಥರ್ವ ಅವರ ಜನ್ಮದಿನವಿದ್ದು, ರಾಧಿಕಾ ಪಂಡಿತ್ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ಸ್ಟಾರ್ ನಟ ಯಶ್ ಅವರು ತಮ್ಮ ಮಗನೊಂದಿಗೆ ಹೇಗೆ ಮಗುವಾಗಿರುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಗಳು ಕಂಡುಬರುತ್ತಿವೆ. ಯಶ್ ಧರಿಸಿದ ಟಿ-ಶರ್ಟ್‌ನಲ್ಲಿ ಮಗ ಸೇರಿಕೊಂಡು ಅದರಿಂದ ತಲೆಯನ್ನಯ ಹೊರಗೆ ಹಾಕಿದ್ದಾನೆ. ಅದರ ಫೋಟೋ ಸೆರೆಹಿಡಿದಿದ್ದು, ಇದೀಗ ಆ ಫೋಟೋವನ್ನು ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಯಶ್ ಅವರು ಶೂಟಿಂಗ್ ಸಮಯದ ಹೊರತಾಗಿ ಯಾವಾಗಲೇ ಬಿಡುವು ಸಿಕ್ಕಿದರೂ ಮಕ್ಕಳೊಂದಿಗೆ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ. ಅವರು ಕೆಲಸದನಿಮಿತ್ತ ಹೊರಗೆ ಹೋದ ಸಂದರ್ಭದಲ್ಲಿ ಮಕ್ಕಳನ್ನು ಅವರ ಪತ್ನಿ ರಾಧಿಕಾ ಅವರು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ.
ನಟಿ ರಾಧಿಕಾ ಪಂಡಿತ್ ಅವರು ಮಕ್ಕಳ ಆರೈಕೆ ನಿಮಿತ್ತ ತಮ್ಮ ಸಿನಿಮಾ ಜರ್ನಿಯನ್ನೇ ನಿಲ್ಲಿಸಿದ್ದಾರೆ. ಗಂಡ ಯಶ್ ಅವರು ಪ್ಯಾನ್ ಇಂಡಿಯಾ ಹಾಗೂ ಪ್ಯಾನ್ ವರ್ಲ್ಡ್ ಮಟ್ಟದ ಸಿನಿಮಾಗಳನ್ನು ಮಾಡುತ್ತಿದ್ದು, ಅವರಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಅವರ ಎಲ್ಲ ಕಾರ್ಯಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಕುಟುಂಬದಲ್ಲಿ ಯಾವುದೇ ಹಬ್ಬ ಆಚರಣೆಗಳನ್ನು ಮಾಡಿದರೂ, ಪ್ರವಾಸಗಳಿಗೆ ಹೋದರೂ ಅಲ್ಲಿ ಮಕ್ಕಳೊಂದಿಗೆ ಇರುವ ಕ್ಯೂಟ್ ಫೋಟೋಗಳನ್ನು ನಟಿ ರಾಧಿಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಪಾತ್ರವನ್ನು ಸಂಪೂರ್ಣವಾಗಿ ಭರ್ತಿ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





