'ಕೊತ್ತಲವಾಡಿ' ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿರುವ ಯಶ್ ಅವರ ತಾಯಿಗೆ ಮೊಮ್ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದಾಗ ಸ್ವಲ್ಪ ಗರಂ ಆದರು. ಆಗಿದ್ದೇನು ನೋಡಿ!
ಸಿನಿ ಪ್ರಿಯರಿಗೆ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು, ಕೊತ್ತಲವಾಡಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಿರ್ಮಾಪಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ‘ಪಿಎ ಪ್ರೊಡಕ್ಷನ್ಸ್’ ಎಂಬ ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಯಶ್ ತಾಯಿ ಹೆಸರು ಪುಷ್ಪ, ತಂದೆ ಅರುಣ್ ಕುಮಾರ್ ಹೀಗಾಗಿ ನಿರ್ಮಾಣ ಸಂಸ್ಥೆಗೆ ‘ಪಿಎ ಪ್ರೊಡಕ್ಷನ್ಸ್’ ಎಂದು ಇಡಲಾಗಿದೆ. ಈ ಸಂಸ್ಥೆಯ ಮೂಲಕ ಈಗಾಗಲೇ ಸಿನಿಮಾ ಕೆಲಸ ಶುರುವಾಗಿದೆ. ಶ್ರೀರಾಜ್ ನಿರ್ದೇಶನದ ಈ ಚಿತ್ರದಲ್ಲಿ, ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಅವರೊಂದಿಗೆ ‘ಕೆಂಡಸಂಪಿಗೆ’ ಖ್ಯಾತಿಯ ಕಾವ್ಯ ಶೈವ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಅನೇಕರು ಇದ್ದಾರೆ. ಅದರ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ಪುಷ್ಪಾ ಅವರು ಮಾಧ್ಯಮದವರ ಜೊತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಪತ್ರಕರ್ತರೊಬ್ಬರು ಈ ಪ್ರೊಡಕ್ಷನ್ ಮೂಲಕ ನಿಮ್ಮ ಮೊಮ್ಮಕ್ಕಳನ್ನು ಲಾಂಚ್ ಮಾಡುವ ಪ್ಲ್ಯಾನ್ ಇದೆಯಾ ಕೇಳಿದಾಗ, ಪುಷ್ಪಾ ಅವರು ಸ್ವಲ್ಪ ಗರಂ ಆದಂತೆ ಕಂಡರು. ಮುಖದಲ್ಲಿ ನಗು ಇದ್ದರೂ ಕೋಪದಿಂದಲೇ ಇನ್ನು 20 ವರ್ಷ ಆಗಿ, ಮೊಮ್ಮಕ್ಕಳು ಬರಲಿ ಆಮೇಲೆ ಹೇಳ್ತೇನೆ. ಈಗ ಸದ್ಯಕ್ಕಿಲ್ಲ ಎಂದರು. ಒಂದೇ ಸಮನೆ ಬರುತ್ತಿದ್ದ ಪ್ರಶ್ನೆಗಳಿಗೆ ಇರುಸು ಮುರುಸುಗೊಂಡಂತೆ ಅವರು ತೋರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ವಲ್ಪ ಕೋಪದಿಂದಲೇ ಹೀಗೆ ಹೇಳಿದ್ದು, ಅದೀಗ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುತ್ತಿದ್ದಾರೆ.
Anushree Marriage: ಆ್ಯಂಕರ್ ಅನುಶ್ರೀ ಮದ್ವೆಯ ಬಿಗ್ ಅಪ್ಡೇಟ್ ಕೊಟ್ಟೇ ಬಿಟ್ರು ರಾಕಿಂಗ್ ಸ್ಟಾರ್ ಯಶ್ ಅಮ್ಮ!
ಇನ್ನು ಯಶ್ ಅವರ ಮಕ್ಕಳ ಕುರಿತು ಹೇಳುವುದಾದರೆ, ಯಶ್ ತಮ್ಮ ಬಹುಕಾಲದ ಪ್ರೇಯಸಿ ರಾಧಿಕಾ ಪಂಡಿತ್ ಅನ್ನು 2016ರಲ್ಲಿ ರಲ್ಲಿ ವಿವಾಹವಾಗಿದ್ದಾರೆ. ದಂಪತಿಗೆ 2018ರ ಡಿಸೆಂಬರ್ 2 ರಂದು ಹೆಣ್ಣು ಮಗು ಮತ್ತು ಒಂದೇ ವರ್ಷದಲ್ಲಿ ಅಂದರೆ 2019ರ ಅಕ್ಟೋಬರ್ 30 ರಂದು ಗಂಡು ಮಗು ಜನಿಸಿದೆ. ದೊಡ್ಡ ಮಗುವಿಗೆ ಏಳು ಹಾಗೂ ಚಿಕ್ಕವನಿಗೆ ಆರು ವರ್ಷ ವಯಸ್ಸು. ಹೀಗಾಗಿಯೇ ಯಶ್ ಅವರ ತಾಯಿ ಇನ್ನೊಂದಿಪ್ಪತ್ತು ವರ್ಷ ಹೋಗಲಿ ಎಂದು ಹೇಳಿದ್ದಾರೆ.
ಇನ್ನು ನಿನ್ನೆಯಷ್ಟೇ ಇದರ ಟೀಸರ್ ಬಿಡುಡೆಯಾಗಿದೆ. ಇದರಲ್ಲಿ ಹಳ್ಳಿಯ ಸ್ಟೋರಿ ಇದೆ. ಆ ಬಗ್ಗೆ ನಟ ಪೃಥ್ವಿ ಅಂಬಾರ್ ವಿವರಣೆ ನೀಡಿದರು. ‘ಹಳ್ಳಿಯ ಮುಗ್ಧ, ಪವರ್ ಫುಲ್ ಪಾತ್ರ ಮಾಡಬೇಕು ಎಂಬ ಬಹುವರ್ಷಗಳ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮುಗಿದರೂ ನಿರ್ಮಾಪಕರು ಯಾರು ಎಂಬುದು ಗೊತ್ತಿರಲಿಲ್ಲ. ನಂತರ ಪುಷ್ಪ ಮೇಡಂ ಅವರ ಹಾಸನದ ಮನೆಗೆ ಹೋದೆವು. ಮೀಟಿಂಗ್ ಮುಗಿಸಿ ಹೊರಟ ಬಳಿಕ ‘ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ’ ಅಂತ ಆಶೀರ್ವಾದ ಮಾಡಿದರು. ಬ್ರ್ಯಾಗ್ರೌಂಡ್ ಇಲ್ಲದವರ ಜೊತೆಗೆ ಅವರು ನಿಲ್ಲುತ್ತಾರೆ ಎಂಬ ನಂಬಿಕೆ ಇದೆ’ ಎಂದು ಅವರು ನಿನ್ನೆ ಮಾಹಿತಿ ನೀಡಿದ್ದರು. ಇದನ್ನು ಬಾಸ್ ಟಿವಿ ಶೇರ್ಮಾಡಿಕೊಂಡಿದೆ.
ಆ ನಟನ ಕಾಲಿಗೆ ಏಟಾಯ್ತು, ಯಶ್ಗೆ ಸ್ಟಾರ್ ಪಟ್ಟದ ಜೊತೆ ಭಾವಿ ಪತ್ನಿಯೂ ಸಿಕ್ಕರು! ಈ ರೋಚಕ ಕಥೆ ಕೇಳಿ


