ವಿ ಮಿಸ್ ಯೂ: ಮುದ್ದಿನ ಶ್ವಾನಕ್ಕೆ ನಟನ ಭಾವುಕ ವಿದಾಯ
ಬಾಲಿವುಡ್ ನಟ ವರುಣ್ ಧವನ್ ತಮ್ಮ ಮುದ್ದಿನ ಶ್ವಾನ 'ಏಂಜೆಲ್' ಅನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಮುದ್ದಿನ ಶ್ವಾನ ಜೋಯಿ ಜೊತೆ ವರುಣ್
ಬಾಲಿವುಡ್ ನಟ ವರುಣ್ ಧವನ್ ಅವರು ತಮ್ಮ ಪ್ರೀತಿಯ ಶ್ವಾನವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಮುದ್ದಿನ ಶ್ವಾನದ ಫೋಟೋವನ್ನು ಹಂಚಿಕೊಂಡು ಭಾವುಕ ಬರಹವನ್ನು ಅವರು ಬರೆದುಕೊಂಡಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡ ವರುಣ್ ಧವನ್, ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ದುಃಖಿಸಿದ್ದಾರೆ. ಆರ್‌ಐಪಿ ಏಂಜೆಲ್, ಇಂದು ಸ್ವರ್ಗ ಮತ್ತೊಂದು ದೇವತೆಯನ್ನು ಪಡೆದುಕೊಂಡಿದೆ. ನಮ್ಮ ಪಾಲಿನ ಅದ್ಭುತ ನಾಯಿಮರಿಯಾಗಿದ್ದಕ್ಕಾಗಿ ಮತ್ತು ತಮ್ಮ ಮತ್ತೊಂದು ಶ್ವಾನ ಜೋಯ್‌ಗೆ ಅದ್ಭುತ ಸಹೋದರಿಯಾಗಿದ್ದಕ್ಕಾಗಿ ಧನ್ಯವಾದಗಳು, ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಮತ್ತೊಮ್ಮೆ ಭೇಟಿಯಾಗೋಣ ಎಂದು ವರುಣ್ ಧವನ್ ಬರೆದಿದ್ದಾರೆ.
ಶ್ವಾನ ಏಂಜೆಲ್ ಸಾವಿಗೆ ಕಂಬನಿ ಮಿಡಿದ ನಟ
ವರುಣ್ ಅವರ ಈ ವಿದಾಯದ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ವರುಣ್ ಧವನ್ ಅವರಿಗೆ ಆದ ನಷ್ಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಮೌನಿ ರಾಯ್, ಮೃನಾಲ್ ಠಾಕೂರ್ ಸೇರಿದಂತೆ ಅನೇಕರು ವರುಣ್ ಪೋಸ್ಟ್‌ಗೆ ಕಾಮೆಂಟ್ ಮಾಡಿ ವಿಷಾದ ಸೂಚಿಸಿದ್ದಾರೆ. ವರುಣ್ ಅವರು ತಮಗೆ ಶ್ವಾನಗಳ ಮೇಲಿರುವ ಪ್ರೀತಿಯನ್ನು ಈ ಹಿಂದೆಯೂ ಆಗಾಗ ತೋರಿಸಿಕೊಂಡಿದ್ದಾರೆ.
ಮುದ್ದಿನ ಶ್ವಾನದ ಜೊತೆ ಧವನ್ ಪತ್ನಿ ನತಾಶ
ಇತ್ತೀಚೆಗೆ ಸೆಲೆಬ್ರಿಟಿ ಚಾಟ್ ಶೋ, ಟೂ ಮಚ್ ವಿತ್ ಕಾಜಲ್ & ಟ್ವಿಂಕಲ್ ಶೋಗೆ ಆಲಿಯಾ ಜೊತೆ ಆಗಮಿಸಿದ ವರುಣ್ ಧವನ್ ತನಗೆ ತನ್ನ ಮಗಳು ಲಾರಾ ಹಾಗೂ ತನ್ನ ಶ್ವಾನದ ಮೇಲೆ ಒಂದೇ ರೀತಿಯ ಪ್ರೀತಿ ಇದೆ ಎಂದು ಹೇಳಿದ್ದರು. ತಾನು ತನ್ನ ಶ್ವಾನ ಜೋಯ್‌ಗಾಗಿ ಏನು ಬೇಕಾದರು ಮಾಡುವೆ ಎಂದಿದ್ದರು. ಈ ವೇಳೆ ಟ್ವಿಂಕಲ್ ಖನ್ನಾ ಅವರು ಮಗಳ ಬಗ್ಗೆ ಹೇಗೆ ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ವರುಣ್ ನಾನು ಮಗಳು ಹಾಗೂ ಶ್ವಾನವನ್ನು ಬೇರೆ ಬೇರೆ ಎಂದು ನೋಡುತ್ತಿಲ್ಲ ಅವರಿಬ್ಬರ ಮಧ್ಯೆ ಬೇಧ ಮಾಡುತ್ತಿಲ್ಲ.
ಜೋಯಿ ಜೊತೆ ವರುಣ್ ಧವನ್
ನಾನು ಶ್ವಾನವನ್ನು ಹೊಂದಿರುವುದು ಇದೇ ಮೊದಲು ಆದ್ದರಿಂದ ಅದರೊಂದಿಗೆ ನನಗಿರುವ ಬಾಂಧವ್ಯ ಬೇರೆಯೇ ಮಟ್ಟದಲ್ಲಿದೆ. ನಾನು ಅದನ್ನು ಬೇರೆ ಜೀವಿಯೊಂದಿಗೆ ಹೊಂದಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದರು. ತನ್ನ ಮುದ್ದಿನ ನಾಯಿ ಜೋಯಿ ಆಗಮನವು ಒಬ್ಬ ವ್ಯಕ್ತಿಯಾಗಿ ತನ್ನ ಮೇಲೆ ಬೀರಿದ ಪ್ರಭಾವದ ಬಗ್ಗೆಯೂ ಅವರು ಹೇಳಿದ್ದರು. ಜೋಯಿ ಬಂದ ಮೇಲೆ ನಾನು ವೈಯಕ್ತಿಕವಾಗಿಯೂ ಸಾಕಷ್ಟು ಬದಲಾಗಿದ್ದೇನೆ ಎಂದು ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಂಕಲ್ ಖನ್ನಾ ಹಾಗಾದರೆ ನೀವು ಮಗಳು ಹುಟ್ಟಿದಾಗ ಬದಲಾಗಿಲ್ಲ, ನಾಯಿಮರಿಗಾಗಿ ಬದಲಾಗಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಜೊತೆಗಿದ್ದ ನಟಿ ಆಲಿಯಾ ಪ್ರತಿಕ್ರಿಯಿಸಿದ್ದು, ಅವರ ಮನೆಗೆ ಮಗಳಿಗಿಂತ ಮೊದಲು ಶ್ವಾನ ಜೋಯ್ ಬಂದಿತ್ತು ಎಂದು ಪ್ರತಿಕ್ರಿಯಿಸಿದ್ದರು.
ನೋವು ನೀಡುವ ಶ್ವಾನಗಳ ಸಾವು
ಶ್ವಾನವೊಂದು ಜೊತೆಗಿದ್ದರೆ ಬೇರೆ ಸ್ನೇಹಿತರು ಬೇಡ. ಶ್ವಾನಗಳು ಮನುಷ್ಯನ ನೆಚ್ಚಿನ ಗೆಳೆಯರು ಯಾವುದೇ ನಿರೀಕ್ಷೆ ಇಲ್ಲದೇ ತಮ್ಮ ಒಡೆಯನನ್ನು ಪ್ರೀತಿಸುವ ಶ್ವಾನಗಳು ತಮ್ಮ ಒಡೆಯನ ರಕ್ಷಿಸುವುದಕ್ಕೆ ಹೋಗಿ ಪ್ರಾಣವನ್ನೇ ಬಿಟ್ಟ ನಿದರ್ಶನಗಳಿವೆ. ಬಹುತೇಕರು ಶ್ವಾನಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡುತ್ತಾರೆ. ಮಕ್ಕಳಿಗಿಂತ ಹೆಚ್ಚು ಅವುಗಳನ್ನು ಪ್ರೀತಿ ಮಾಡುತ್ತಾರೆ. ಹೀಗಿರುವಾಗ ಅವುಗಳ ಹಠಾತ್ ಸಾವು ಅನೇಕರಿಗೆ ತಡೆದುಕೊಳ್ಳಲಾಗದ ನೋವು ನೀಡುತ್ತದೆ. ಶ್ವಾನಗಳ ಸಾವಿನ ನೋವಿನಿಂದ ಹೊರಬರಲಾಗದೇ ಕೆಲವರು ಸಾವಿಗೆ ಶರಣಾದ ನಿದರ್ಶನಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

