ಮಲ್ಲಿಗೆ ಹಿಡಿದು ಬೆಡ್ ಮೇಲೆ ಉರುಳಾಡುತ್ತಾ ಹಾರ್ಟ್‌ಬೀಟ್ ಹೆಚ್ಚಿಸಿದ ತನಿಷಾ ಕುಪ್ಪಂಡ
ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಆರೆಂಜ್ ಸೀರೆ ಧರಿಸಿ, ಮಲ್ಲಿಗೆ ಹಿಡಿದು ಮಾಡಿರುವ ಆಕರ್ಷಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ಇಷ್ಟವಾಗಲು ನಾವೇನು ಹಣ ಅಲ್ಲ' ಎಂಬ ಶೀರ್ಷಿಕೆಯ ಈ ವಿಡಿಯೋ 1 ಮಿಲಿಯನ್ ವೀಕ್ಷಣೆ ಪಡೆದು ವೈರಲ್ ಆಗಿದೆ.

ಬೆಂಕಿ ತನಿಷಾ ಕುಪ್ಪಂಡ
ಸ್ಯಾಂಡಲ್‌ವುಡ್ ನಟಿ, ಬೆಂಕಿ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು, ಯಾವುದೇ ಫಿಲ್ಟರ್ ಇಲ್ಲದೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜಗತ್ತಿನಲ್ಲಿ ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಅರ್ಥವುಳ್ಳ ಸಾಲುಗಳೊಂದಿಗೆ ಮಧುರವಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಆಕರ್ಷಕ ವಿಡಿಯೋ ಶೂಟ್
ಆರೆಂಜ್ ಕಲರ್ ಸೀರೆ ಧರಿಸಿ, ಕೈತುಂಬಾ ಬಳೆ, ಕಾಲುಗಳಿಗೆ ಕಾಲ್ಗೆಜ್ಜೆ ಹಾಕಿಕೊಂಡು ಕೈಗಳಲ್ಲಿ ಮಲ್ಲಿಗೆ ಹಿಡಿದು ಬೆಡ್ ಮೇಲೆ ಉರುಳಾಡಿದ್ದಾರೆ. ಕೈಯಲ್ಲಿನ ಮಲ್ಲಿಗೆಯನ್ನು ಮೋಹಿಸುತ್ತಾ ಆಕರ್ಷಕ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ತನಿಷ್ಕಾ ಅವರ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಮೋಹದ ಕಾಡ್ಗಿಚ್ಚಿಗೆ ಕಾರಣವಾಗಿದೆ.
ನಾವೇನು ಹಣ
ಈ ಪ್ರಪಂಚದಲ್ಲಿ ಎಲ್ಲರೂ ಇಷ್ಟಪಡೋ ಒಂದೇ ಒಂದು ವಸ್ತು ಅಂದ್ರೆ ಅದು ಹಣ. ಶ್ರೀಮಂತನಿಂದ ಹಿಡಿದು ಬಡವನವರೆಗೂ ಎಲ್ಲರಿಗೂ ಹಣದ ಮೇಲೆ ಅತಿಯಾದ ವ್ಯಾಮೋಹ ಇರುತ್ತದೆ. ಹಾಗಾಗಿ ಜಗತ್ತಿನಲ್ಲಿ ಹಣ ಅತ್ಯಂತ ಆಕರ್ಷಕವಾದ ವಸ್ತು ಆಗಿದೆ. ಇದೀಗ ತಮ್ಮ ಈ ರಂಜನೀಯ ವಿಡಿಯೋಗೆ ತನಿಷಾ ಕುಪ್ಪಂಡ, ಎಲ್ಲರಿಗೂ ಇಷ್ಟವಾಗಲು ನಾವೇನು ಹಣ ಅಲ್ಲ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
1ಮಿಲಿಯುನ್ ವ್ಯೂವ್
ಇಲ್ಲಿಯವರೆಗೆ ಈ ವಿಡಿಯೋಗೆ 10 ಲಕ್ಷಕ್ಕೂ ಅಧಿಕ ವ್ಯೂವ್, 29 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋ ನೋಡಿದ ನಟಿಯ ಅಭಿಮಾನಿಗಳು, ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ. ನಿಮಗೊಂದು ಬ್ಯೂಟಿಫುಲ್ ಸೆಲ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಬಹುತೇಕರು ಕಮೆಂಟ್ ಬಾಕ್ಸ್‌ನಲ್ಲಿ ನಟಿಗಾಗಿ ರೆಡ್ ಹಾರ್ಟ್ ಎಮೋಜಿ ಕಳುಹಿಸುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
ನಟಿ, ಉದ್ಯಮಿ, ನಿರ್ಮಾಪಕಿ ತನಿಷಾ ಕುಪ್ಪಂಡ
ತನಿಷಾ ಕುಪ್ಪಂಡ ಕಲಾವಿದೆ ಜೊತೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, 100ಕ್ಕೂ ಹೆಚ್ಚು ದಿನಗಳನ್ನು ದೊಡ್ಮನೆಯಲ್ಲಿ ಕಳೆದಿದ್ದರು. ಪೆಂಟಗನ್, ಉಂಡೆನಾಮ, ಪೆನ್‌ಡ್ರೈವ್ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ತನಿಷಾ ನಟಿಸಿದ್ದಾರೆ. ಇದರ ಜೊತೆಯಲ್ಲಿಯೂ ತನಿಷಾ ನಿರ್ಮಾಪಕಿಯೂ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

