ಬಿಗ್‌ಬಾಸ್‌ ನಂತರ ತಮ್ಮ ಸಿನಿ ಬದುಕಿನಲ್ಲಿ ಆದ ಬದಲಾವಣೆಗಳು, ಹೆಚ್ಚಾಗಿ ಪೊಲೀಸ್ ಪಾತ್ರಗಳು ಸಿಗುತ್ತಿರುವುದು ಹಾಗೂ ನಟಿ ಮಾಲಾಶ್ರೀ ಅವರಿಗೆ ತಮ್ಮನ್ನು ಹೋಲಿಸುವುದರ ಬಗ್ಗೆ ನಟಿ ತನಿಶಾ ಕುಪ್ಪಂಡ ಮಾತನಾಡಿದ್ದಾರೆ. ಜೊತೆಗೆ, ವರ್ತೂರ್ ಸಂತೋಷ್ ಜೊತೆಗಿನ ಗಾಸಿಪ್ ಮತ್ತು ತಮ್ಮ ಮದುವೆಯ ಯೋಚನೆಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

1.ಬಿಗ್‌ಬಾಸ್‌ ನಂತರ ನಿಮ್ಮ ಜೀವನದಲ್ಲಿ ಆದ ಬದಲಾವಣೆಗಳೇನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾಗಳ ಆಯ್ಕೆಯಲ್ಲಿ ಸ್ಪಷ್ಟತೆ ಸಿಕ್ಕಿದೆ. ನಮಗೆ ಸಿಗೋ ಜನರ ಪ್ರೀತಿ, ಅಭಿಮಾನವನ್ನು ಸೂಕ್ತವಾಗಿ ಬಳಸಿಕೊಂಡರೆ ಬದಲಾವಣೆ ಖಂಡಿತ.

2.ಎಷ್ಟು ಚಿತ್ರಗಳಲ್ಲಿ ನಟಿಸಿದ್ದೀರಿ?

ಎಂಟತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಎರಡ್ಮೂರು ಚಿತ್ರಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದೇನೆ. ಇತ್ತೀಚೆಗೆ ಮೂರು ಚಿತ್ರಗಳು ತೆರೆಗೆ ಬಂದಿವೆ.

3.ಯಾವ ರೀತಿ ಪಾತ್ರಗಳು ನಿಮಗೆ ಬರುತ್ತಿವೆ?

ಪೊಲೀಸ್‌ ಪಾತ್ರಗಳೇ ಹೆಚ್ಚು ಬರುತ್ತಿವೆ. ಇದರ ಜೊತೆಗೆ ವಿಶೇಷ ಹಾಡು ಮತ್ತು ಗ್ಲಾರ್‌ ಪಾತ್ರಗಳೇ ನನ್ನ ಹುಡುಕಿಕೊಂಡು ಬರುತ್ತಿವೆ.

4.ನಿಮ್ಮನ್ನು ಯಾವ ರೀತಿ ಮೆಚ್ಚಿಕೊಳ್ಳುತ್ತಿದ್ದಾರೆ?

ಪೊಲೀಸ್‌, ಆ್ಯಕ್ಷನ್‌ ಪಾತ್ರಗಳಲ್ಲಿ ನನ್ನ ನೋಡಿ ಮಾಲಾಶ್ರೀ ಅವರಿಗೆ ಕಂಪೈರ್‌ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ‘ಪೆನ್‌ ಡ್ರೈವ್‌’ ಹಾಗೂ ‘ಶೇರ್‌’ ಚಿತ್ರಗಳಲ್ಲಿ ನಾನು ಮಾಡಿದ ಪಾತ್ರಗಳು. ಮಾಲಾಶ್ರೀ ಅವರು ಎಷ್ಟು ದೊಡ್ಡ ನಟಿ ಅಂತ ಗೊತ್ತಿದೆ. ತಮಾಶೆಗೆ ಅವರ ಜೊತೆಗೆ ಕಂಪೈರ್‌ ಮಾಡಿದರೂ ನಾನು ಹ್ಯಾಪಿ.

5.ನಟನೆ, ನಿರ್ಮಾಣ, ಹೋಟೆಲ್‌ ಬ್ಯುಸಿನೆಸ್‌... ಈ ಮೂರರ ಅನುಭವ ಹೇಗಿದೆ?

ಆರ್ಟಿಸ್ಟ್‌ ಆಗಿದ್ದಾಗ ಒತ್ತಡಗಳು ಕಡಿಮೆ. ಆಗ ಫ್ರೀ ಟೈಮ್‌ ಇತ್ತು. ನಿರ್ಮಾಣದಲ್ಲಿ ತೊಡಗಿಸಿಕೊಂಡ ಮೇಲೆ ಫ್ರೀ ಟೈಮ್‌ ಎಲ್ಲಿದೆ ಅಂತ ಹುಡುಕುತ್ತಿದ್ದೇನೆ. ನನ್ನದೇ ಪ್ರೊಡಕ್ಷನ್‌ ಸಂಸ್ಥೆ ಮಾಡಿಕೊಂಡ ಮೇಲೆ ಹೋಟೆಲ್‌ ಮುಚ್ಚಿದೆ. ಯಾಕೆಂದರೆ ಹೋಟೆಲ್‌ಗೆ ಹೆಚ್ಚಿನ ಸಮಯ ಕೊಡಕ್ಕೆ ಆಗುತ್ತಿಲ್ಲ.

6ಸೋಷಿಯಲ್‌ ಮೀಡಿಯಾಗಳಲ್ಲಿ ವಿವಾದಗಳಲ್ಲಿ ಹೆಚ್ಚು ಸದ್ದು ಮಾಡುತ್ತೀರಲ್ಲ?

ನನ್ನ ಸೋಷಿಯಲ್‌ ಮೀಡಿಯಾ ಜೊತೆಗೆ ಬೇರೆ ಬೇರೆ ಕಲಾವಿದರ ಸೋಷಿಯಲ್‌ ಮೀಡಿಯಾ ಪೇಜ್‌ಗಳನ್ನೂ ನಾನು ಹ್ಯಾಂಡಲ್‌ ಮಾಡುತ್ತೇನೆ. ನಾನು ಯಾವ ವಿವಾದವನ್ನು ಸೃಷ್ಟಿಸಿಕೊಂಡಿಲ್ಲ. ಆದರೆ, ಕೆಟ್ಟ ಕಾಮೆಂಟ್‌ಗಳು ಹಾಕಿದಾಗ ಸಿಟ್ಟು ಬರುತ್ತದೆ. ಅದಕ್ಕೆ ರಿಯಾಕ್ಟ್‌ ಮಾಡುತ್ತೇನೆ. ಅದು ವಿವಾದವಾಗಿ ಕಾಣುತ್ತದೆ.

7.ನಿಮ್ಮನ್ನು ಕಂಡಾಗ ವರ್ತೂರ್‌ ಸಂತೋಷ್‌ ಅವರ ಹೆಸರು ಹೇಳೋದು ಯಾಕೆ?

ಅವರಿಗೆ ದುಡ್ಡಿದೆ ಅನ್ನೋ ಕಾರಣಕ್ಕೆ ನನ್ನ ಹೆಸರನ್ನು ವರ್ತೂರ್‌ ಸಂತೋಷ್‌ ಅವರ ಜೊತೆಗೆ ಸೇರಿಸಿ ಮಾತನಾಡುತ್ತಾರೆ. ಆದರೆ, ನಾನು ಯಾರ ದುಡ್ಡಿನಲ್ಲೂ ಪ್ರೊಡಕ್ಷನ್‌ ಮಾಡುತ್ತಿಲ್ಲ. ನನ್ನ ದುಡಿಮೆಯಲ್ಲೇ ನಾನು ಮಾಡುತ್ತಿದ್ದೇನೆ. ನನ್ನ ಹೆಸರು ಬಂದಾಗ ವರ್ತೂರು ಸಂತೋಷ್‌ ಅವರೂ ಕೂಡ ಕ್ಲಿಯರ್‌ ಆಗಿ ಮಾತನಾಡಬೇಕು. ಹಾಗೆ ಮಾತನಾಡದೆ ಹೋಗದೆ ಇದ್ದಿದ್ದಕ್ಕೆ ಒಂದಕ್ಕೆ ಹತ್ತು ಸೇರಿಸಿ ಗಾಸಿಪ್‌ ಹುಟ್ಟಿಸುತ್ತಾರೆ.

8.ಪ್ರೀತಿ, ಪ್ರೇಮ, ಮದುವೆ ಇತ್ಯಾದಿಗಳ ಬಗ್ಗೆ?

ಜೀವನದಲ್ಲಿ ತುಂಬಾ ಏರುಪೇರುಗಳನ್ನು ನೋಡಿರುವ ವ್ಯಕ್ತಿ ನಾನು. ಹೀಗಾಗಿ ಮದುವೆ, ಪ್ರೀತಿ ಬಗ್ಗೆ ಗಮನ ಕೊಡುತ್ತಿಲ್ಲ. ನನ್ನ ಲೈಫ್‌ನಲ್ಲಿ ಬರುವವರು ನನ್ನನ್ನು ನನಗಿಂತ ಒಂಚೂರು ಜಾಸ್ತಿ ಚೆನ್ನಾಗಿ ನೋಡಿಕೊಳ್ಳುವ ಜೊತೆಗೆ ಜೀವನದಲ್ಲಿ ಚೆನ್ನಾಗಿ ಇರೋಣ ಅನ್ನೋ ಹುಡುಗ ಸಿಗಬೇಕು.