MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ವಾರಣಾಸಿ ಸಿನಿಮಾ ಶೂಟ್‌: ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು

ವಾರಣಾಸಿ ಸಿನಿಮಾ ಶೂಟ್‌: ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು

ಏಳು ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ, ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ಅವರು ನಿರ್ದೇಶಕರಿಗೆ ಒಂದು ಮನವಿ ಮಾಡಿದ್ದರಂತೆ, ಪ್ರಿಯಾಂಕಾ ಮನವಿಯ ಪರಿಣಾಮ ಮಹೇಶ್ ಬಾಬು ಮೇಲಾಯ್ತು ಹಾಗಿದ್ದರೆ ಅದೇನು?

2 Min read
Author : Anusha Kb
Published : Feb 04 2026, 08:39 PM IST
Share this Photo Gallery
  • FB
  • TW
  • Linkdin
  • Whatsapp
16
ವಾರಣಾಸಿ ನಿರ್ದೇಶಕರಿಗೆ ಪ್ರಿಯಾಂಕಾ ಮನವಿ
Image Credit : Instagram

ವಾರಣಾಸಿ ನಿರ್ದೇಶಕರಿಗೆ ಪ್ರಿಯಾಂಕಾ ಮನವಿ

ನಟಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ಏಳು ವರ್ಷಗಳ ನಂತರ ತಮ್ಮ ಮುಂಬರುವ ಚಿತ್ರ 'ವಾರಣಾಸಿ' ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳಲಿದ್ದಾರೆ. ಹೀಗಿರುವಾಗ ಅವರು ಈ ಸಿನಿಮಾಗೆ ಓಕೆ ಎಂದು ಹೇಳುವ ಮೊದಲು ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಬಳಿ ಒಂದು ಷರತ್ತು ವಿಧಿಸಿದ್ದರಂತೆ. ಹೌದು ಸಿನಿಮಾಬ್ಲೆಂಡ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಈ ವಿಚಾರ ಹೇಳಿದ್ದಾರೆ. ಆ ಷರತ್ತಿಗೆ ಓಕೆ ಅಂದ ನಂತರವೇ ಅವರು ಈ ಸಿನಿಮಾಗೆ ಒಪ್ಪಿಕೊಂಡರಂತೆ ಹಾಗಾದರೆ ಅವರು ವಿಧಿಸಿದ ಷರತ್ತು ಏನು?

26
ಪ್ರಿಯಾಂಕಾ ಮನವಿಯಿಂದ ಮಹೇಶ್ ಬಾಬುಗೆ ತೊಳಲಾಟ
Image Credit : youtube/@ColliderInterviews

ಪ್ರಿಯಾಂಕಾ ಮನವಿಯಿಂದ ಮಹೇಶ್ ಬಾಬುಗೆ ತೊಳಲಾಟ

ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಒಂದು ಡಾನ್ಸ್ ನಂಬರ್ ಮಾಡುವುದಕ್ಕೆ ಎಸ್ಎಸ್ ರಾಜಮೌಳಿ ಅವರ ಬಳಿ ಮನವಿ ಮಾಡಿದರಂತೆ ಸಿನಿಮಾಬ್ಲೆಂಡ್ ಜೊತೆ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ, ಕಳೆದ ಆರು ವರ್ಷಗಳಿಂದ ನಾನು ಒಂದೂ ಭಾರತೀಯ ಸಿನಿಮಾ ಮಾಡಿಲ್ಲ, ಹೀಗಾಗಿ ನಾನು ಅವರಿಗೆ ಕರೆ ಮಾಡಿ ಈ ವಿಚಾರ ಹೇಳಿದಾಗ ಅವರು ಹೇಗೆ ಹೇಳಿದರು ಎಂದರೆ ಈ ಮಹಿಳಾ ಪಾತ್ರವೂ ಬಹಳ ಕೂಲ್ ಆಗಿರುತ್ತದೆ. ನೀವು ಅದನ್ನು ಮಾಡಬೇಕು ಎಂದರು. ನಾನು ಅದೇನೆ ಇರಲಿ ನನಗೆ ಬೇರೇನು ಮನವಿಗಳಿಲ್ಲ, ನೀವು ನಾನು ಡಾನ್ಸ್ ಮಾಡೋ ತರ ಮಾಡಬಹುದೇ ದಯವಿಟ್ಟು, ಏಕೆಂದರೆ ನಾನು ಡಾನ್ಸ್ ಮಾಡದೇ ತುಂಬಾ ವರ್ಷಗಳಾಯ್ತು ಎಂದು ಕೇಳಿದೆ. ಆದರೆ ನಂತರ ನಾನು ಹಾಗೇ ಕೇಳಬಾರದಿತ್ತು ಏಕೆಂದರೆ ನಾನೊಬ್ಬಳೇ ಅಲ್ಲ ನಾವು ಡಾನ್ಸ್ ಮಾಡಬೇಕು, ಹೀಗಾಗಿ ಪಾಪದ ಮಹೇಶ್ ಬಾಬು ಅವರು ಮಾತ್ರ ಇದೆಲ್ಲವೂ ನಿನ್ನಿಂದಾಗಿ ನಿನ್ನಿಂದಾಗಿ, ನಿನ್ನಿಂದಾಗಿ ನಾನು ಕೂಡ ಡಾನ್ಸ್ ಮಾಡಬೇಕು ಎಂದು ಹೇಳಿದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

Related Articles

Related image1
ದೀಪಿಕಾ ಜಾಗಕ್ಕೆ ಬಂದ್ರಾ ಪ್ರಿಯಾಂಕಾ ಚೋಪ್ರಾ? ಪ್ರಭಾಸ್ ಎದುರು ನಟಿಸಲು 'ಪಿಸಿ' ಅಸ್ತು ಅಂದ್ರಾ?
Related image2
ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಜೋಡಿ ಡಿವೋರ್ಸ್ ಆಗದಿರಲು ಅದೊಂದೇ ಕಾರಣವಂತೆ.. ಫೈನಲೀ ಗೊತ್ತಾಯ್ತಲ್ಲ!
36
ನೃತ್ಯ ಮಾಡಲು ಬಯಸಿದ್ದ ಪಿಗ್ಗಿ
Image Credit : Asianet News

ನೃತ್ಯ ಮಾಡಲು ಬಯಸಿದ್ದ ಪಿಗ್ಗಿ

ಇದು ತುಂಬಾ ಭಾವನಾತ್ಮಕವಾಗಿದೆ. ಮತ್ತು, ನಾವು ಈಗಾಗಲೇ ಅದಕ್ಕಾಗಿ ಒಂದು ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ, ಮತ್ತು ಅದು ನಮ್ಮ ಮನಸ್ಸಿನಲ್ಲಿ ನಿರಂತರವಾಗಿ ಕೇಳಿಬರುತ್ತಿದೆ. ಮತ್ತು ಪ್ರಿಯಾಂಕ ಅದನ್ನು ಯಾವಾಗಲೂ ಹಾಡುತ್ತಲೇ ಇರುತ್ತಾಳೆ. ಮತ್ತು, ಆ ಹಾಡನ್ನು ಅವಳು ನೃತ್ಯ ಮಾಡಲು ಬಯಸಿದ್ದರಿಂದ ಅವರು ಅವಳನ್ನು ನೃತ್ಯ ಮಾಡಿಸಿದರು ಎಂದು ಮಹೇಶ್ ಬಾಬು ಹೇಳಿದ್ದಾರೆ.

46
ಅಭಿಮಾನಿಗಳ ಕಾಮೆಂಟ್ ಏನು?
Image Credit : youtube/@ScreenRantPlus

ಅಭಿಮಾನಿಗಳ ಕಾಮೆಂಟ್ ಏನು?

ಚಿತ್ರದಲ್ಲಿ ಪ್ರಿಯಾಂಕಾ ಮತ್ತು ಮಹೇಶ್ ಬಾಬು ಅವರ ನೃತ್ಯಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ ಒಬ್ಬರು ಪ್ರಿಯಾಂಕಾ ಮತ್ತು ಮಹೇಶ್ ಬಾಬು ನೃತ್ಯವು ಸಂಪೂರ್ಣ ಸಿನಿಮಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಾಡಿನ ಒಂದು ನೋಟವನ್ನು ನಮಗೆ ಈಗಾಗಲೇ ನೀಡಿ ಎಂದು ಬರೆದಿದ್ದಾರೆ. ಮತ್ತೊಬ್ಬರು, ಈ ಹಾಡನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

56
 ಮಂದಾಕಿನಿ ಪಾತ್ರದಲ್ಲಿ ಪ್ರಿಯಾಂಕಾ
Image Credit : varanasi movie

ಮಂದಾಕಿನಿ ಪಾತ್ರದಲ್ಲಿ ಪ್ರಿಯಾಂಕಾ

ಎಸ್.ಎಸ್. ರಾಜಮೌಳಿ(SS Rajamouli) ನಿರ್ದೇಶನದ ಈ ಚಿತ್ರವು 2022 ರಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್.ಟಿ.ಆರ್ ಅಭಿನಯದ ಆರ್.ಆರ್.ಆರ್ ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನ ನಂತರದ ಮತ್ತೊಂದು ಯೋಜನೆಯಾಗಿದೆ. ಈ ಚಿತ್ರವು ಪ್ರಿಯಾಂಕಾ ಅವರಿಗೆ ಭಾರತೀಯ ಸಿನಿಮಾಗೆ ರೀ ಎಂಟ್ರಿ ನೀಡಿದೆ. ಈ ಸಿನಿಮಾದಲ್ಲಿ ಅವರು ಮಂದಾಕಿನಿ ಪಾತ್ರದಲ್ಲಿ ಆಕ್ಷನ್-ಪ್ಯಾಕ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಮಹೇಶ್ ಬಾಬು(Mahesh Babu) ಮತ್ತು ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್(Prithviraj Sukumaran) ನಟಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಕೇವಲ 15 ದಿನದಲ್ಲಿ 807 ಜನ ನಾಪತ್ತೆ: ಬೆಚ್ಚಿ ಬೀಳಿಸಿದ ವರದಿ

66
ಟೈಮ್ ಟ್ರಾವೆಲ್ ಕಥೆ ಆಧಾರಿತ ಸಿನಿಮಾ
Image Credit : Asianet News

ಟೈಮ್ ಟ್ರಾವೆಲ್ ಕಥೆ ಆಧಾರಿತ ಸಿನಿಮಾ

ಈ ಚಿತ್ರವು ಕಾಲಯಾನದ ಸುತ್ತ(time travel) ಕೇಂದ್ರೀಕೃತವಾಗಿದ್ದು, ಇದು ಆಕ್ಷನ್ ಹಾಗೂ ಸಾಹಸವನ್ನು ಒಳಗೊಂಡ ಸಿನಿಮಾವಾಗಿದೆ. ಚಿತ್ರದ ಕಥಾಹಂದರದ ಬಗ್ಗೆ ಅಭಿಮಾನಿಗಳು ಕೆಲ ಸಿದ್ಧಾಂತಗಳನ್ನು ಮಂಡಿಸುತ್ತಿದ್ದಾರೆ, ಆದರೆ ಅದನ್ನು ನಿರ್ದೇಶಕರು ರಹಸ್ಯವಾಗಿಟ್ಟಿದ್ದಾರೆ. ಚಿತ್ರದ ಒಂದು ಸನ್ನಿವೇಶದಲ್ಲಿ ಮಹೇಶ್ ಬಾಬು ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕರು ದೃಢಪಡಿಸಿದ್ದಾರೆ ಇದು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಚಿತ್ರವು ಏಪ್ರಿಲ್ 2027 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಪ್ರಿಯಾಂಕಾ ಚೋಪ್ರಾ
ಮಹೇಶ್ ಬಾಬು
ಟಾಲಿವುಡ್

Latest Videos
Recommended Stories
Recommended image1
Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
Recommended image2
Serial BTS: ಕೆನ್ನೆಗೆ ಹೊಡೆಯುವ ದೃಶ್ಯಕ್ಕೆ ಎಷ್ಟೊಂದು ಸರ್ಕಸ್​ ಮಾಡ್ತಾರೆ ನೋಡಿ ಸೀರಿಯಲ್​ಗಳಲ್ಲಿ!
Recommended image3
ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ತರೇಹವಾರಿ ಕಾಮೆಂಟ್ಸ್‌​
Related Stories
Recommended image1
ದೀಪಿಕಾ ಜಾಗಕ್ಕೆ ಬಂದ್ರಾ ಪ್ರಿಯಾಂಕಾ ಚೋಪ್ರಾ? ಪ್ರಭಾಸ್ ಎದುರು ನಟಿಸಲು 'ಪಿಸಿ' ಅಸ್ತು ಅಂದ್ರಾ?
Recommended image2
ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಜೋಡಿ ಡಿವೋರ್ಸ್ ಆಗದಿರಲು ಅದೊಂದೇ ಕಾರಣವಂತೆ.. ಫೈನಲೀ ಗೊತ್ತಾಯ್ತಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved