ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಮುಂಗಡ ಬುಕಿಂಗ್ನಲ್ಲಿ 80 ಕೋಟಿ ರೂ. ದಾಟಿರುವ ಈ ಚಿತ್ರ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಅಭಿನಯದ ಜೈಲರ್ 2 (Jailer 2) ಸಿನಿಮಾ ರಿಲೀಸ್ ಆಗಿದೆ. ತಲೈವಾ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ಕಂಡು ಫುಲ್ ಖುಷಿಯಾಗಿದ್ದಾರೆ. ವಿಶ್ವದಾದ್ಯಂತ ಜೈಲರ್ 2 ಸಿನಿಮಾ ತೆರೆಗೆ ಅಪ್ಪಳಿಸಿದೆ. 2023ರ ಬ್ಲಾಕ್ ಬಸ್ಟರ್ ಜೈಲರ್ ಆರಂಭಿಕ ದಿನದ ಕಲೆಕ್ಷನ್ ಮೀರಿಸುವ ಗುರಿ ಹೊಂದಿದೆ. ಬೆನ್ನಲ್ಲೇ, ಮೊದಲ ದಿನದ ಕಲೆಕ್ಷನ್ ಬಗ್ಗೆ ಜೋರಾಗಿ ಮಾತುಗಳು ಕೇಳಿ ಬರುತ್ತಿವೆ.
ಮೊದಲ ದಿನದ ಕಲೆಕ್ಷನ್ ಎಷ್ಟು?
ವ್ಯಾಪಾರ ವರದಿಗಳ ಪ್ರಕಾರ.. ಅಕ್ಟೋಬರ್ 14 ರ ಅಂತ್ಯದ ವೇಳೆಗೆ ಜೈಲರ್ 2 ವಿಶ್ವಾದ್ಯಂತ ಮುಂಗಡ ಟಿಕೆಟ್ ಮಾರಾಟದಲ್ಲಿ ಈಗಾಗಲೇ 80 ಕೋಟಿ ರೂಪಾಯಿ ದಾಟಿದೆ. ಅಡ್ವಾನ್ಸ್ ಬುಕಿಂಗ್ನಲ್ಲಿ ಭಾರತದಲ್ಲಿ ದಾಖಲೆ ಬೆದಿದೆ. ಮೊದಲ ದಿನದ ಸಂಜೆ 4 ಗಂಟೆಯ ಹೊತ್ತಿಗೆ.. ಜೈಲರ್ 2 ಭಾರತೀಯ ಬಾಕ್ಸ್ ಆಫೀಸ್ನಲ್ಲಿ 27.77 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಆದರೆ ಜೈಲರ್ ಮೊದಲ ಭಾಗದ ಮೊದಲ ದಿನದ ಗಳಿಕೆಯನ್ನ ಮುರಿಯಲು ಸಾಧ್ಯವಾಗಲಿಲ್ಲ.
ಜೈಲರ್ 2 vs ಜೈಲರ್ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
| ಬಾಕ್ಸ್ ಆಫೀಸ್ ಮೆಟ್ರಿಕ್ | ಜೈಲರ್ 2 | ಜೈಲರ್ (2023) |
| ಭಾರತದ ನಿವ್ವಳ ಸಂಗ್ರಹ | ಮೊದಲ ದಿನ ಸಂಜೆ 4 ಗಂಟೆಯ ವೇಳೆಗೆ 27.77 ಕೋಟಿ ರೂ. | ಮೊದಲ ದಿನ 29.39 ಕೋಟಿ ರೂ. |
| ಭಾರತದ ಒಟ್ಟು ಸಂಗ್ರಹ | ಅದೇ ಅವಧಿಗೆ ಲಭ್ಯವಿಲ್ಲ. | ಮೊದಲ ದಿನ 34.68 ಕೋಟಿ ರೂ |
| ವಿಶ್ವಾದ್ಯಂತ ಆರಂಭಿಕ ದಿನದ ಒಟ್ಟು ಗಳಿಕೆ | ಅಂತಿಮ ಅಂಕಿ ಅಂಶ ನಿರೀಕ್ಷಿಸಲಾಗಿದೆ | ಸರಿಸುಮಾರು 96.36 ಕೋಟಿ ರೂ |
ಪ್ರಸ್ತುತ ಜೈಲರ್ 2 ರ ಗಳಿಕೆ 27.77 ಕೋಟಿ ರೂಪಾಯಿ (ಸಂಜೆ 4 ಗಂಟೆವರೆಗೆ ಮಾತ್ರ) ಎಂದು ಅಂದಾಜಿಸಲಾಗಿದೆ. ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಜೈಲರ್ 2 ಚಿತ್ರವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಜೈಲರ್ 2 ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ..ಮೊದಲ ದಿನದ ಕಲೆಕ್ಷನ್ 45.70 ಕೋಟಿ ರೂಪಾಯಿ ಆಗಿದೆ. ತಮಿಳು, ತೆಲಗು, ಹಿಂದಿ ಹಾಗೂ ಕನ್ನಡದಲ್ಲಿ 45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳಿನಲ್ಲಿ 34.7 ಕೋಟಿ ಹಣ ಗಳಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕೃತ ವರದಿ ಇನ್ನಷ್ಟೇ ಬರಬೇಕಿದೆ.
ರಜನಿ ಫ್ಯಾನ್ಸ್ ಇಂದು ಬೆಳಗಿನಿಂದಲೇ ಚಿತ್ರಮಂದಿರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು FDFS ಸಿನಿಮಾ ನೋಡಲು ಅವಕಾಶ ಪಡೆದರು. ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಬೆಂಬಲ ಸೂಚಿಸಲು ಮೊದಲ ಪ್ರದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ. ಜೈಲರ್ 2 ಈ ವರ್ಷದ ಅತಿದೊಡ್ಡ ಬ್ಲಾಕ್ಬಸ್ಟರ್ ಸಿನಿಮಾವಾಗಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಏಕೆಂದರೆ 2026 ರಿಂದ ಇಲ್ಲಿವರೆಗೆ ಯಾವುದೇ ತಮಿಳು ಸಿನಿಮಾ ಬ್ಲಾಕ್ ಬಸ್ಟರ್ ಆಗಿಲ್ಲ. 2026ರಲ್ಲಿನ ಅತಿದೊಡ್ಡ ಹಿಟ್ ಸಿನಿಮಾ ಎಂದರೆ ಅದು ವಿಜಯ್ ಅವರ ಜನ ನಾಯಗನ್ ಮಾತ್ರ. ಅನಂತರ ಬಿಡುಗಡೆಯಾದ ಸೂರ್ಯ ಅಭಿನಯದ ಕರುಪ್ಪು. ಆದರೆ ಆ ಎರಡೂ ಚಿತ್ರಗಳು 350 ಕೋಟಿ ರೂಪಾಯಿ ಗಳಿಸಲು ಸಾಧ್ಯವಾಗಲಿಲ್ಲ.


