MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ

ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ

ಚೀನಾದ ಝೋ ಯುವಾನ್ ಎಂಬ ಮಹಿಳೆ, ಪುರುಷರನ್ನು ಆಕರ್ಷಿಸುವುದು ಹೇಗೆ ಎಂಬ ಆನ್‌ಲೈನ್ ಕೋರ್ಸ್ ಮೂಲಕ ಸುಮಾರು 30 ಕೋಟಿ ರೂ. ಗಳಿಸಿದ್ದಾರೆ. ಈ ಕೋರ್ಸ್‌ಗೆ ಅಲ್ಲಿನ ಸಂಪ್ರದಾಯವಾದಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆಕೆ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದಾರೆ.

2 Min read
Author : Anusha Kb
Published : Feb 04 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
16
ಪುರುಷರನ್ನು ಆಕರ್ಷಿಸುವುದು ಹೇಗೆ?
Image Credit : Google gemini

ಪುರುಷರನ್ನು ಆಕರ್ಷಿಸುವುದು ಹೇಗೆ?

ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ವಶೀಕರಣ ಮಾಡುವುದು ಹೇಗೆ ಎಂದು ಕೆಲ ಜ್ಯೋತಿಷಿಗಳು ಜಾಹೀರಾತು ನೀಡುವುದನ್ನು ನೀವು ನೋಡಿರಬಹುದು ಕೇಳಿರಬಹುದು. ಆದರೆ ಇಲ್ಲೊಬ್ಬಳು ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಆರಂಭಿಸಿ ಅದರಿಂದಲೇ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಮಾಡಿದ್ದಾಳೆ. ಹೀಗೆ ಬರೋಬ್ಬರಿ ಆದಾಯ ಗಳಿಸಿದ ಅಕೆಗೆ ಈಗ ತನಿಖಾ ಸಂಸ್ಥೆಗಳ ವಿಚಾರಣೆ ಎದುರಾಗಿದ್ದು, ಆಕೆ ಈಗ ಸಂಕಷ್ಟದಲ್ಲಿದ್ದಾಳೆ.

26
ಝೋ ಯುವಾನ್‌ಗೆ ಈಗ ವಿಚಾರನೆ ಭೀತಿ
Image Credit : Google gemini

ಝೋ ಯುವಾನ್‌ಗೆ ಈಗ ವಿಚಾರನೆ ಭೀತಿ

ಹೌದು ಚೀನಾದ 40 ವರ್ಷದ ಮಹಿಳೆ,ಈ ಹಿಂದೆ ಬ್ಯಾಂಕಿಂಗ್ ವೃತ್ತಿಯಲ್ಲಿದ್ದು, ಬಳಿಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದ ಝೋ ಯುವಾನ್ ಎಂಬ ಮಹಿಳೆ ಈಗ ಚೀನಾದ ತನಿಖಾಧಿಕಾರಿಗಳ ವಿಚಾರಣೆ ಭೀತಿ ಎದುರಿಸುತ್ತಿದ್ದಾಳೆ. ಕೆಲ ವರದಿಗಳ ಪ್ರಕಾರ ಝೋ ಯುವಾನ್ ಪುರುಷರನ್ನು ಆಕರ್ಷಿಸಲು ಮಹಿಳೆಯರು ಮಾಡಬೇಕಾದ್ದು ಏನು ಎಂಬ ಕೋರ್ಸ್ ಮಾಡಿಯೇ ಮಿಲಿಯನ್‌ಗಟ್ಟಲೇ ಹಣ ಸಂಪಾದಿಸಿದ್ದಳು. ಆದರೆ ಸಾಮಾಜಿಕ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಆಕೆಯ ಈ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಆದೇಶಿಸಿದ ನಂತರ ಈಗ ಆಕೆಗೆ ತನಿಖೆಯ ಭೀತಿ ಎದುರಾಗಿದೆ.

Related Articles

Related image1
5 ನಿಮಿಷ ತಬ್ಬಿಕೊಂಡ ಪುರುಷನಿಗೆ 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!
Related image2
Now Playing
ಹಿಮಾಲಯವನ್ನೇ ತನ್ನ ಗಂಡನ ಮನೆ ಎಂದ ನಾರಿ: ಭಾರತ ಚೀನಾ ಗಡಿಯಲ್ಲಿ ಮಹಿಳೆ ಕಿರಿಕ್
36
ಸ್ವಯಂ ಘೋಷಿತ ಲೈಂಗಿಕ ಬುದ್ಧಿಮತ್ತೆ ಬೋಧಕಿ ಎಂದು ಬಣ್ಣಿಸಲ್ಪಟ್ಟಿದ್ದ ಝೋ
Image Credit : Google gemini

ಸ್ವಯಂ ಘೋಷಿತ ಲೈಂಗಿಕ ಬುದ್ಧಿಮತ್ತೆ ಬೋಧಕಿ ಎಂದು ಬಣ್ಣಿಸಲ್ಪಟ್ಟಿದ್ದ ಝೋ

ಅಲ್ಲಿನ ಮಾಧ್ಯಮಗಳಿಂದ ಸ್ವಯಂ ಘೋಷಿತ ಲೈಂಗಿಕ ಬುದ್ಧಿಮತ್ತೆ ಬೋಧಕ (sexual intelligence instructor) ಎಂದು ಬಣ್ಣಿಸಲ್ಪಟ್ಟಿರುವ ಝೋ ಯುವಾನ್ ವಿರುದ್ಧ ತನಿಖೆ ನಡೆಸಲು ಜನವರಿ 30 ರಂದು, ಚಾಂಗ್ಶಾದಲ್ಲಿನ ಮಾರುಕಟ್ಟೆ ನಿಯಂತ್ರಕರು ಸಾರ್ವಜನಿಕ ಭದ್ರತೆ ಮತ್ತು ಸಾಂಸ್ಕೃತಿಕ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದರು. ಹೀಗೆ ಆಕೆಯ ವಿರುದ್ಧ ತನಿಖೆಯ ಆದೇಶ ಬರುತ್ತಿದ್ದಂತೆ ಅಲ್ಲಿನ ದಿ ಸ್ಟ್ಯಾಂಡರ್ಡ್‌ ಎಂಬ ಮಾಧ್ಯಮದ ವರದಿಯ ಪ್ರಕಾರ, ಝೋ ಯುವಾನ್ ಅವರ ವೈರಲ್ ಕೋರ್ಸ್‌ಗಳು ಸಬಲೀಕರಣ, ಲೈಂಗಿಕತೆ ಮತ್ತು ಮಹಿಳೆಯರನ್ನು ವಸ್ತುವಿನಂತೆ ನೋಡುವುದರ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿವೆ.

46
ಕೋರ್ಸ್‌ಗಳ ಮಾರಾಟ ಮಾಡಿ 31 ಕೋಟಿ ಗಳಿಸಿದ ಝೋ
Image Credit : Google gemini

ಕೋರ್ಸ್‌ಗಳ ಮಾರಾಟ ಮಾಡಿ 31 ಕೋಟಿ ಗಳಿಸಿದ ಝೋ

ಝೋ ಯುವಾನ್ ಲೈಂಗಿಕ ಬುದ್ಧಿಮತ್ತೆ ಎಂದು ಕರೆಯುವ ಖಾಸಗಿ ತರಬೇತಿ ಕೋರ್ಸ್‌ನ್ನು ಆರಂಭಿಸಿದರು. ತನ್ನನ್ನು ಚೀನೀ ಲೈಂಗಿಕ ಬುದ್ಧಿಮತ್ತೆ ಮಾಸ್ಟರ್ ಎಂದು ಬ್ರಾಂಡ್ ಮಾಡಿಕೊಳ್ಳುವ ಆಕೆ, ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಕೋರ್ಸ್‌ಗಳನ್ನು ಮಾರಾಟ ಮಾಡಿದ್ದರು.

ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ 'ಪುರುಷರನ್ನು ವಶಪಡಿಸಿಕೊಳ್ಳುವ' ಉನ್ನತ ಶ್ರೇಣಿಯ ಕೋರ್ಸ್‌ಗೆ ಆಕೆ 88,000 ಯುವಾನ್ (US$12,668)ಬೆಲೆ ನಿಗದಿ ಮಾಡಿದ್ದಳು. ಕೆಲವು ವರದಿಗಳ ಪ್ರಕಾರ ಆಕೆಯ ಕೆಲ ಕೋರ್ಸ್‌ಗಳ ಬೆಲೆಗಳು 100,000 ಯುವಾನ್‌ಗಳವರೆಗೆ ಇರುತ್ತಿದ್ದವು. ಚೀನಾದ ಮಾಧ್ಯಮಗಳ ಅಂದಾಜಿನ ಪ್ರಕಾರ ಅವರ ಕಾರ್ಯಕ್ರಮಗಳು ಹತ್ತಾರು ಸಾವಿರ ಮಹಿಳೆಯರನ್ನು ಆಕರ್ಷಿಸಿ 24ರಿಂದ 27 ಮಿಲಿಯನ್ ಯುವಾನ್ ಆದಾಯವನ್ನು (ಅಂದರೆ ಸುಮಾರು ₹31 ಕೋಟಿ) ಗಳಿಸಿದವು.

56
ಕೋರ್ಸ್‌ ಶೀಘ್ರದಲ್ಲೇ ವಿವಾದ
Image Credit : Google gemini

ಕೋರ್ಸ್‌ ಶೀಘ್ರದಲ್ಲೇ ವಿವಾದ

ಆದರೆ ಆಕೆಯ ಕೋರ್ಸ್ ಶೀಘ್ರದಲ್ಲೇ ವಿವಾದಕ್ಕೀಡಾಯ್ತು. ಝೋ ಮಹಿಳೆಯರನ್ನು ಪುರುಷರ ಸಂತೋಷಕ್ಕಾಗಿ ಸಾಧನಗಳನ್ನಾಗಿ ಮಾಡುತ್ತಿದ್ದಾನೆ ಎಂದು ವಿಮರ್ಶಕರು ಆರೋಪಿಸಿದರು, ಅವರ ಕೋರ್ಸ್‌ಗಳನ್ನು ಕೆಲವರು ಪ್ರೇಯಸಿಗಳಿಗೆ ತರಬೇತಿ ಸ್ಥಳ ಎಂದು ಬಣ್ಣಿಸಿದರು. ಮತ್ತು ಇವರು, ತಮ್ಮ ಸಂಬಂಧಗಳೊಂದಿಗೆ ಹೋರಾಡುತ್ತಿರುವ ವೃತ್ತಿಪರ ಮಹಿಳೆಯರ ಅಭದ್ರತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ವ್ಯವಹಾರವು ಅಶ್ಲೀಲ ಉದ್ಯಮದ ಗಡಿಯನ್ನು ತಲುಪಬಹುದು ಎಂದು ಕೆಲವರು ಎಚ್ಚರಿಸಿದರು.

ಆದರೆ ಆಕೆ ಮಾತ್ರ ತನ್ನ ಕೆಲಸವನ್ನು ಸಮರ್ಥಿಸಿಕೊಂಡರು ಮಹಿಳೆಯರ ಸಬಲೀಕರಣವನ್ನು ಗುರಿಯಾಗಿರಿಸಿಕೊಂಡು ತನ್ನ ಕೋರ್ಸ್‌ಗಳನ್ನು ಮಾಡುವಂತೆ ಒತ್ತಾಯಿಸಿದರು. ಲೈಂಗಿಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವುದರಿಂದ ಮಹಿಳೆಯರು ನಿಷ್ಕ್ರಿಯರಾಗಿ ಉಳಿಯುವ ಬದಲು ನಿಕಟ ಸಂಬಂಧಗಳಲ್ಲಿ ಆತ್ಮವಿಶ್ವಾಸ, ಸಕ್ರಿಯ ಪಾತ್ರವನ್ನು ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ವಾದಿಸಿದ್ದರು.

66
ಆಫ್‌ಲೈನ್‌ ಮೂಲಕವೂ ಕೋರ್ಸ್ ಮಾಡುತ್ತಿದ್ದಳು
Image Credit : Google

ಆಫ್‌ಲೈನ್‌ ಮೂಲಕವೂ ಕೋರ್ಸ್ ಮಾಡುತ್ತಿದ್ದಳು

ಆಕೆ ಆನ್‌ಲೈನ್‌ನಲ್ಲಿ ಮಾತ್ರವಲ್ಲದೇ ಆಫ್‌ಲೈನ್‌ ಮೂಲಕವೂ ಕೋರ್ಸ್ ಮಾಡುತ್ತಿದ್ದಳು. ಜನವರಿ 22ರಂದು ಚೀನಾ ಮಾಧ್ಯಮಗಳ ವರದಿಯ ಪ್ರಕಾರ, ಆಕೆಯ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡಲಾಗಿದೆ. ಹಾಗೆಯೇ ಆಕೆಯ ಪ್ರವಚನ ಹಾಗೂ ಪ್ರಚಾರದ ವೀಡಿಯೋಗಳನ್ನು ಕೂಡ ತೆಗೆದು ಹಾಕಲಾಗಿದೆ. ಆಕೆ ಒಟ್ಟು 8 ಕಂಪನಿಗಳ ಜೊತೆ ಸಂಪರ್ಕ ಹೊಂದಿದ್ದಳು. ಅದರಲ್ಲಿ 5 ಕೆಲಸ ಮಾಡುತ್ತಿದ್ದು, ಆ ಕಂಪನಿಗಳು ಆರೋಗ್ಯ ಸಮಾಲೋಚನೆ, ಹಿರಿಯರ ಆರೈಕೆ, ವೈದ್ಯಕೀಯ ಸೌಂದರ್ಯಶಾಸ್ತ್ರ, ವೈದ್ಯಕೀಯ ಸಾಧನಗಳು ಮತ್ತು ವಯಸ್ಕರ ಲೈಂಗಿಕ ಆಟಿಕೆ ತಯಾರಿಕೆಗೆ ಸಂಬಂಧಿಸಿದ ಕಂಪನಿಗಳಾಗಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚೀನಾ
ಮಹಿಳೆಯರು

Latest Videos
Recommended Stories
Recommended image1
Sushma K Rao: ಡಿವೋರ್ಸ್​ ಆಗಿದ್ದು, ಮರು ಮದ್ವೆಯಾಗಿದ್ದು ಟಾಂ ಟಾಂ ಮಾಡಬೇಕಿತ್ತಾ? ಏನಿದು ಕೆಟ್ಟ ಮನಸ್ಥಿತಿ?
Recommended image2
ಮದುವೆ ಸಾಬೀತಿಗೆ ಪ್ರಮಾಣಪತ್ರ ಸಾಕಾಗಲ್ಲ: ಡಿವೋರ್ಸ್ ಕುರಿತೂ ಸುಪ್ರೀಂ ​ ಮಹತ್ವದ ತೀರ್ಪಿನಲ್ಲಿ ಹೇಳಿದ್ದೇನು?
Recommended image3
'ನನಗೆ ದೈಹಿಕ ಸಂಬಂಧ ತೃಪ್ತಿ ತಂದಿಲ್ಲ...' ಮದುವೆಯಾದ ಒಂದು ತಿಂಗಳಲ್ಲೇ ಗಂಡನನ್ನು ತೊರೆದ ಪತ್ನಿ
Related Stories
Recommended image1
5 ನಿಮಿಷ ತಬ್ಬಿಕೊಂಡ ಪುರುಷನಿಗೆ 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!
Recommended image2
Now Playing
ಹಿಮಾಲಯವನ್ನೇ ತನ್ನ ಗಂಡನ ಮನೆ ಎಂದ ನಾರಿ: ಭಾರತ ಚೀನಾ ಗಡಿಯಲ್ಲಿ ಮಹಿಳೆ ಕಿರಿಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved