ನನ್ನ ಗರ್ಭಪಾತಕ್ಕೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಾರಣ: ನಟಿ ಜೂಲಿ ಗಂಭೀರ ಆರೋಪ
ಬಿಗ್ಬಾಸ್ ಸ್ಪರ್ಧಿ ಹಾಗೂ ನಟಿ ಮಾರಿಯಾ ಜೂಲಿ, ತಮಗೆ ಆದ ಗರ್ಭಪಾತಕ್ಕೆ ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಆನ್‌ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.

ನಟಿಗೆ ಗರ್ಭಪಾತ
ತಾವು ಗರ್ಭಪಾತದಿಂದ ಮಗುವನ್ನು ಕಳೆದುಕೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ಜೋಸೆಫ್ ವಿಜಯ್ ಅವರೇ ಕಾರಣ ಎಂಬ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಬಿಗ್ಬಾಸ್ ಸ್ಪರ್ಧಿ, ಮಾಜಿ ನರ್ಸ್ ಹಾಗೂ ಟಾಲಿವುಡ್ ನಟಿ ಮಾರಿಯಾ ಜೂಲಿ.
ಪತ್ರಿಕಾಗೋಷ್ಠಿಯಲ್ಲಿ ಆರೋಪ
ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅವರ ಬೆಂಬಲಗರಿಂದ ಕಿರುಕುಳದ ನಂತರ ತನಗೆ ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮಾರ್ಚ್ನಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಿರುವುದಾಗಿ ನಟಿ ಹೇಳಿದ್ದಾರೆ.
ಜಾಲತಾಣದಲ್ಲಿ ಟ್ರೋಲ್
ಟಿವಿಕೆ ಬೆಂಬಲಿಗರಿಂದ ನನ್ನನ್ನು ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಗರ್ಭಧಾರಣೆಯ ಸಮಯದಲ್ಲಿಯೂ ಇವೆಲ್ಲವುಗಳಿಂದ ಮಾನಸಿಕವಾಗಿ ನೊಂದದ್ದೇ ನನ್ನ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ನಟಿ ಹೇಳಿದ್ದಾರೆ.
ಪತಿ ವಿರುದ್ಧ ಪಿತೂರಿ
ನನ್ನ ಪತಿಯ ವಿರುದ್ಧ ಪಿತೂರಿ ನಡೆಸಲಾಗಿದೆ. 15 ಲಕ್ಷ ರೂ. ಮೂತ್ರಪಿಂಡ ಹಗರಣದಲ್ಲಿ ಅವರನ್ನು ಸಿಲುಕಿಸಲಾಗಿದೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದರ ಬಗ್ಗೆ ನನಗೆ ನೋಟಿಸ್ ಕಳಿಸಿ, ಹಿಂಸೆ ನೀಡಲಾಗುತ್ತಿದೆ. ಇದರ ಹಿಂದೆ, ಟಿವಿಕೆ ಬೆಂಬಲಿಗ ಮತ್ತು ವಕೀಲರ ಕೈವಾಡವಿದೆ ಎಂದು ನಟಿ ಆರೋಪಿಸಿದ್ದಅರೆ.
ಮಗು ಕಳೆದುಕೊಂಡೆವು
"ನಾವು ನಮ್ಮ ಮಗುವನ್ನು ಕಳೆದುಕೊಂಡೆವು. ನಾನು ಇತ್ತೀಚೆಗೆ ಮದುವೆಯಾಗಿದ್ದೆ, ಮತ್ತು ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡೆವು. ಆನ್‌ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯಿಂದಾಗಿ ನನ್ನ ಮಗು ಸಾವನ್ನಪ್ಪಿತು. ನಾನು ಇದನ್ನು ಸಹಾನುಭೂತಿಗಾಗಿ ಬಳಸಬಹುದು, ಆದರೆ ನನ್ನ ಉದ್ದೇಶವೆಂದರೆ ನನ್ನ ಗಂಡ ಮತ್ತು ನನ್ನ ಬಗ್ಗೆ ಮಾನನಷ್ಟ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಮಾಡಲಾಗುತ್ತಿದೆ ಎಂದು ನಟಿ ನೋವು ತೋಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

