- Home
- Entertainment
- ಶಾಕಿಂಗ್ ಸ್ಟೋರಿ.. 500 ರೂ.ಗಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದ ಈ ನಟಿ ಸಿನಿಮಾಗೆ ಬಂದಿದ್ದು ಹೇಗೆ?
ಶಾಕಿಂಗ್ ಸ್ಟೋರಿ.. 500 ರೂ.ಗಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದ ಈ ನಟಿ ಸಿನಿಮಾಗೆ ಬಂದಿದ್ದು ಹೇಗೆ?
"ನಾನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದೆ. ಆದರೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ. ಆ ಬಳಿಕ 500 ರೂ.ಗೆ ಮದುವೆಮನೆಗಳಲ್ಲಿ ಕೆಲಸ ಮಾಡಿದ್ದೇನೆ.

ಹೈದರಾಬಾದ್: ಇಂದು ಟಾಲಿವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಬೆರಗಿನಿಂದ ನೋಡುವ ನಟಿ ಸಮಂತಾ ರುತ್ ಪ್ರಭು. ತೆರೆಯ ಮೇಲೆ ಗ್ಲಾಮರಸ್ ಆಗಿ ಮಿಂಚುವ, ಕೋಟಿ ಕೋಟಿ ಸಂಭಾವನೆ ಪಡೆಯುವ ಈ 'ಮಾಯಾಂಗನೆ'ಯ ಹಿಂದೊಂದು ನೋವಿನ ಕಥೆಯಿದೆ. ಹೂವಿನ ಹಾಸಿಗೆಯ ಮೇಲೆ ನಡೆದು ಅವರು ಈ ಸ್ಥಾನಕ್ಕೆ ಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಮಂತಾ (Samantha Ruth Prabhu) ಇತ್ತೀಚೆಗೆ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
500 ರೂಪಾಯಿ ಸಂಬಳದ ಆ ದಿನಗಳು!
ಸದ್ಯ ಸಮಂತಾ ತಮ್ಮ ಸ್ವಂತ ನಿರ್ಮಾಣದ ಹಾಗೂ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಖ್ಯಾತ ನಿರೂಪಕಿ ಸುಮಾ ಕನಕಾಲ ನಡೆಸಿಕೊಟ್ಟ ಚಾಟ್ ಶೋನಲ್ಲಿ ಭಾಗವಹಿಸಿದ್ದ ಸಮಂತಾ, ತಮ್ಮ ಕಾಲೇಜು ದಿನಗಳ ಆರ್ಥಿಕ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ. "ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ನಾನು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಹೋಟೆಲ್‌ಗಳಲ್ಲಿ ನಡೆಯುವ ಅದ್ದೂರಿ ಮದುವೆಗಳಲ್ಲಿ ಬರುವ ಅತಿಥಿಗಳನ್ನು ಸ್ವಾಗತಿಸುವ ಕೆಲಸ ಮಾಡುತ್ತಿದ್ದೆ. ಆ ಒಂದು ದಿನದ ಕೆಲಸಕ್ಕೆ ನನಗೆ ಸಿಗುತ್ತಿದ್ದ ಸಂಭಾವನೆ ಕೇವಲ 500 ರೂಪಾಯಿ! ಆದರೆ ಆ ಹಣಕ್ಕಾಗಿ ನಾನು ಸತತವಾಗಿ 8 ಗಂಟೆಗಳ ಕಾಲ ನಿಂತುಕೊಳ್ಳಬೇಕಿತ್ತು" ಎಂದು ಹೇಳುವಾಗ ಸಮಂತಾ ಕಣ್ಣಾಲಿಗಳು ತೇವವಾಗಿದ್ದವು.
ಆಸ್ಟ್ರೇಲಿಯಾ ಕನಸು ಭಗ್ನಗೊಂಡಿದ್ದೇಕೆ?
ಸಮಂತಾ ಅವರಿಗೆ ನಟಿಯಾಗಬೇಕು ಎಂಬ ಆಸೆ ಮೊದಲಿನಿಂದ ಇರಲಿಲ್ಲವಂತೆ. ಅವರಿಗೆ ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯುವ ದೊಡ್ಡ ಕನಸಿತ್ತು. "ನಾನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದೆ. ಆದರೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ.
ಅಷ್ಟು ದೊಡ್ಡ ಮೊತ್ತದ ಹಣವನ್ನು ಭರಿಸಲು ಸಾಧ್ಯವಾಗದ ಕಾರಣ ನನ್ನ ವಿದೇಶದ ಕನಸು ಭಗ್ನಗೊಂಡಿತು. ಅದೇ ಕಾರಣಕ್ಕೆ ನಾನು ಮಾಡೆಲಿಂಗ್ ಕ್ಷೇತ್ರದತ್ತ ತಿರುಗಬೇಕಾಯಿತು. ಒಂದು ವೇಳೆ ಅಂದು ನನ್ನ ಬಳಿ ಹಣವಿದ್ದು ನಾನು ಆಸ್ಟ್ರೇಲಿಯಾಕ್ಕೆ ಹೋಗಿದ್ದರೆ, ಇಂದು ನಾನು ಸಿನಿಮಾ ರಂಗದಲ್ಲಿ ಇರುತ್ತಿರಲಿಲ್ಲ" ಎಂದು ಸಮಂತಾ ಹಳೇ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸೋಲದ ಸರದಾರಿಣಿ ಈ ಸಮಂತಾ!
ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನೋವು, ಆ ಬೆನ್ನಲ್ಲೇ ಆವರಿಸಿದ 'ಮಯೋಸೈಟಿಸ್' ಎಂಬ ಮಾರಕ ಕಾಯಿಲೆ.. ಹೀಗೆ ಸಾಲು ಸಾಲು ಸಂಕಷ್ಟಗಳು ಎದುರಾದರೂ ಸಮಂತಾ ಎದೆಗುಂದಲಿಲ್ಲ. ಕಾಯಿಲೆಯಿಂದ ಗುಣಮುಖರಾಗಿ ಬಂದ ಅವರು ಸದ್ಯ ತಮ್ಮದೇ ಆದ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಪ್ರಸ್ತುತ ರಾಜ್ ಮತ್ತು ಡಿಕೆ ಅವರಂತಹ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡುತ್ತಾ, ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೇರುತ್ತಿದ್ದಾರೆ.
ಸಮಂತಾ ನಟನೆಯ ಬಹುನಿರೀಕ್ಷಿತ ‘ಮಾ ಇಂಟಿ ಬಂಗಾರಂ’ ಸಿನಿಮಾ ಇದೇ ಜೂನ್ 19 ರಂದು ತೆರೆಗೆ ಬರಲು ಸಿದ್ಧವಾಗಿದೆ. ಕಷ್ಟದ ದಿನಗಳಿಂದ ಮೇಲೆದ್ದು ಬಂದಿರುವ ಈ 'ಬಂಗಾರದ ಮಗಳು' ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

