MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಡಿವೋರ್ಸ್ ಬಗ್ಗೆ ಇರೋ 'ಸತ್ಯ ಸಂಗತಿ' ಹೇಳಿ ಕೊನೆಗೂ ಮನಸ್ಸು ಹಗುರ ಮಾಡಿಕೊಂಡ ಚಂದನ್ ಶೆಟ್ಟಿ!

ಡಿವೋರ್ಸ್ ಬಗ್ಗೆ ಇರೋ 'ಸತ್ಯ ಸಂಗತಿ' ಹೇಳಿ ಕೊನೆಗೂ ಮನಸ್ಸು ಹಗುರ ಮಾಡಿಕೊಂಡ ಚಂದನ್ ಶೆಟ್ಟಿ!

ನಮಗಿಬ್ಬರಿಗೂ ಮುಗಿದ ಹೋದ ಆ ಅಧ್ಯಾಯದ ಬಗ್ಗೆ ಮಾತನ್ನಾಡಲು ಈಗ ಏನೂ ಇಲ್ಲ, ಮಾತನ್ನಾಡುವ ಅಗತ್ಯವಾಗಲೀ ಮನಸ್ಸಾಗಲೀ ಇಲ್ಲ. ಆದರೂ ಈಗ ಕೇಳಿರೋದಕ್ಕೆ ಹೇಳಬೇಕಲ್ಲ ಎಂದು ಹೇಳುವುದಾದರೆ ಅದನ್ನು ಹೀಗೆ ಹೇಳಬಹುದು... ಕೊನೆಗೂ ಸತ್ಯ ಬಾಯ್ಬಿಟ್ಟ ಚಂದನ್ ಶೆಟ್ಟಿ..

3 Min read
Author : Shriram Bhat
Published : Jun 14 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಗಾಯಕ-ಸಂಗೀತ ನಿರ್ದೇಶಕ-ನಟ- ಚಂದನ್ ಶೆಟ್ಟಿ (Chandan Shetty) ಅವರನ್ನು ಒಂಥರಾ ಆಲ್‌ರೌಂಡರ್ ಪ್ರತಿಭೆ ಎನ್ನಬಹುದು. ಪಾಪ್ ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಈ ಕನ್ನಡದ ಗಾಯಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕನ್ನಡದ ಕೀರ್ತಿಯನ್ನು ಹಬ್ಬಿಸಿರುವ 'ರಾಪರ್'. ಇತ್ತೀಚಿನ ಡಯಾನಾಮೈಟ್, ಕಾಟನ್ ಕ್ಯಾಂಡಿ ಸೇರಿದಂತೆ ಹಲವು ಫೇಮಸ್ ಆಲ್ಬಂ ಸಾಂಗ್‌ಗಳನ್ನು ಕನ್ನಡನಾಡು ಹಾಗೂ ಜಗತ್ತಿಗೆ ಕೊಟ್ಟ ಅಪ್ಪಟ ಚಂದನವನದ ಪ್ರತಿಭೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Instagram

ಇಂಥ ಚಂದನ್ ಶೆಟ್ಟಿ ಅವರ ವೈಯಕ್ತಿಕ ಬದುಕಿನಲ್ಲಿ ಆಗಿರುವ ಅದೊಂದು ಘಟನೆ ಇಡೀ ಸಮಾಜದಲ್ಲಿ ಇಂದಿಗೂ ಚರ್ಚೆಯ ಸಂಗತಿಯಾಗಿದೆ. ಅದು ಬೇರೇನೂ ಅಲ್ಲ, ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ (Niveditha Gowda) ಅವರ ಮದುವೆ (2020) ಹಾಗೂ ಡಿವೋರ್ಸ್ (2024). ಅವರಿಬ್ಬರ ಸಾಕಷ್ಟು ಅಭಿಮಾನಿಗಳಿಗೆ ಈ ಕಹಿ ಘಟನೆ ನೋವು ತಂದಿದೆ. ಆದರೆ ಅವರಿಬ್ಬರ ಹೊಂದಾಣಿಕೆ ಆಗದ ಈ ಸಂಬಂಧದಿಂದ ಗೌರವಯುತವಾಗಿ ದೂರ ಸರಿದು, ಸಮಾಜಕ್ಕೆ ಮಾದರಿ ಆಗಿರುವುದರ ಜೊತೆಗೆ ಪ್ರತ್ಯೇಕ ಜೀವನದಲ್ಲಿ ಸಾಧನೆ ಮಾಡುತ್ತ ಖುಷಿಖುಷಿಯಾಗಿಯೇ ಇದ್ದಾರೆ. ಆದರೆ, ಅವರ ಅಭಿಮಾನಿಗಳ ವಲಯದಲ್ಲಿ ಮಾತ್ರ ಈಗಲೂ ಕೂಡ ಚಂದನ್-ನಿವೇದಿತಾ ವಿಚ್ಚೇದನ ಮಾತುಕತೆಯ, ಚರ್ಚೆಯ ಸಂಗತಿಯೇ ಆಗಿ ಉಳಿದಿದೆ.

Related Articles

Related image1
ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!
Related image2
ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
38
Image Credit : Asianet News

ಇದೇ ಕಾರಣಕ್ಕೆ, ಈಗ ಪ್ರತ್ಯೇಕವಾಗಿ ಲೈಫ್ ಎಂಜಾಯ್ ಮಾಡುತ್ತಿರುವ ಅವರಿಬ್ಬರಿಗೂ ಮೀಡಿಯಾಗಳಲ್ಲಿ ಸೇರಿದಂತೆ, ಹಲು ಕಡೆಗಳಲ್ಲಿ ಕೆಲವು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದು ಅಥವಾ ಮುಖ್ಯವಾದುದು ಎಂದರೆ 'ಏಕೆ ಡಿವೋರ್ಸ್ ಆಯ್ತು' ಅನ್ನೋದು! ಅದೇ ಮುಖ್ಯ ಹಾಗೂ ಕೊನೆಯ ಪ್ರಶ್ನೆ ಎಂಬಂತೆ ಆಡುವ ಸಮಾಜ, ಅದಕ್ಕೆ ಅವರು ಕೊಡುವ ಉತ್ತರವೇ ಫೈನಲ್ ಎನ್ನುವಂತೆ ಇದೆ. ಅದೇ ಕಾರಣಕ್ಕೆ, ಚಂದನ್ ಶೆಟ್ಟಿಯವರು ಕೂಡ ತಮಗೆ ಕೇಳಲಾದ ಪ್ರಶ್ನೆಗೆ ಕೂಲಾಗಿ ಆದರೆ ಅಷ್ಟೇ ನಿಖರವಾಗಿ ಈ ಬಗ್ಗೆ ಉತ್ತರಿಸಿದ್ದಾರೆ.

48
Image Credit : Instagram

ಚಂದನ್ ಶೆಟ್ಟಿಯವರು ಹೇಳಿದ್ದಿಷ್ಟು;- 'ನೋಡಿ, ಈಗದು ಮುಗಿದ ಅಧ್ಯಾಯ.. ನಾವಿಬ್ಬರೂ ನಮ್ಮ ಸಂಬಂಧವನ್ನು ಗೌರವಯುತವಾಗಿ ಮುಗಿಸಿಕೊಂಡಿದ್ದೇವೆ. ಯಾರ ಬಗ್ಗೆಯೂ ಯಾರಿಂದಲೂ ಯಾವುದೇ ಆಪಾದನೆ ಇಲ್ಲ, ನಮ್ಮಬ್ಬರಲ್ಲಿ ಹೊಂದಾಣಿಕೆ ಆದಾಗ ಲವ್ ಮಾಡಿ ಮದುವೆ ಆಗಿದ್ದೇವೆ, ಯಾಕೋ ಅಡ್ಜೆಸ್ಟ್ ಆಗ್ತಿಲ್ಲ ಅಂದಾಗ ಪರಸ್ಪರ ಗೌರವ ಕೊಟ್ಟು ಕಾನೂನು ಪ್ರಕಾರವಾಗಿಯೂ ದೂರ ಆಗಿದ್ದೇವೆ. ನಮಗಿಬ್ಬರಿಗೂ ಮುಗಿದ ಹೋದ ಆ ಅಧ್ಯಾಯದ ಬಗ್ಗೆ ಮಾತನ್ನಾಡಲು ಈಗ ಏನೂ ಇಲ್ಲ, ಮಾತನ್ನಾಡುವ ಅಗತ್ಯವಾಗಲೀ ಮನಸ್ಸಾಗಲೀ ಇಲ್ಲ. ಟೈಂ ಬಂದಾಗ, ಹೇಳುವ ಮನಸ್ಸಿದ್ದರೆ ಆಗ ನಾನೇ ಏನಾದರೂ ಹೇಳಬಹುದು. ಆದರೂ ಈಗ ಕೇಳಿರೋದಕ್ಕೆ ಹೇಳಬೇಕಲ್ಲ ಎಂದು ಹೇಳುವುದಾದರೆ ಅದನ್ನು ಹೀಗೆ ಹೇಳಬಹುದು...

58
Image Credit : Insatagram

ಬಿಗ್ ಬಾಸ್ ವೇದಿಕೆ ನಮ್ಮಿಬ್ಬರನ್ನು ಒಂದು ಕಡೆ ಸೇರಿಸಿದ ವೇದಿಕೆ ಆಗಿ, ಲವ್ ಮಾಡುವಂತಹ ವಾತಾವರಣ ಅಲ್ಲಿ ನಿರ್ಮಾಣವಾಯ್ತು. ಅಲ್ಲಿಂದ ಬಂದ ಮೇಲೆ ವರ್ತಮಾನ ಅಥವಾ ಭವಿಷ್ಯದ ಯೋಚನೆಗಿಂತ ಹೆಚ್ಚಾಗಿ, ನಾವಿಬ್ಬರೂ ಸೋಷಿಯಲ್ ಮೀಡಿಯಾ ಹಾಗೂ ನಮ್ಮ ಸುತ್ತಮುತ್ತಲಿನ ಪ್ರಭಾವಕ್ಕೆ ಒಳಗಾಗಿ 'ನಾವಿಬ್ಬರೂ ಆದರ್ಶ ಜೋಡಿ' ಎಂದೇ ಭಾವಿಸಿದ್ದೆವು. ಆದರೆ ನಿಜವಾಗಿ ನಮ್ಮಿಬ್ಬರ ಮಧ್ಯೆ ಒಟ್ಟಿಗೇ ಜೀವಿಸಲು ಇರಬೇಕಾದಾಗ ಹೊಂದಾಣಿಕೆ ಮೂಡಿರಲಿಲ್ಲ. ಅಷ್ಟರಲ್ಲೇ ಸುತ್ತಲಿನ ಸಮಾಜ, ಸಾಮಾಜಿಕ ಮಾಧ್ಯಮಗಳ ಇಷ್ಟದ ಸುಳಿಗೆ ಸಿಲುಕಿದ್ದ ನಾವಿಬ್ಬರೂ ಮದುವೆ ಎಂಬ ಬಂಧನಕ್ಕೆ ಸಿಲುಕಿ, ಎಲ್ಲವೂ ಮುಗಿದುಹೋಯ್ತು.

68
Image Credit : Instagram

ಆದರೆ, ಬಿಗ್ ಬಾಸ್, ಲವ್, ಸುತ್ತಾಟ, ಮದುವೆ ಎಲ್ಲವೂ ಮುಗಿದ ಮೇಲೆ ನಮ್ಮಿಬ್ಬರ (ನನ್ನ-ಅವರ) ಜೀವನ ಯಾವಾಗ ಶುರುವಾಯ್ತೋ ಆಗಲೇ ಗೊತ್ತಾಗಿದ್ದು- ನಮ್ಮಿಬ್ಬರಲ್ಲಿ ಸಂಸಾರದಲ್ಲಿ ಸರಿಗಮ ಮೂಡಲು ಅಗತ್ಯವಿರುವ ಹೊಂದಾಣಿಕೆ ಇಲ್ಲ ಅನ್ನೋದು. ಕಾರಣ, ನಮ್ಮಿಬ್ಬರ ವಯಸ್ಸಿನ ಅಂತರ, ಬೆಳೆದ ವಿಭಿನ್ನ ಪರಿಸರ, ಫ್ಯಾಮಿಲಿ ವಾತಾವರಣ, ಇಬ್ಬರ ಹವ್ಯಾಸಗಳು, ಗುರಿ ಎಲ್ಲವೂ ವಿಭಿನ್ನವಾಗಿವೆ. ಹೀಗಿರುವಾಗ ಹೊಂದಾಣಿಕೆ ಅಸಾಧ್ಯವಾಗಿತ್ತು.

78
Image Credit : Asianet News

ಹೊಂದಾಣಿಕೆ ಆಗದ ಸಂಸಾರದಲ್ಲಿ ಜಗಳ-ಮನಸ್ತಾಪಗಳನ್ನು ಇಟ್ಟುಕೊಂಡು ಅನಿವಾರ್ಯವಾಗಿ ಜೀವಿಸುವುದು ಒಂದು ಆಯ್ಕೆ, ಬೇರೆಯಾಗಿ ನಮ್ಮನಮ್ಮ ಜೀವನವನ್ನು ಪ್ರತ್ಯೇಕವಾಗಿ ರೂಪಿಸಿಕೊಳ್ಳುವುದು ಇನ್ನೊಂದು! ನಾವಿಬ್ಬರೂ ಎರಡನೇ ಆಯ್ಕೆ ಮಾಡಿಕೊಂಡು ದೂರವಾಗಿದ್ದೇವೆ. ಈಗ ನಾನಂತೂ ನನ್ನದೇ ಆದ ರೀತಿಯಲ್ಲಿ ಚೆನ್ನಾಗಿದ್ದೇನೆ. ನನಗೆ ನನ್ನದೇ ಆದ ಗುರಿ ಇದೆ, ಕೆಲಸ ಇದೆ, ಖುಷಿ ಇದೆ' ಎಂದಿದ್ದಾರೆ ಚಂದನ್ ಶೆಟ್ಟಿ.

88
Image Credit : Instagram

ಹಾಗಿದ್ದರೆ ಈ ಕಥೆಯ ಸಾರಾಂಶ ಇಷ್ಟೇ. ಸೋಷಿಯಲ್ ಮೀಡಿಯಾಗಳು ನಮ್ಮ ಜೀವನದ ಒಳಹೊಕ್ಕು ನಮ್ಮ ಲೈಫನ್ನು ಅದರ ಕಂಟ್ರೋಲಿಗೆ ಕೂಡ ತೆಗೆದುಕೊಳ್ಳಬಹುದು. ನಮಗೆ ನಮ್ಮನಮ್ಮ ಆಯ್ಕೆಗಳೇ ಮುಖ್ಯವಾಗಬೇಕೇ ಹೊರತೂ ಸಮಾಜದ, ಸೋಷಿಯಲ್ ಮೀಡಿಯಾಗಳು ಅಭಿಪ್ರಾಯಗಳಲ್ಲ. ನೆಟ್ಟಗರ, ಸಮಾಜದ ಇಷ್ಟಾನಿಷ್ಟಗಳು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಆದರೆ, ಸಂಸಾರವೆಂಬುದು ಹಾಗಲ್ಲ, ಒಮ್ಮೆ ಕಮಿಟ್ ಆದರೆ ಅದಕ್ಕೆ ಅದರದ್ದೇ ಆದ ಇತಿಮಿತಿಗಳು, ಪ್ಲಸ್-ಮೈನಸ್ ಪಾಯಿಂಟ್‌ಗಳು ಇವೆ. ಆದ್ದರಿಂದ ಅಗತ್ಯವಿದ್ದಾಗ ನಾವು ಸೋಷಿಯಲ್ ಮೀಡಿಯಾ ಬಳಸಿಕೊಳ್ಳಬೇಕೇ ಹೊರತೂ ಸಾಮಾಜಿಕ ಮಾಧ್ಯಮವೇ ನಮ್ಮ ಜೀವನವನ್ನು ನಿರ್ಧರಿಸುವಂತೆ ಅಗಬಾರದು. ನೀವೇನಂತೀರಿ..? ಕಾಮೆಂಟ್ ಪ್ಲೀಸ್...

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಚಂದನ್ ಶೆಟ್ಟಿ
ನಿವೇದಿತಾ ಗೌಡ
ಸ್ಯಾಂಡಲ್‌ವುಡ್
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
ಸುದೀಪ್​ ಮಾಮಾನ್ನ ಪ್ರಿಯಾ ಅತ್ತೆ ಜೊತೆ ಮದ್ವೆ ಮಾಡಿಸೋಕೆ ಇಷ್ಟನೇ ಇರ್ಲಿಲ್ಲ: ನಟ ಸಂಚಿತ್​ ಸಂಜೀವ್ ರಿವೀಲ್​
Recommended image2
ಕನ್ನಡದ ಸ್ಟಾರ್ ನಟಿ ಮೇಲೆ ತೆಲುಗು ನಟ ನಾನಿ ಕಣ್ಣು; ಹೀರೋ ಯಾರು, ಅವರೇನಾ ಬೇರೆನಾ?
Recommended image3
ಡಿವೋರ್ಸ್ ಸುದ್ದಿ ಬೆನ್ನಲ್ಲೇ ಶುಭಾ ಪೂಂಜಾ ಕುತೂಹಲದ ವಿಡಿಯೋ: ಕಮೆಂಟ್ ಸೆಕ್ಷನ್​ ಆಫ್ ಮಾಡಿದ್ಯಾಕೆ ನಟಿ
Related Stories
Recommended image1
ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!
Recommended image2
ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved