YASH: ರಾಮಾಯಣದಲ್ಲಿ ಯಶ್ 'ರಾವಣ'ನ ತಾಂಡವ ನೃತ್ಯ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್!
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಚಿತ್ರದ ರಾವಣನ ತಾಂಡವ ನೃತ್ಯದ ವಿಡಿಯೋ ಬಿಡುಗಡೆಯಾಗಿದ್ದು, ಅಭಿಮಾನಿಗಳು ಏನಂತಿದಾರೆ?

Ramayana Movie: ರಾವಣನ ತಾಂಡವಕ್ಕೆ ರಾಕಿಂಗ್ ಸ್ಟಾರ್ ಯಶ್ ಅಬ್ಬರ, ಮೈ ಜುಮ್ಮೆನಿಸುವ ವಿಡಿಯೋ ವೈರಲ್!
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಚಿತ್ರದ ರಾವಣನ ತಾಂಡವ ನೃತ್ಯದ ವಿಡಿಯೋ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶಿವನ ಪರಮಭಕ್ತ ರಾವಣನ ಪಾತ್ರದಲ್ಲಿ ಯಶ್ ಅವರ ಆವೇಶಭರಿತ ನೃತ್ಯ ಗಮನ ಸೆಳೆಯುತ್ತಿದ್ದು, ಅವರ ಹೊಸ ಲುಕ್ ಮತ್ತು ಶಕ್ತಿಯುತ ಅಭಿನಯದ ಬಗ್ಗೆ ಚರ್ಚೆಗಳು ಶುರುವಾಗಿವೆ.
ರಾವಣನಾಗಿ ಯಶ್ ಪರಕಾಯ ಪ್ರವೇಶ!
ಮಹಾದೇವನ ಆರಾಧಕನಾದ ರಾವಣನ ತಾಂಡವ ನೃತ್ಯಕ್ಕೆ ವಿಶೇಷ ಮಹತ್ವವಿದೆ. ‘ರಾಮಾಯಣ’ ಚಿತ್ರದಲ್ಲಿ ಯಶ್ ಇದೇ ದೃಶ್ಯಕ್ಕೆ ಜೀವ ತುಂಬಿದ್ದಾರೆ. ಜಟಾಧಾರಿ ರಾವಣನ ರೂಪದಲ್ಲಿ ಶಿವನ ಮುಂದೆ ಅವರು ಪ್ರದರ್ಶಿಸಿರುವ ತಾಂಡವ ನೃತ್ಯದಲ್ಲಿ ಆಕ್ರೋಶ, ಭಕ್ತಿ, ಆವೇಶ ಮತ್ತು ಅಪಾರ ಶಕ್ತಿ ಎದ್ದು ಕಾಣುತ್ತವೆ. ಪ್ರತಿ ಚಲನೆಯಲ್ಲೂ ಶಕ್ತಿಯನ್ನು ಪ್ರದರ್ಶಿಸಿರುವ ಯಶ್, ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಂತೆ ಕಾಣಿಸುತ್ತಿದ್ದಾರೆ.
ಈಗ ಬಿಡುಗಡೆಯಾಗಿರುವ ವಿಡಿಯೋ ಚಿಕ್ಕದಾಗಿದ್ದರೂ, ಅದರಲ್ಲಿರುವ ಅದ್ಧೂರಿ ದೃಶ್ಯಗಳು ಮತ್ತು ಯಶ್ ಅವರ ನೃತ್ಯದ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾವಣನ ಪಾತ್ರದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಈ ವಿಡಿಯೋ ಮತ್ತಷ್ಟು ಇಂಬು ನೀಡಿದೆ.
ಈಗ ಬಿಡುಗಡೆಯಾಗಿರುವ ವಿಡಿಯೋ ಚಿಕ್ಕದಾಗಿದ್ದರೂ, ಅದರಲ್ಲಿರುವ ಅದ್ಧೂರಿ ದೃಶ್ಯಗಳು ಮತ್ತು ಯಶ್ ಅವರ ನೃತ್ಯದ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾವಣನ ಪಾತ್ರದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಈ ವಿಡಿಯೋ ಮತ್ತಷ್ಟು ಇಂಬು ನೀಡಿದೆ.
ರಾಕಿ ಭಾಯ್‌ನ ಡ್ಯಾನ್ಸ್‌ಗೆ ಹೊಸ ವೇದಿಕೆ!
ಯಶ್ ಉತ್ತಮ ನೃತ್ಯಪಟು ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಆದರೆ ‘ಕೆಜಿಎಫ್’ ಸರಣಿಯಲ್ಲಿ ಅವರ ನೃತ್ಯಪ್ರತಿಭೆಯನ್ನು ಪ್ರದರ್ಶಿಸಲು ಹೆಚ್ಚು ಅವಕಾಶ ಇರಲಿಲ್ಲ. ‘ಟಾಕ್ಸಿಕ್’ ಚಿತ್ರದಲ್ಲೂ ಇದೇ ರೀತಿಯ ನೃತ್ಯಕ್ಕೆ ಎಷ್ಟು ಅವಕಾಶ ಸಿಗಲಿದೆ ಎಂಬುದು ಕುತೂಹಲದ ಸಂಗತಿ. ಆದರೆ ‘ರಾಮಾಯಣ’ದಲ್ಲಿ ರಾವಣನ ತಾಂಡವದ ಮೂಲಕ ಯಶ್ ತಮ್ಮ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಜಟಾಧಾರಿ ರಾವಣನ ಹೊಸ ರೂಪವೂ ವಿಶೇಷ ಗಮನ ಸೆಳೆಯುತ್ತಿದೆ. ಆಕ್ಷನ್ ಹೀರೋನಂತೆ ಕಾಣಿಸುವ ಈ ಲುಕ್‌ನಲ್ಲಿ ಯಶ್ ಅವರನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ನವೆಂಬರ್ 5ರಂದು ‘ರಾಮಾಯಣ’ ಬಿಡುಗಡೆ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ತೆರೆಗೆ ಬರಲು ಸಿದ್ಧವಾಗಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತೀಯ ಮಹಾಕಾವ್ಯವನ್ನು ಹೊಸ ದೃಷ್ಟಿಕೋನದಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವುದು ಚಿತ್ರತಂಡದ ಉದ್ದೇಶವಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಯಶ್, ಇಡೀ ಕುಟುಂಬ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಸಿನಿಮಾವನ್ನು ರೂಪಿಸಿರುವುದಾಗಿ ಹೇಳಿಕೊಂಡಿದ್ದರು. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೊದಲ ಭಾಗ ನವೆಂಬರ್ 5ರಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
ರಾವಣನ ತಾಂಡವದ ಈ ಕಿರು ವಿಡಿಯೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಯಶ್ ಅವರ ವಿಭಿನ್ನ ಅವತಾರವನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

