- Home
- Entertainment
- ಭಾರತದಲ್ಲೇ ಹುಟ್ಟಿದ ರಾವಣ ಲಂಕೆಗೆ ರಾಜನಾಗಿದ್ದು ಹೇಗೆ? ಕುಬೇರನ ಜೊತೆಗಿನ ಕಾಳಗದ ರೋಚಕ ಕಥೆ ಗೊತ್ತಾ?
ಭಾರತದಲ್ಲೇ ಹುಟ್ಟಿದ ರಾವಣ ಲಂಕೆಗೆ ರಾಜನಾಗಿದ್ದು ಹೇಗೆ? ಕುಬೇರನ ಜೊತೆಗಿನ ಕಾಳಗದ ರೋಚಕ ಕಥೆ ಗೊತ್ತಾ?
ರಾಮಾಯಣ ಸಿನಿಮಾ ರಿಲೀಸ್ ಆಗ್ತಿದ್ದ ಹಾಗೆ ರಾವಣನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಭಾರತದಲ್ಲಿ ಹುಟ್ಟಿದ ರಾವಣ ಲಂಕೆಗೆ ರಾಜ ಆಗಿದ್ದು ಹೇಗೆ? ಮಲಸಹೋದರ ಕುಬೇರನ ಜೊತೆಗಿನ ಕಾಳಗದ ಹಿಂದಿನ ಇಂಟರೆಸ್ಟಿಂಗ್ ಕಥೆ ಇಲ್ಲಿದೆ.

ರಾವಣನ ಜನ್ಮಸ್ಥಳ ಯಾವುದು?
ರಾಮಾಯಣದಲ್ಲಿ ರಾವಣನ ಪಾತ್ರ ತುಂಬಾನೇ ಪವರ್ಫುಲ್. ಸೀತೆಯನ್ನು ಅಪಹರಿಸಿದ್ದು, ರಾಮನ ಕೈಯಲ್ಲಿ ಸತ್ತಿದ್ದು ನಮಗೆಲ್ಲಾ ಗೊತ್ತೇ ಇದೆ. ಆದ್ರೆ ರಾವಣನ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲದ ವಿಚಾರಗಳೂ ಇವೆ. ರಾವಣ ಲಂಕೆಗೆ ರಾಜನಾಗಿದ್ದರೂ, ಆತ ಹುಟ್ಟಿದ್ದು ಮಾತ್ರ ಭಾರತದಲ್ಲೇ. ರಾವಣನ ಮೂಲ ಭಾರತದ ಜೊತೆ ಬೆಸೆದುಕೊಂಡಿದೆ. ಬ್ರಾಹ್ಮಣ ವಂಶದಲ್ಲಿ ಹುಟ್ಟಿ, ತನ್ನ ತಪಸ್ಸಿನ ಶಕ್ತಿಯಿಂದ ಲಂಕೆಯನ್ನು ಗೆದ್ದು ರಾಜನಾದ ರಾವಣನ ಕಥೆ ತುಂಬಾನೇ ರೋಚಕವಾಗಿದೆ.
ರಾವಣನ ಫ್ಯಾಮಿಲಿ ಇದು
ಬ್ರಹ್ಮದೇವನ ಮೊಮ್ಮಗ 'ವಿಶ್ರವ ಮಹರ್ಷಿ' ರಾವಣನ ತಂದೆ. ಅಸುರ ಕನ್ಯೆ 'ಕೈಕಸಿ' ಆತನ ತಾಯಿ. ಉತ್ತರ ಭಾರತದಲ್ಲಿ ವಿಶ್ರವ ಮಹರ್ಷಿಯ ಆಶ್ರಮ ಇದ್ದ ಜಾಗದಲ್ಲೇ (ಇಂದಿನ ಉತ್ತರ ಪ್ರದೇಶದ 'ಬಿಸ್ರಖ್' ಗ್ರಾಮ) ರಾವಣ ಹುಟ್ಟಿದ. ರಾವಣನ ಅಸಲಿ ಹೆಸರು ದಶಗ್ರೀವ. ಆತನ ಜೊತೆ ಕುಂಭಕರ್ಣ, ವಿಭೀಷಣ ಅನ್ನೋ ಸಹೋದರರು ಹಾಗೂ ಶೂರ್ಪಣಖಿ ಅನ್ನೋ ಸಹೋದರಿ ಕೂಡ ಹುಟ್ಟಿದ್ರು.
ರಾವಣ ಪಡೆದ ವರಗಳು
ತಂದೆಯಿಂದ ವೇದ, ಶಾಸ್ತ್ರ, ಸಂಗೀತ ಕಲಿತ ರಾವಣ, ತಾಯಿಯ ಮಾತಿನಂತೆ ಅಸುರ ಶಕ್ತಿ ಹೆಚ್ಚಿಸಿಕೊಳ್ಳಲು ಘೋರ ತಪಸ್ಸು ಮಾಡಿದ. ಬ್ರಹ್ಮದೇವನನ್ನು ಮೆಚ್ಚಿಸಿ ದೇವತೆಗಳು, ರಾಕ್ಷಸರು, ಯಕ್ಷರಿಂದ ತನಗೆ ಸಾವು ಬಾರದಂತೆ ವರ ಪಡೆದ. ಹಾಗೇ ಪರಶಿವನನ್ನು ತನ್ನ ಭಕ್ತಿ ಹಾಗೂ ಸಾಮಗಾನದಿಂದ ಒಲಿಸಿಕೊಂಡು ಆತ್ಮಲಿಂಗ ಮತ್ತು ಶಕ್ತಿಶಾಲಿ 'ಚಂದ್ರಹಾಸ' ಖಡ್ಗವನ್ನು ಉಡುಗೊರೆಯಾಗಿ ಪಡೆದ.
ಮಲಸಹೋದರನನ್ನು ಬಿಡಲಿಲ್ಲ
ಆ ಕಾಲದಲ್ಲಿ ಸಂಪತ್ತಿಗೆ ಹೆಸರಾಗಿದ್ದ 'ಲಂಕಾ ನಗರ' ರಾವಣನ ಅಣ್ಣ ಕುಬೇರನ ಆಳ್ವಿಕೆಯಲ್ಲಿತ್ತು. ತಂದೆ ಒಬ್ಬರೇ ಆದರೂ ಕುಬೇರ ದೇವತೆಗಳ ಕಡೆ, ರಾವಣ ಅಸುರರ ಕಡೆ ನಿಂತರು. ಅಪಾರ ಶಕ್ತಿ ಸಂಪಾದಿಸಿದ ರಾವಣ, ತನ್ನ ತಾಯಿಯ ಆಸೆಯಂತೆ ಲಂಕೆಯ ಮೇಲೆ ದಂಡೆತ್ತಿ ಹೋಗಿ ಕುಬೇರನನ್ನು ಸೋಲಿಸಿದ. ಅಷ್ಟೇ ಅಲ್ಲ, ಆತನ ಬಳಿ ಇದ್ದ 'ಪುಷ್ಪಕ ವಿಮಾನ'ವನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡ.
ಯಶ್ ಪಾತ್ರದ ಬಗ್ಗೆ ಚರ್ಚೆ
ಈ ರೀತಿ ಕುಬೇರನನ್ನು ಲಂಕೆಯಿಂದ ಓಡಿಸಿ ರಾವಣ ಲಂಕೆಯ ಸಿಂಹಾಸನ ಏರಿದ. ರಾವಣನ ಆಳ್ವಿಕೆಯಲ್ಲಿ ಲಂಕೆ ಚಿನ್ನದ ನಾಡಾಗಿ ಬದಲಾಯ್ತು. ಭಾರತದಲ್ಲಿ ಹುಟ್ಟಿ, ವೇದಪಂಡಿತನಾಗಿ ಬೆಳೆದು, ತನ್ನ ಪರಾಕ್ರಮದಿಂದ ಲಂಕಾಧಿಪತಿಯಾದ ರಾವಣನ ಕಥೆ ಪುರಾಣಗಳಲ್ಲಿ ಒಂದು ವಿಶೇಷ ಅಧ್ಯಾಯ. ಇತ್ತೀಚೆಗೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಪಾರ್ಟ್ 1 ರಿಲೀಸ್ ಆಗಿದೆ. ಇದರಲ್ಲಿ ರಾವಣನಾಗಿ ಯಶ್ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗ್ತಿದ್ದ ಹಾಗೆ ನೆಟ್ಟಿಗರು ರಾವಣನ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಚರ್ಚೆ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













