MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಲಾಸ್ ಎಂಜಲೀಸ್‌ನಲ್ಲಿ 'ರಾಮಾಯಣ'.. ಸಂದರ್ಶನಗಳಲ್ಲಿ ಯಶ್-ಸಾಯಿ ಪಲ್ಲವಿ ಬಿಚ್ಚಿಟ್ಟ ಸತ್ಯಗಳಲ್ಲಿವೆ ನಿಜವಾದ ಲೈಫ್ ಲೆಸನ್!

ಲಾಸ್ ಎಂಜಲೀಸ್‌ನಲ್ಲಿ 'ರಾಮಾಯಣ'.. ಸಂದರ್ಶನಗಳಲ್ಲಿ ಯಶ್-ಸಾಯಿ ಪಲ್ಲವಿ ಬಿಚ್ಚಿಟ್ಟ ಸತ್ಯಗಳಲ್ಲಿವೆ ನಿಜವಾದ ಲೈಫ್ ಲೆಸನ್!

"ಸಿನಿಮಾ ನೋಡಿ ಯಥರ್ವ್ ಜೋರಾಗಿ ಅಳುತ್ತಿದ್ದ. 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದಿದ್ದಾರೆ ಸಾಯಿ ಪಲ್ಲವಿ.

2 Min read
Author : Shriram Bhat
Published : Nov 02 2026, 10:16 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ʻರಾಮಾಯಣʼ ಸಿನಿಮಾ ನೋಡಿ ಕಣ್ಣೀರಿಟ್ಟ ಯಶ್‌ ಪುತ್ರ ಯಥರ್ವ್‌; ಸಾಯಿ ಪಲ್ಲವಿ ಬಿಚ್ಚಿಟ್ಟ ಭಾವುಕ ಸಂಗತಿ!

Ramayana Movie: ತೆರೆಮೇಲೆ ರಾಕ್ಷಸ ರಾಜ ರಾವಣನಾಗಿ ಅಬ್ಬರಿಸುವ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಂಡು ಅವರ ಪುತ್ರ ಯಥರ್ವ್‌ ಕಣ್ಣೀರಿಟ್ಟಿದ್ದಾನೆ. ಅಪ್ಪನನ್ನು ಹೀರೋ ಎಂದುಕೊಂಡಿದ್ದ ಮಗನಿಗೆ ರಾವಣನ ಪಾತ್ರವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಜಟಾಯು ಪಕ್ಷಿಯ ರೆಕ್ಕೆ ಕತ್ತರಿಸುವ ದೃಶ್ಯ ಕಂಡು ಆತ ದುಃಖದಿಂದ ಅತ್ತಿದ್ದಾನೆ. ಈ ಮುದ್ದಾದ, ಭಾವುಕ ಪ್ರಸಂಗವನ್ನು ನಟಿ ಸಾಯಿ ಪಲ್ಲವಿ ಇದೀಗ ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ನಿತೇಶ್ ತಿವಾರಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಯಶ್ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದರೆ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪಾತ್ರಗಳು, ದೃಶ್ಯಗಳು ಹಾಗೂ ತಾರಾಗಣದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಯಶ್ ಅವರ ಮನೆಯಲ್ಲೇ ನಡೆದ ಪುಟ್ಟ ಘಟನೆಯೊಂದು ಅಭಿಮಾನಿಗಳ ಗಮನ ಸೆಳೆದಿದೆ.

Related Articles

Related image1
Suriya: 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!
Related image2
'ವಿವಾಹಿತ ಪುರುಷನನ್ನು ಮದುವೆಯಾಗಲ್ಲ' ಎಂದಿದ್ದ ಶ್ರೀದೇವಿ ಕೊನೆಗೆ 2 ಮಕ್ಕಳ ತಂದೆಗೆ ಹೆಂಡತಿ ಆಗಿದ್ದು ಆ ಘಟನೆಯಿಂದ!
37
Image Credit : Instagram

ಅಪ್ಪನೇ ಹೀರೋ, ರಾವಣ ಹೇಗಾಗ್ತಾರೆ?

ನಟ ಯಶ್ ಅವರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಈ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಸುಮಾ ಕನಕಾಲ ಅವರೊಂದಿಗಿನ ಮಾತುಕತೆಯಲ್ಲಿ ಮಾತನಾಡಿದ ಯಶ್, ಮಕ್ಕಳಿಗೆ ಸಾಮಾನ್ಯವಾಗಿ ಅಜ್ಜ-ಅಜ್ಜಿಯರು ರಾಮಾಯಣದ ಕಥೆಗಳನ್ನು ಹೇಳುತ್ತಾರೆ. ಹೀಗಾಗಿ ತಮ್ಮ ಮಗನಿಗೂ ರಾಮಾಯಣದ ಕಥೆ ಪರಿಚಯವಿದೆ ಎಂದು ತಿಳಿಸಿದ್ದಾರೆ.

47
Image Credit : Instagram

"ನನ್ನ ಮಗನ ದೃಷ್ಟಿಯಲ್ಲಿ ನಾನೇ ಯಾವಾಗಲೂ ಹೀರೋ. ಆದರೆ ಈಗ ಅವನಿಗೆ ರಾಮಾಯಣದ ಕಥೆ ಗೊತ್ತಿದೆ. ಹೀಗಾಗಿ ನನ್ನ ಬಳಿ ಬಂದು, 'ಡ್ಯಾಡಿ, ನೀನು ರಾವಣನಾ? ರಾಮ ಅಲ್ಲವಾ?' ಎಂದು ಕೇಳುತ್ತಾನೆ. ಅವನ ಈ ಮುಗ್ಧ ಪ್ರಶ್ನೆಗಳಿಗೆ ಏನು ಉತ್ತರಿಸಬೇಕು ಎಂಬುದೇ ನನಗೆ ತಿಳಿಯುತ್ತಿರಲಿಲ್ಲ" ಎಂದು ಯಶ್ ನಗುತ್ತಲೇ ಹೇಳಿದ್ದಾರೆ.

57
Image Credit : Instagram

ಮಕ್ಕಳಿಗೆ ತಂದೆಯೇ ಆದರ್ಶ. ಅದರಲ್ಲೂ ತೆರೆಮೇಲೆ ಸದಾ ಹೀರೋ ಆಗಿ ಕಾಣಿಸಿಕೊಳ್ಳುವ ಯಶ್ ಅವರನ್ನು ತಮ್ಮ ಮಗ ರಾವಣನ ಪಾತ್ರದಲ್ಲಿ ನೋಡಿದಾಗ ಉಂಟಾದ ಗೊಂದಲ ನಿಜಕ್ಕೂ ವಿಶೇಷವಾಗಿತ್ತು.

ಸಿನಿಮಾ ನೋಡಿ ಕಣ್ಣೀರಿಟ್ಟ ಯಥರ್ವ್!

ಯಶ್ ತಮ್ಮ ಇಬ್ಬರು ಮಕ್ಕಳೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಸಿನಿಮಾವನ್ನು ವೀಕ್ಷಿಸಿದ್ದರು. ಮಕ್ಕಳ ಪಾಲಿಗೆ ಅದೊಂದು ಮೊದಲ ಸಿನಿಮಾ ಅನುಭವವಾಗಿತ್ತು. ಒಳ್ಳೆಯದು, ಕೆಟ್ಟದ್ದು, ಪರಸ್ಪರ ಗೌರವಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಕಲಿಯುವ ವಯಸ್ಸಿನಲ್ಲಿ ಪರದೆಯ ಮೇಲೆ ಕಂಡ ದೃಶ್ಯಗಳು ಯಥರ್ವ್‌ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.

ಈ ವಿಚಾರವನ್ನು ಯಶ್ ವಿವರಿಸುತ್ತಿದ್ದಾಗ ನಟಿ ಸಾಯಿ ಪಲ್ಲವಿ ಮಧ್ಯಪ್ರವೇಶಿಸಿ, ಥಿಯೇಟರ್‌ನಿಂದ ಹೊರಬಂದ ಬಳಿಕ ನಡೆದ ಘಟನೆಯನ್ನು ವಿವರಿಸಿದ್ದಾರೆ.

67
Image Credit : Instagram

"ಸಿನಿಮಾ ಮುಗಿದು ಹೊರಬಂದಾಗ ಯಥರ್ವ್ ಜೋರಾಗಿ ಅಳುತ್ತಿದ್ದ. ಅವನು ಯಶ್ ಬಳಿ ಬಂದು, 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದು ಸಾಯಿ ಪಲ್ಲವಿ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಮಗನ ಮುಗ್ಧ ಮಾತುಗಳಿಗೆ ಅಭಿಮಾನಿಗಳು ಫಿದಾ!

‘ರಾಮಾಯಣ’ದ ಕಥೆಯಲ್ಲಿ ರಾವಣನು ಜಟಾಯು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸುವ ದೃಶ್ಯ ಪ್ರಮುಖವಾಗಿರುತ್ತದೆ. ಈ ದೃಶ್ಯವನ್ನು ಕಂಡ ಯಥರ್ವ್, ತನ್ನ ತಂದೆಯೇ ನಿಜವಾಗಿಯೂ ಹಕ್ಕಿಗೆ ನೋವುಂಟು ಮಾಡಿದ್ದಾರೆ ಎಂದು ಭಾವಿಸಿ ದುಃಖಿತನಾಗಿದ್ದ. ಸಿನಿಮಾ ಮತ್ತು ನೈಜ ಜೀವನದ ನಡುವಿನ ವ್ಯತ್ಯಾಸವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಮಗನ ಮುಗ್ಧ ಮನಸ್ಸು ಈ ಘಟನೆಯಲ್ಲಿ ಎದ್ದು ಕಾಣುತ್ತದೆ.

77
Image Credit : Instagram

ತೆರೆಮೇಲೆ ರಾವಣನಾಗಿ ಭಯ ಹುಟ್ಟಿಸುವ ಯಶ್, ಮಗನ ಪಾಲಿಗೆ ಮಾತ್ರ ಪ್ರೀತಿಯ ಅಪ್ಪ. ಅಪ್ಪನಿಂದ ತಪ್ಪು ನಡೆದಿದೆ ಎಂದು ಭಾವಿಸಿ ಕಣ್ಣೀರಿಡುತ್ತಲೇ ಬುದ್ಧಿವಾದ ಹೇಳಿದ ಯಥರ್ವ್‌ನ ಈ ಕ್ಯೂಟ್ ಪ್ರಸಂಗ ಇದೀಗ ಅಭಿಮಾನಿಗಳ ಮನ ಗೆದ್ದಿದೆ. ರಾವಣನ ಪಾತ್ರಕ್ಕಾಗಿ ಯಶ್ ನಡೆಸಿರುವ ತಯಾರಿ ಒಂದೆಡೆಯಾದರೆ, ಅವರ ಮಗನ ಈ ಮುಗ್ಧ ಪ್ರತಿಕ್ರಿಯೆ ಮತ್ತೊಂದೆಡೆ ‘ರಾಮಾಯಣ’ ಚಿತ್ರದ ಬಗ್ಗೆ ಹೊಸ ಕುತೂಹಲ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ಅಮೇರಿಕಾ
ಸ್ಯಾಂಡಲ್‌ವುಡ್
ರಾಮಾಯಣ ಚಲನಚಿತ್ರ
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್: ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!
Recommended image2
55ರಲ್ಲಿ ಡಿವೋರ್ಸ್, 60ರಲ್ಲಿ 2ನೇ ಮದುವೆ: ತಮ್ಮ ಜೀವನದ ಕಹಿ ಸತ್ಯ ಬಿಚ್ಚಿಟ್ಟ ಕನ್ನಡದ ಖ್ಯಾತ ವಿಲನ್!
Recommended image3
‘ನಿಜವಾದ ಪ್ರೀತಿ ಬೇಕು, ಒಳ್ಳೆಯ ಹುಡುಗನಿದ್ದರೆ ಇನ್‌ಸ್ಟಾಗ್ರಾಂಗೆ ಮೆಸೇಜ್ ಮಾಡಿ’: ಹುಚ್ಚ ನಟಿ ಓಪನ್ ಆಫರ್!
Related Stories
Recommended image1
Suriya: 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!
Recommended image2
'ವಿವಾಹಿತ ಪುರುಷನನ್ನು ಮದುವೆಯಾಗಲ್ಲ' ಎಂದಿದ್ದ ಶ್ರೀದೇವಿ ಕೊನೆಗೆ 2 ಮಕ್ಕಳ ತಂದೆಗೆ ಹೆಂಡತಿ ಆಗಿದ್ದು ಆ ಘಟನೆಯಿಂದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved