ಹೌದು, ನಾನು ಬುರ್ಖಾ ಧರಿಸುತ್ತೇನೆ ಎಂದ ನಟಿ; ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಚೆಲುವೆ
ಕಾಫಿ ವಿಥ್ ಕರಣ್ ಶೋನಲ್ಲಿ ನಟಿ ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಬುರ್ಖಾ ಧರಿಸುವುದಾಗಿ ಹೇಳಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಈ ದಾರಿ ಕಂಡುಕೊಂಡಿರುವುದಾಗಿ ತಿಳಿಸಿದ್ದು, ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಅಂಗಳದ ಮಾದಕ ಚೆಲುವೆ
ಬಾಲಿವುಡ್ ಅಂಗಳದ ಮಾದಕ ಚೆಲುವೆ ಮಲಿಕಾ ಶೆರವಾತ್ ಅವರ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾನು ಬುರ್ಖಾ ಹಾಕಿಕೊಳ್ಳೋತ್ತೇನೆ. ಇದು ನನ್ನ ಖಾಸಗಿತನ ಕಾಪಾಡಿಕೊಳ್ಳಲು ಸಹಾಯ ಮಾಡಿದೆ ಎಂದು ನಟಿ ಮಲಿಕಾ ಅವರು ಕಾಫಿ ವಿಥ್ ಕರಣ್ ಶೋನಲ್ಲಿ ಬಹಿರಂಗಪಡಿಸಿದ್ದರು.
ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ
ಸೆಲೆಬ್ರಿಟಿಗಳಾದ ನಾವು ಸಹ ಎಲ್ಲರಂತೆಯೇ ಮನುಷ್ಯರು. ನಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಜಡ್ಜ್ ಮಾಡುತ್ತಾರೆ. ಕೆಲವೊಮ್ಮೆ ನಮ್ಮ ಮೇಕಪ್, ಡ್ರೆಸ್ ಚೆನ್ನಾಗಿರಲ್ಲ. ಎಲ್ಲಾ ಸಮಯದಲ್ಲಿಯೂ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ. ಇಂತಹ ವಿಷಯಗಳಲ್ಲಿ ನಮ್ಮನ್ನು ಜಡ್ಜ್ ಮಾಡಲಾಗುತ್ತದೆ ಎಂದು ಮಲಿಕಾ ಶೆರಾವತ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು
ನನಗೂ ಕೆಲವೊಂದು ಬೇಸರದ ದಿನಗಳು ಮತ್ತು ವೈಯಕ್ತಿಕ ಕೆಲಸಗಳು ಇರುತ್ತವೆ. ಹೊರಗೆ ಬಂದಾಗ ನನ್ನ ಖಾಸಗಿತನವನ್ನು ಕಾಪಾಡಿಕೊಳ್ಳಲು ನಾನು ಬುರ್ಖಾ ಹಾಕಿಕೊಳ್ಳುತ್ತೇನೆ ಎಂದು ಮಲ್ಲಿಕಾ ಹೇಳುತ್ತಿದ್ದಂತೆ ಯಾರಿಂದ ತಪ್ಪಿಸಿಕೊಳ್ಳಲು ಈ ಬುರ್ಖಾ ಎಂದು ಕರಣ್ ಜೋಹರ್ ಕೇಳಿದಾಗ, ಕ್ಯಾಮೆರಾಗಳಿಂದ ಎಂದು ನಟಿ ಹೇಳುತ್ತಾರೆ.
ಖಾಸಗಿ ವಿಷಯಗಳೆಲ್ಲಾ ಬಹಿರಂಗಗೊಳ್ಳೋದು ನನಗೆ ಇಷ್ಟವಿಲ್ಲ
ಇದೇ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಮಲಿಕಾ ನಿಮ್ಮ ಬಗ್ಗೆ ನನಗೆ ಹೆಮ್ಮೆಯಾಗುತ್ತೆ. ನಿಮಗೆ ನಿಮ್ಮ ಮೇಲೆ ನಂಬಿಕೆ ಇದೆ. ಈ ವ್ಯಕ್ತಿತ್ವ ಒಳ್ಳೆಯದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನನಗೆ ಸಮಾಜದಲ್ಲಿ ಅಟೆನ್ಷನ್ ಬೇಕಾದ್ರೆ ನಾನು ಏನು ಬೇಕಾದ್ರೂ ಮಾಡಬಲ್ಲೆ. ಇದು ನನ್ನಲ್ಲಿರುವ ವಿಶ್ವಾಸ ಎಂದು ಮಲಿಕಾ ಹೇಳಿಕೊಂಡಿದ್ದಾರೆ. ನಟಿಯಾದ ಮಾತ್ರಕ್ಕೆ ನನ್ನ ಖಾಸಗಿ ವಿಷಯಗಳೆಲ್ಲಾ ಬಹಿರಂಗಗೊಳ್ಳೋದು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Shocking: ಮದುವೆಗೂ ಮುನ್ನವೇ ಮುರಿದು ಬಿತ್ತು ಲವ್; ಧನುಷ್-ಮೃಣಾಲ್ ಬ್ರೇಕಪ್‌ನಲ್ಲೂ ಒಂದು ಸೀಕ್ರೆಟ್ ಇದೆ!
ಕನ್ನಡ ಸಿನಿಮಾದಲ್ಲಿಯೂ ನಟನೆ
ಬೋಲ್ಡ್ ಸೀನ್‌ಗಳಿಂದಲೇ ಜನಪ್ರಿಯತೆ ಪಡೆದುಕೊಂಡ ನಟಿಯೇ ಮಲಿಕಾ ಶೆರವಾತ್. ಕ್ವಾಹಿಶ್ (2003) ಮತ್ತು ಮರ್ಡರ್ (2004) ಸಿನಿಮಾಗಳು ಮಲ್ಲಿಕಾ ಶೆರಾವತ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟವು. ಪ್ಯಾರ್ ಕೇ ಸೈಡ್ ಎಫೆಕ್ಟ್, ಆಪ್ ಕಾ ಸರೂರ್, ವೆಲ್‌ಕಮ್, ಡಬಲ್ ಧಮಾಕಾ ಸೇರಿದಂತೆ ಚೀನಾದ ದಿ ಮಿಥ್ ಎಂಬ ಸಿನಿಮಾದಲ್ಲಿಯೂ ಮಲಿಕಾ ಅವರು ನಟಿಸಿದ್ದಾರೆ. ನಿರ್ದೇಶಕ ಪ್ರೇಮ್ ನಟನೆಯ ಈ ಪ್ರೀತಿ ಯಾಕೆ ಭೂಮಿ ಮೇಲಿದೆ ಸಿನಿಮಾದಲ್ಲಿಯೂ ಮಲಿಕಾ ಶೆರಾವತ್ ಗೆಸ್ಟ್ ಅಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Actor Anil Kapoor ಮಗಳು ರಿಯಾ ಕಪೂರ್‌ರ 1 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಕಿವಿಓಲೆ ಕಳ್ಳತನ! ಹೇಗೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

