Bigg Boss 13ಕ್ಕೆ ಬಂತು ಆಫರ್: ಷೋಗೆ ಹೋಗಲ್ಲ ಎಂದ ಮುಸ್ಲಿಂ ಮುಖಂಡ ಏನ್ ಹೇಳಿದ್ರು ಕೇಳಿ
ಸೆಪ್ಟೆಂಬರ್ನಿಂದ ಆರಂಭವಾಗಲಿರುವ ಬಿಗ್ಬಾಸ್ 13ನೇ ಸೀಸನ್‌ಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಹೋರಾಟ, ಸ್ಪೀಕರ್ ಬ್ಯಾನ್ ವಿಚಾರಗಳಲ್ಲಿ ಸದ್ದು ಮಾಡಿದ್ದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್, ತಮಗೆ ಬಂದಿದ್ದ ಬಿಗ್ಬಾಸ್ ಆಫರ್ ಅನ್ನು ತಿರಸ್ಕರಿಸಿರುವುದಾಗಿ ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ನಿಂದ ಆರಂಭ
ಬಿಗ್ಬಾಸ್ 13 ಬರುವ ಸೆಪ್ಟೆಂಬರ್ ತಿಂಗಳಿನಿಂದ ಆರಂಭ ಆಗಲಿದೆ ಎನ್ನುವ ಬಗ್ಗೆ ಇದಾಗಲೇ ವಾಹಿನಿ ಅನೌನ್ಸ್ ಮಾಡಿದೆ. ಇದಾಗಲೇ ಮನೆಗೆ ಈ ಬಾರಿ ಹೋಗುವವರು ಯಾರು ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂಟ್ರವರ್ಸಿ ಮಾಡಿಕೊಂಡವರಿಗೇ ಹೆಚ್ಚು ಅವಕಾಶ ಇರುವ ಕಾರಣ, ಅಂಥವರ ಹೆಸರನ್ನು ಜನರು ಹೆಕ್ಕಿ ತೆಗೆಯುತ್ತಿದ್ದಾರೆ.
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ಗೆ ಆಫರ್
ಇದೀಗ, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರು ತಮಗೆ ಬಿಗ್ಬಾಸ್ನ ಆಫರ್ ಬಂದಿದ್ದು, ಅದನ್ನು ತಾವು ರಿಜೆಕ್ಟ್ ಮಾಡಿರುವುದಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಲವು ವಿಷಯಗಳಲ್ಲಿ ಸದ್ದು
ಅಷ್ಟಕ್ಕೂ ಅಬ್ದುಲ್ ರಜಾಕ್ ಅವರು ಇದಾಗಲೇ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸುವ ಮೂಲಕ ಸುದ್ದಿ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಹಿಜಾಬ್ ಹೋರಾಟಗಾರ್ತಿಯರಿಗೆ ಸುದ್ದಿಯಲ್ಲಿದ್ದರು. ಮಸೀದಿಗಳಲ್ಲಿ ಸ್ಪೀಕರ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ರಜಾಕ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದರು. ಹೀಗೆ ಹಲವಾರು ಸಂದರ್ಭಗಳಲ್ಲಿ ಅಬ್ದುಲ್ ರಜಾಕ್ ಅವರ ಸದ್ದು ಮಾಡುತ್ತಲೇ ಇರುತ್ತಾರೆ.
ಜಾಲತಾಣದಲ್ಲಿ ಶೇರ್
ಹೀಗೆ ಫೇಮಸ್ ಆಗಿರುವ ಕಾರಣದಿಂದ ಬಿಗ್ಬಾಸ್ಗೆ ಆಫರ್ ಬಂದಿರುವುದಾಗಿ ಹೇಳಿರುವ ಅವರು, ವಾಹಿನಿ ಕಡೆಯಿಂದ ತಮಗೆ ಬಂದಿರುವ ಫೋನ್ ಕಾಲ್ನ ಆಡಿಯೋ ಅನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೇಮಸ್ ಇದ್ದೀರಿ
ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ತುಂಬಾ ಫೇಮಸ್ ಇದ್ದೀರಿ. ಆದ್ದರಿಂದ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಒಪ್ಪಿಗೆ ಇದೆಯೇ ಎಂದು ಅತ್ತ ಕಡೆಯಿಂದ ದನಿ ಬಂದಾಗ, ಎರಡು ದಿನ ಟೈಮ್ ಕೊಡಿ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.
ಆಫರ್ ತಿರಸ್ಕಾರ
ಬಳಿಕ, ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿದ್ದು, ತಮ್ಮನ್ನು ಆಯ್ಕೆ ಮಾಡಿರುವ ವಾಹಿನಿಗೆ ಧನ್ಯವಾದ ಸಲ್ಲಿಸಿ, ಈ ಆಫರ್ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ಕೊಟ್ಟಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

