- Home
- Entertainment
- Cine World
- Actor Anil Kapoor ಮಗಳು ರಿಯಾ ಕಪೂರ್‌ರ 1 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಕಿವಿಓಲೆ ಕಳ್ಳತನ! ಹೇಗೆ?
Actor Anil Kapoor ಮಗಳು ರಿಯಾ ಕಪೂರ್‌ರ 1 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಕಿವಿಓಲೆ ಕಳ್ಳತನ! ಹೇಗೆ?
Bollywood Actor Anil Kapoor Daughter: ಬಾಲಿವುಡ್ ನಟ ಅನಿಲ್ ಕಪೂರ್ ಅವರ ಎರಡನೇ ಪುತ್ರಿ, ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಅವರ ಕಿವಿಓಲೆ ಕಳ್ಳತನ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.

ಮೆಟ್ ಗಾಲ ಕಾರ್ಯಕ್ರಮ
ಮೆಟ್ ಗಾಲ ಕಾರ್ಯಕ್ರಮದಲ್ಲಿ ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ಭಾಗವಹಿಸಿದ್ದರು. ಈ ಇವೆಂಟ್‌ನಲ್ಲಿ ಭಾಗವಹಿಸಲು ಅವರು ಆಭರಣವನ್ನು ಬಾಡಿಗೆಗೆ ಪಡೆದಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ನ್ಯೂಯಾರ್ಕ್‌ಗೆ ಹೋಗುತ್ತಿದ್ದರು. ಆಗ ಅವರು ಜಾಂಬಿಯಾ ಪಚ್ಚೆ ಕಲ್ಲಿನಿಂದ ಮಾಡಿದ 18 ಕ್ಯಾರೆಟ್ ಎರಡು ಜೋಡಿ ಕಿವಿಯೋಲೆಗಳನ್ನು ಕದ್ದಿದ್ದಾರಂತೆ.
ಕೋಟಿ 35 ಲಕ್ಷ ರೂಪಾಯಿ ಕಿವಿಯೋಲೆ
ಮುಂಬೈ ದುಬೈ ನ್ಯೂಯಾರ್ಕ್ ಸಂಪರ್ಕ ವಿಮಾನ ಇದಾಗಿತ್ತು. ಆಗ 1 ಕೋಟಿ 35 ಲಕ್ಷ ರೂಪಾಯಿ ಕಿವಿಯೋಲೆ ಕದ್ದಿದ್ದಾರೆ. ಪ್ರಸಿದ್ಧ ಆಭರಣ ವ್ಯಾಪಾರಿಯಿಂದ ಆಭರಣಗಳನ್ನು ಬಾಡಿಗೆಗೆ ಪಡೆದಿದ್ದರು. ನ್ಯೂಯಾರ್ಕ್ ಹೋಟೆಲ್‌ನಲ್ಲಿ ಕಳ್ಳತನ ಆಗಿದ್ದು, ದೂರು ದಾಖಲಾಗಿದೆ.
ರಿಯಾ ಕಪೂರ್ ಯಾರು?
ರಿಯಾ ಕಪೂರ್ ಅವರು ನಿರ್ಮಾಪಕಿ. ಅನಿಲ್ ಕಪೂರ್ ಅವರ ಎರಡನೇ ಪುತ್ರಿ ಇವರು. ಈಗಾಗಲೇ ಅವರು ಸಾಕಷ್ಟು ಸಿನಿಮಾಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆಯೇಷಾ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸೋನಮ್ ಕಪೂರ್, ಅಭಯ್ ಡಿಯೋಲ್ ಈ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಖೂಬ್ಸೂರತ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸೋನಮ್ ಕಪೂರ್, ಫವಾದ್ ಅಪ್ಝಲ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

