- Home
- Entertainment
- ಗೊತ್ತಿಲ್ಲದೇ ದೊಡ್ಡ ತಪ್ಪು ಮಾಡಿಬಿಟ್ಟೆ, ಈಗ ಅರಿವಾಗ್ತಿದೆ- ನೀವು ನನ್ನ ಹಾಗೆ ಮಾಡಬೇಡಿ: Niveditha Gowda ಕ್ಷಮೆ
ಗೊತ್ತಿಲ್ಲದೇ ದೊಡ್ಡ ತಪ್ಪು ಮಾಡಿಬಿಟ್ಟೆ, ಈಗ ಅರಿವಾಗ್ತಿದೆ- ನೀವು ನನ್ನ ಹಾಗೆ ಮಾಡಬೇಡಿ: Niveditha Gowda ಕ್ಷಮೆ
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ಅವರು 'ನವಿಲೇ ನವಿಲೇ' ಹಾಡಿಗೆ ನವಿಲಿನ ಗರಿ ಬಳಸಿ ನೃತ್ಯ ಮಾಡಿದ್ದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಕಾನೂನಿನ ಅರಿವಿಲ್ಲದೆ ಈ ತಪ್ಪು ನಡೆದಿದ್ದು, ಇಬ್ಬರೂ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಕೇಸ್ನಲ್ಲಿ ಸಿಲುಕಿದ ನಿವೇದಿತಾ ಗೌಡ
ಬಿಗ್ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ನಿವೇದಿತಾ ಗೌಡ (Bigg Boss fame) ಅವರು ಇದೀಗ ಒಂದು ಕೇಸ್ನಲ್ಲಿ ಸಿಲುಕಿಕೊಂಡಿದ್ದಾರೆ. ಅದು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಆರೋಪ.
ನವಿಲೇ ನವಿಲೇ ಡಾನ್ಸ್
ಡಾನ್ಸರ್ ಆಗಿರೋ ಕಿಶನ್ ಅವರು ಇದಾಗಲೇ ವಿವಿಧ ನಟಿಯರ ಜೊತೆ ಮೈ ಝುಂ ಎನ್ನುವ ನೃತ್ಯವನ್ನು ಕೋರಿಯೋಗ್ರಫಿ ಮಾಡಿ ಖುದ್ದು ಹೆಜ್ಜೆ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಅವರು ನಿವೇದಿತಾ ಗೌಡ (Niveditha Gowda) ಅವರ ಜೊತೆಯಲ್ಲಿ ನವಿಲೇ ನವಿಲೇ ಹಾಡಿಗೆ ಡಾನ್ಸ್ ಮಾಡಿದ್ದರು.
ನವಿಲಿನ ಗರಿ- ದೂರು
ಈ ಹಾಡಿನಲ್ಲಿ ಇಬ್ಬರೂ ನವಿಲಿನ ಗರಿಯನ್ನು ಬಳಸಿಕೊಂಡು ಡಾನ್ಸ್ ಮಾಡಿದ್ದರು. ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ ನವಿಲಿನ ಗರಿಯನ್ನು ಹೀಗೆ ಬಳಸುವುದು ಅಪರಾಧ. ನವಿಲು ರಾಷ್ಟ್ರೀಯ ಪಕ್ಷಿ ಆಗಿರುವ ಕಾರಣ ಅದರ ಗರಿಯನ್ನು ಮನೆಯಲ್ಲಿ ಕೂಡ ಇಟ್ಟುಕೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ದೂರು ದಾಖಲಾಗಿದೆ.
ಕಿಶನ್ ಕ್ಷಮೆ
ಇದಾಗಲೇ ಕಿಶನ್ ಬಿಳಗಲಿ ಅವರು ಕ್ಷಮೆ ಕೋರಿದ್ದಾರೆ. ಇದೀಗ ನಿವೇದಿತಾ ಗೌಡ ಅವರೂ ಕ್ಷಮೆ ಕೋರಿದ್ದು, ನವಿಲಿನ ಗರಿಯನ್ನು ಬಳಸುವುದು ಅಪರಾಧ ಎಂದು ತಿಳಿದಿರಲಿಲ್ಲ. ತಿಳಿಯದೇ ತಪ್ಪು ಮಾಡಿದ್ದೇವೆ. ಕ್ಷಮೆ ಕೋರುತ್ತಿದ್ದೇನೆ ಎಂದಿದ್ದಾರೆ.
ಗೊತ್ತಿರದೇ ತಪ್ಪಾಯ್ತು ಎಂದ ನಿವೇದಿತಾ
ಎಲ್ಲರೂ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಅದಕ್ಕೆ ಸಹಕರಿಸಬೇಕು. ಅದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಅರಿಯದೇ ನಾವು ತಪ್ಪು ಮಾಡಿಬಿಟ್ಟಿದ್ದೇವೆ. ನೀವು ಈ ತಪ್ಪನ್ನು ಮಾಡಬೇಡಿ ಎಂದಿದ್ದಾರೆ ನಿವೇದಿತಾ. ನಮ್ಮ ವಿರುದ್ಧ ದೂರು ದಾಖಲಾಗಿದೆ. ತನಿಖೆಗೆ ನಾವು ಸಹಕರಿಸುತ್ತೇವೆ. ನಮ್ಮಿಂದ ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತೇವೆ ಎಂದಿದ್ದಾರೆ.
ಕಿಶನ್ ಹೇಳಿದ್ದೇನು
ಇದಾಗಲೇ ಕಿಶನ್ ಅವರು, ನವಿಲು ಗರಿಯನ್ನ ರೆಂಟ್ ಗೆ ತಗೊಂಡ್ವಿ ಕೋಲ್ಯಾಬ್ ನಲ್ಲಿ ಮಾಡಿದ್ದು, ದರ್ಗಾಗಳಲ್ಲೂ ನವಿಲುಗರಿಯನ್ನ ಇಟ್ಟುಕೊಂಡಿರುತ್ತಾರೆ. ರೆಂಟ್ ಗೆ ತಗೋಳೋದು ಕೂಡ ವನ್ಯ ಜೀವಿ 1972 ಆಕ್ಟ್ ಪ್ರಕಾರ ತಪ್ಪು ಅನ್ನೋದನ್ನ ಹೇಳಿದ್ರು. ಇದು ನಮಗೆ ಗೊತ್ತಿರಲಿಲ್ಲ. ನವಿಲು ಗರಿ ಬಳಸಿ ಡಾನ್ಸ್ ಮಾಡಿದ್ದಕ್ಕೆ ನಾನು ಕ್ಷಮೆ ಕೇಳ್ತೀನಿ. ಇನ್ನು ಯಾವುತ್ತು ಇತರ ಮಾಡೋದಕ್ಕೆ ಹೋಗದ ಹಾಗೆ ಜಾಗ್ರತೆ ವಹಿಸುತ್ತೇನೆ ಎಂದು ಜಾಲತಾಣದಲ್ಲಿ ಕ್ಷಮೆ ಕೋರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

