- Home
- Entertainment
- TV Talk
- ತುಂಬಿದ ಕೊಡ ತುಳಿಕೋದಿಲ್ಲ: ನಂದಗೋಕುಲ ಧಾರಾವಾಹಿ ಟೀಂ ಜೊತೆ ಸ್ನೇಹ ಸಂಬಂಧ ಬಿಡದ ರಾಧಿಕಾ ಪಂಡಿತ್
ತುಂಬಿದ ಕೊಡ ತುಳಿಕೋದಿಲ್ಲ: ನಂದಗೋಕುಲ ಧಾರಾವಾಹಿ ಟೀಂ ಜೊತೆ ಸ್ನೇಹ ಸಂಬಂಧ ಬಿಡದ ರಾಧಿಕಾ ಪಂಡಿತ್
ನಟಿ ರಾಧಿಕಾ ಪಂಡಿತ್ ತಮ್ಮ ನಟನಾ ಪಯಣದ ಆರಂಭದ 'ನಂದಗೋಕುಲ' ಧಾರಾವಾಹಿ ತಂಡದೊಂದಿಗೆ 20 ವರ್ಷಗಳ ನಂತರ ಸ್ನೇಹಿತರ ದಿನ ಆಚರಿಸಿದ್ದಾರೆ. ಖ್ಯಾತಿಯ ಉತ್ತುಂಗದಲ್ಲಿದ್ದರೂ ಹಳೆಯ ಸ್ನೇಹಿತರನ್ನು ಮರೆಯದ ಅವರ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಫೋಟೋಗಳು ವೈರಲ್ ಆಗಿವೆ.

ಕನ್ನಡ ಚಿತ್ರರಂಗದ (Kannada Film Industry) ಜನಪ್ರಿಯ ನಟಿ ರಾಧಿಕಾ ಪಂಡಿತ್ ಅವರು ಖ್ಯಾತಿಯ ಉತ್ತುಂಗದಲ್ಲಿದ್ದರೂ ತಮ್ಮ ಹಳೆಯ ಸ್ನೇಹಿತರನ್ನು ಮರೆಯದೇ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಸುಮಾರು 20 ವರ್ಷಗಳ ಹಿಂದೆ ತಮ್ಮ ನಟನಾ ಪಯಣ ಆರಂಭಿಸಿದ್ದ 'ನಂದಗೋಕುಲ' ಧಾರಾವಾಹಿ ತಂಡದ (Serial Team) ಸ್ನೇಹಿತರೊಂದಿಗೆ ಅವರು ಮತ್ತೆ ಒಂದಾಗಿ ಸ್ನೇಹಿತರ ದಿನ (Friendship Day) ಆಚರಿಸಿದ್ದು, ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಸ್ನೇಹಿತರೊಂದಿಗೆ ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡು, 'A good girl gang is proof that therapy can look like endless conversations and shared laughter…' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಲಕ್ಷಾಂತರ ಲೈಕ್‌ಗಳು ಬಂದಿದ್ದು, ನೂರಾರು ಅಭಿಮಾನಿಗಳು 'Happy Friendship Day' ಎಂದು ಶುಭಾಶಯ ಕೋರಿದ್ದಾರೆ.
ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲೂ ಪ್ರೀತಿಯ ಮಳೆಗರೆದಿದ್ದಾರೆ. 'Every daughter’s first best friend is always her mom', '10 ವರ್ಷಗಳ ಹಿಂದಿನ ಫೋಟೋ ನೋಡಿದರೂ ನೀವು ಬದಲಾಗಿಲ್ಲ', 'ಇನ್ನಷ್ಟು ಸುಂದರವಾಗಿದ್ದೀರಿ' ಎಂಬ ಅನೇಕ ಪ್ರತಿಕ್ರಿಯೆಗಳು ಹರಿದುಬಂದಿವೆ.
ಈ ಫೋಟೋ ನೋಡಿದ ಅಭಿಮಾನಿಗಳು 'ತುಂಬಿದ ಕೊಡ ತುಳಿಕೋದಿಲ್ಲ' ಎಂಬ ಮಾತನ್ನು ನೆನಪಿಸಿಕೊಂಡಿದ್ದಾರೆ. ಏಕೆಂದರೆ, ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಬಳಿಕವೂ ರಾಧಿಕಾ ಪಂಡಿತ್ ಹಾಗೂ ಅವರ ಪತಿ ಯಶ್ ತಮ್ಮ ಆರಂಭದ ದಿನಗಳ ಸ್ನೇಹಿತರೊಂದಿಗೆ ಅದೇ ಆತ್ಮೀಯ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
2005ರಲ್ಲಿ ಪ್ರಸಾರವಾಗಿದ್ದ 'ನಂದಗೋಕುಲ' ಧಾರಾವಾಹಿಯೇ ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಟನಾ ಜೀವನದ ಪ್ರಮುಖ ತಿರುವಾಗಿತ್ತು. ಇದೇ ಧಾರಾವಾಹಿಯ ಮೂಲಕ ಇಬ್ಬರೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಆ ಸಮಯದಲ್ಲಿ ಬೆಳೆದ ಸ್ನೇಹ ಇಂದಿಗೂ ಅಷ್ಟೇ ಗಟ್ಟಿಯಾಗಿ ಮುಂದುವರಿದಿದೆ.
ಇತ್ತೀಚೆಗೆ ರಾಧಿಕಾ ಪಂಡಿತ್ ಅವರ ಜನ್ಮದಿನದ ಆಚರಣೆಯಲ್ಲೂ ಇದೇ ತಂಡದ ಸ್ನೇಹಿತರು ಭಾಗಿಯಾಗಿದ್ದರು. ಇದೀಗ ಸ್ನೇಹಿತರ ದಿನದ ಸಂಭ್ರಮದಲ್ಲೂ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿರುವುದು ಅವರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸಿದೆ.
ಇಂದು ಯಶ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸ್ಟಾರ್ ಆಗಿದ್ದರೂ, ತಮ್ಮ ಮೊದಲ ಹೆಜ್ಜೆ ಇಟ್ಟ ದಿನಗಳನ್ನು ಮತ್ತು ಆ ಸಮಯದಲ್ಲಿ ಜೊತೆಗಿದ್ದ ಸ್ನೇಹಿತರನ್ನು ಮರೆಯದೇ ಇರುವ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗೆ 'ನಿಜವಾದ ಸ್ನೇಹ ಎಂದರೆ ಇದೇ', 'ಹೆಸರು, ಖ್ಯಾತಿ ಬಂದರೂ ಸಂಬಂಧಗಳನ್ನು ಉಳಿಸಿಕೊಳ್ಳುವುದು ದೊಡ್ಡ ಗುಣ' ಎಂಬಂತಹ ಕಾಮೆಂಟ್‌ಗಳು ಹೆಚ್ಚಾಗಿ ಕಾಣಿಸುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

