MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್

ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್

ಸದಾ ಸಿಡುಕಿನಿಂದ ಸುದ್ದಿಯಾಗುವ ಹಿರಿಯ ನಟಿ ಜಯಾ ಬಚ್ಚನ್‌ಗೆ ಬಾಲಿವುಡ್‌ನ ಕಿರಿಕ್ ನಟಿ ರಾಖಿ ಸಾವಂತ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದು, ರಾಖಿ ಸಲಹೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ರಾಖಿ ನೀಡಿದ ಸಲಹೆ ಏನು..?

2 Min read
Author : Anusha Kb
| Updated : Feb 07 2026, 05:41 PM IST
Share this Photo Gallery
  • FB
  • TW
  • Linkdin
  • Whatsapp
15
ಸಿಡುಕು ಮೂತಿ ಸುಬ್ಬಮ್ಮ ಜಯಾ ಬಚ್ಚನ್
Image Credit : ANI

ಸಿಡುಕು ಮೂತಿ ಸುಬ್ಬಮ್ಮ ಜಯಾ ಬಚ್ಚನ್

ಬಾಲಿವುಡ್‌ನ ಹಿರಿಯ ನಟಿ ಜಯಾ ಬಚ್ಚನ್ ಯಾರಿಗೆ ತಾನೇ ಗೊತ್ತಿಲ್ಲ, ನಟನೆಯಿಂದ ದೂರಾಗಿರುವ ಜಯಾ ಬಚ್ಚನ್ ಅವರು ಇತ್ತೀಚೆಗೆ ಸದಾ ಸಿಡುಕುವ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಪಾಪಾರಾಜಿಗಳ ಮೇಲೆ, ಫೋಟೊ ಕೇಳುವ ಅಭಿಮಾನಿಗಳ ಮೇಲೆ ಸಿಡಿಮಿಡಿಗೊಳ್ಳುವ ಜಯಾ ಬಚ್ಚನ್ ಅವರ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ವೀಡಿಯೋ ನೋಡಿದ ಅನೇಕರು ಅವರ ವರ್ತನೆಗಾಗಿ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಈ ಹೆಂಗಸಿನ ಜೊತೆ ಆ ಐಶ್ವರ್ಯಾ ರೈ ಹೇಗೆ ಇದ್ದರೋ ಏನೋ, ಇವರ ವರ್ತನೆಯಿಂದಲೇ ಐಶ್ವರ್ಯಾ ರೈ ಆ ದೊಡ್ಡಮನೆಯಿಂದ ಹೊರಟು ಬಂದಿರಬಹುದು ಎಂದೆಲ್ಲಾ ಜನ ಕಾಮೆಂಟ್ ಮಾಡ್ತಿರ್ತಾರೆ.

25
ಹೋದಲೆಲ್ಲಾ ಕಿರಿಕ್ ಮಾಡುವ ನಟಿ
Image Credit : social media

ಹೋದಲೆಲ್ಲಾ ಕಿರಿಕ್ ಮಾಡುವ ನಟಿ

ಹೀಗಿರುವ ಜಯಾ ಬಚ್ಚನ್ ಕೇವಲ ಹಿರಿಯ ನಟಿ ಮಾತ್ರವಲ್ಲ, ಆಕೆ ಸಮಾಜವಾದಿ ಪಾರ್ಟಿಯ ಸಂಸದೆಯೂ ಹೌದು. ಹೀಗಾಗಿ ಅವರ ಕಿರಿಕ್ ಕೇವಲ ಫ್ಯಾನ್ಸ್‌ಗಳ ಜೊತೆಗೋ ಪಾಪಾರಾಜಿಗಳ ಜೊತೆಯಲ್ಲಿ ಮಾತ್ರವಲ್ಲ, ಈ ಹಿಂದೆ ಅವರು ರಾಜ್ಯಸಭೆ ಸ್ಪೀಕರ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದರು. ಆಗ ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಜಗದೀಪ್ ಧನಕರ್ ಅವರು ಜಯಾ ಬಚ್ಚನ್ ಅವರ ಹೆಸರು ಕರೆಯುವ ವೇಳೆ ಜಯಾ ಅಮಿತಾಭ್ ಬಚ್ಚನ್ ಎಂದು ಕರೆದಿದ್ದಕ್ಕೆ ರಾಜ್ಯಾಸಭಾಧ್ಯಕ್ಷರ ವಿರುದ್ಧವೇ ಅವರು ಕಿರಿಕ್ ಮಾಡಿದ್ದರು. ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ, ಸದನಸದಲ್ಲಿ ಸದಸ್ಯರನ್ನು ಹೀಗೆ ಕರೆಯುವುದಕ್ಕೆ ಅವರೇನು ಶಾಲೆಯ ಮಕ್ಕಳಲ್ಲ ಎಂದು ಕಿರುಚುವ ಧ್ವನಿಯಲ್ಲೇ ಮಾತಾಡಿದ್ದರು.

Related Articles

Related image1
ಸಿಲ್ಸಿಲಾ ಶೂಟಿಂಗ್ ವೇಳೆ ಬಚ್ಚನ್ ಹಿಂದೇ ಇರ್ತಿದ್ರು ಜಯಾ, ಬಿಗ್ ಬಿ ಹೆಂಡ್ತಿಗೆ ಕಾಡ್ತಿತ್ತಾ ರೇಖಾ ಭಯ?
Related image2
Jaya Bachchan Smiles: ಕಾಜೋಲ್ ಗಿಮಿಕ್ ವರ್ಕ್ ಆಯ್ತು, ಕೊನೆಗೂ ಜಯಾ ಬಚ್ಚನ್ ನಕ್ಬಿಟ್ರು
35
ರಾಜ್ಯಸಭೆಯಲ್ಲಿ ಸ್ಪೀಕರ್ ಜೊತೆಗೂ ಕಾದಾಟ
Image Credit : Sansad TV

ರಾಜ್ಯಸಭೆಯಲ್ಲಿ ಸ್ಪೀಕರ್ ಜೊತೆಗೂ ಕಾದಾಟ

ನಾನೊಬ್ಬಳು ಕಲಾವಿದೆ, ನನಗೆ ನನ್ನದೇ ಆದ ಗುರುತುಗಳಿವೆ, ಬಾಡಿ ಲಾಂಗ್ವೇಜ್ ಹಾಗೂ ಅಭಿವ್ಯಕ್ತಪಡಿಸುವಿಕೆ ಎಲ್ಲವೂ ನನಗೆ ಅರ್ಥವಾಗುತ್ತದೆ. ನನ್ನನ್ನು ಪತಿಯ ಹೆಸರಿನಿಂದ ಗುರುತಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾ ಅಧ್ಯಕ್ಷರಾಗಿದ್ದ ಜಗದೀಪ್ ಧನಕರ್ ಅವರು ಜಯಾ ಬಚ್ಚನ್‌ಗೆ ಸರಿಯಾಗಿಯೇ ತಿರುಗೇಟು ನೀಡಿದ್ದರು. ನೀವು ನಟಿಯೇ ಆಗಿರಬಹುದು ಆದರೆ ನೀವು ಸದನವನ್ನು ಗೌರವಿಸಬೇಕು. ರಾಜ್ಯಸಭಾ ಅಧ್ಯಕ್ಷರ ಹುದ್ದೆಗೆ ಇರುವ ಗೌರವವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಲ್ಲದೇ ತಾನು ನನಗೆ ಬೇಕಾದಂತೆ ಇಲ್ಲಿ ನಿಮ್ಮ ಹೆಸರನ್ನು ಹೇಳಿಲ್ಲ, ದಾಖಲೆಗಳಲ್ಲಿ ಏನಿದೆಯೋ ಅದೇ ಹೇಳಿದ್ದೇನೆ ಎಂದಿದ್ದರು.

45
ಜಯಾಗೆ ಬಿಟ್ಟಿ ಸಲಹೆ ನೀಡಿದ ರಾಖಿ ಸಾವಂತ್
Image Credit : Google

ಜಯಾಗೆ ಬಿಟ್ಟಿ ಸಲಹೆ ನೀಡಿದ ರಾಖಿ ಸಾವಂತ್

ಹೀಗೆ ಹೋದಲೆಲ್ಲಾ ಕಿರಿಕ್ ಮಾಡುತ್ತಲೇ ಇರುವ ಜಯಾ ಬಚ್ಚನ್‌ಗೆ ಈಗ ಬಾಲಿವುಡ್‌ನ ಮತ್ತೊಬ್ಬ ಕಿರಿಕ್ ನಟಿ ರಾಖಿ ಸಾವಂತ್ ಉಚಿತ ಸಲಹೆಯೊಂದನ್ನು ನೀಡಿದ್ದಾರೆ. ಸದಾ ಮುಖವನ್ನು ಸಿಂಡರಿಸುತ್ತಲೇ ಇರುವ ಜಯಾ ಬಚ್ಚನ್‌ ಬಗ್ಗೆ ಟೀಕೆ ಮಾಡಿದ ರಾಖಿ ಸಾವಂತ್ ನೀವು ಹೋದಲೆಲ್ಲಾ ಕಿರಿಕ್ ಮಾಡ್ತಿರಿ, ಎಲ್ಲರಿಗೂ ಬೈತೀರಿ. ಮಲಬದ್ಧತೆ ಆಗಿದೆಯೋ ಏನೋ ಎಂಬಂತೆ ನೀವು ಮುಖವನ್ನು ಸಿಂಡರಿಸಿಕೊಳ್ಳುತ್ತಿರಿ. ಹಾಗೆ ಮಾಡಬೇಡಿ. ಅದು ಒಳ್ಳೆದಲ್ಲ, ನೀವು ಯೋಗ ಮಾಡಿ, ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಿ, ಆಗ ನೀವು ಕೂಡ ಶಾಂತವಾಗಿ ಇರಬಹುದು. ನನ್ನಂತೆ ಎಂದು ಸಲಹೆ ನೀಡಿದ್ದಾರೆ. ರಾಖಿ ಸಾವಂತ್, ಜಯಾ ಬಚ್ಚನ್‌ಗೆ ನೀಡಿದ ಈ ಬಿಟ್ಟಿ ಸಲಹೆ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಜನ ರಾಖಿ ಮಾತಿಗೆ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ: ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು

55
ಡ್ರಾಮಾ ಕ್ವೀನ್ ಮಾತಿಗೆ ನಕ್ಕ ನೆಟ್ಟಿಗರು
Image Credit : instagram

ಡ್ರಾಮಾ ಕ್ವೀನ್ ಮಾತಿಗೆ ನಕ್ಕ ನೆಟ್ಟಿಗರು

ರಾಖಿ ಇದಾದರು ಸರಿಯಾಗಿ ಹೇಳಿದರು. ಆಕೆ ಜಯಾ ಬಚ್ಚನ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ನಿಮ್ಮ ಈ ಮಾತಿಗೆ ನಿಮ್ಮನ್ನು ನಾನು ಪ್ರೀತಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕರು ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಜಯಾ ಬಚ್ಚನ್‌ಗೆ ಈ ರೀತಿ ಸಲಹೆ ನೀಡುವ ರಾಖಿ ಸಾವಂತ್ ಏನು ಕಡಿಮೆ ಅಸಾಮಿ ಏನಲ್ಲ, ಸದಾ ಒಂದಿಲ್ಲೊಂದು ಡ್ರಾಮಾ ಮಾಡ್ತಾ ಲೈಮ್‌ಲೈಟ್‌ನಲ್ಲಿ ಇರುವುದಕ್ಕೆ ಪೇಚಾಡ್ತಾನೆ ಇರ್ತಾರೆ ರಾಖಿ ಸಾವಂತ್ ದಿನಗಳ ಹಿಂದೆ ಈಕೆ ಮುಕೇಶ್ ಅಂಬಾನಿಯನ್ನು ಮದ್ವೆಯಾಗುವುದಾಗಿ ಹೇಳಿ ಡ್ರಾಮಾ ಮಾಡಿದ್ದಳು.

ಇದನ್ನೂ ಓದಿ: ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಟೀಚರ್: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗ್

 

 
 
 
 
View this post on Instagram
 
 
 
 
 
 
 
 
 
 
 

A post shared by Ajay Gautam (@ghoomtiaankh)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಜಯಾ ಬಚ್ಚನ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Boss ರಕ್ಷಿತಾ ಶೆಟ್ಟಿಗೆ ಮಾತಿನಂತೆ 2 ಲಕ್ಷ ನೀಡಲು ವರ್ತೂರು ಸಂತೋಷ್​ ಆಹ್ವಾನ: ಪುಟ್ಟಿ ಕಕ್ಕಾಬಿಕ್ಕಿ
Recommended image2
ಮುಖ ಕೆಂಪಗೆ ಮಾಡಿಕೊಂಡು 'ಯಲಾ ಮಾರ್ಜಾಲಾ..' ಎಂದು ಅಂಬರೀಶ್‌ಗೆ ಬೈಯ್ದಿದ್ದ ಡಾ ರಾಜ್‌ಕುಮಾರ್!
Recommended image3
ಕೊಳ್ಳಿದೆವ್ವದ ಬೆಳಕಲ್ಲಿ ಕೊಲೆಗಾರನ ಅನಾವರಣ: ರಾಜ್‌ ಬಿ ಶೆಟ್ಟಿ Rakkasapuradhol Movie Review
Related Stories
Recommended image1
ಸಿಲ್ಸಿಲಾ ಶೂಟಿಂಗ್ ವೇಳೆ ಬಚ್ಚನ್ ಹಿಂದೇ ಇರ್ತಿದ್ರು ಜಯಾ, ಬಿಗ್ ಬಿ ಹೆಂಡ್ತಿಗೆ ಕಾಡ್ತಿತ್ತಾ ರೇಖಾ ಭಯ?
Recommended image2
Jaya Bachchan Smiles: ಕಾಜೋಲ್ ಗಿಮಿಕ್ ವರ್ಕ್ ಆಯ್ತು, ಕೊನೆಗೂ ಜಯಾ ಬಚ್ಚನ್ ನಕ್ಬಿಟ್ರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved