Jaya Bachchan Smile: ಬಾಲಿವುಡ್ ನಟಿ ಜಯಾ ಬಚ್ಚನ್ ಮುಖದಲ್ಲಿ ನಗು ಕಾಣೋದೇ ಅಪರೂಪ. ಅತಿ ಕಡಿಮೆ ಬಾರಿ ಅಲ್ಪಸ್ವಲ್ಪ ನಕ್ಕಿರುವ ಜಯಾ ಬಚ್ಚನ್ ಈ ಬಾರಿ ತಮ್ಮ ನಗುವಿನಿಂದ್ಲೇ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅದಕ್ಕೆ ಕಾರಣವಾಗಿದ್ದು ಯಾರು ಗೊತ್ತಾ?
ಮೀಡಿಯಾ ಕಂಡ್ರೆ ಸಿಡಿಯೋದು ಜಯಾ ಬಚ್ಚನ್ (Jaya Bachchan) ಸ್ವಭಾವ. ಪಾಪರಾಜಿಗಳು ಕಾಣ್ತಿದ್ದಂತೆ ಮುಖ ಕೆಂಪಗೆ ಮಾಡ್ಕೊಂಡು ಅವ್ರನ್ನು ಸದಾ ಬೈತಿದ್ದ ಜಯಾ ಬಚ್ಚನ್ ಈ ಬಾರಿ ದುರ್ಗಾ ಪೂಜೆಯಲ್ಲಿ ಸಂಪೂರ್ಣ ಡಿಫರೆಂಟ್ ರೂಪ ತೋರಿಸಿದ್ದಾರೆ. ಗಂಟು ಮುಖದ ಬಾಲಿವುಡ್ ನಟಿ ಅಂತಾನೇ ಪ್ರಸಿದ್ಧಿ ಪಡೆದಿರುವ ಜಯಾ ಮುಖದಲ್ಲಿ ಇದೇ ಮೊದಲ ಬಾರಿ ಮುಗ್ದ ನಗುವೊಂದು ಕಾಣಿಸಿದೆ. ನವರಾತ್ರಿ ಸಂದರ್ಭದಲ್ಲಿ ಪೆಂಡಾಲ್ ಮುಂದೆ ಕೆಂಪು ಸೀರೆಯುಟ್ಟು ನಿಂತ ಜಯಾ, ಪಾಪರಾಜಿಗಳಿಗೆ ಫೋಸ್ ನೀಡಿದ್ದಲ್ಲದೆ, ತಮ್ಮ ನಗುಮುಖದಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇಷ್ಟಕ್ಕೂ ಅವರ ನಗುವಿಗೆ ಕಾರಣವಾಗಿದ್ದು, ಎರಡನೇ ಜಯಾ ಬಚ್ಚನ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೋಲ್ (Kajol).
ಸಿಂಗಲ್ ಆಗಿ ಫೋಟೋಕ್ಕೆ ಫೋಸ್ ನೀಡಿದ ಜಯಾ :
ಜಯಾ ಬಚ್ಚನ್, ನವರಾತ್ರಿ ಸಂದರ್ಭದಲ್ಲಿ ಕಾಜೋಲ್ ಕುಟುಂಬ ಆಯೋಜನೆ ಮಾಡುವ ದುರ್ಗಾ ಪೆಂಡಾಲ್ ಗೆ ಬರ್ತಾರೆ. ಪ್ರತಿ ಬಾರಿ ಅವರ ಫೋಟೋ, ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಬಹುತೇಕ ಬಾರಿ, ಜಯಾ ಬಚ್ಚನ್ ಪಾಪರಾಜಿಗಳಿಗೆ ಬೈದ ವಿಡಿಯೋ ಸುದ್ದಿಯಾಗುತ್ತೆ. ಆದ್ರೆ ಈ ಬಾರಿ ಜಯಾ ಬಚ್ಚನ್ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜಯಾ ಬಚ್ಚನ್ ಹಾಗೂ ಕಾಜೋಲ್ ಫೋಟೋಕ್ಕೆ ಫೋಸ್ ನೀಡಲು ಬಂದಿದ್ದಾರೆ. ಈ ಟೈಂನಲ್ಲಿ ಕಾಜೋಲ್, ಜಯಾ ಅವರಿಗೆ ಶಾಕ್ ನೀಡಿದ್ದಾರೆ. ನೀವೊಬ್ಬರೇ ಫೋಟೋಕ್ಕೆ ಫೋಸ್ ನೀಡ್ಬೇಕು, ನಗ್ಬೇಕು ಅಂತ ಕಂಡೀಷನ್ ಹಾಕಿದ್ದಾರೆ. ಚಪ್ಪಾಳೆ ತಟ್ಟಿ, ಜಯಾ ಮುಖದಲ್ಲಿ ನಗು ಮೂಡಿಸಿದ್ದಾರೆ. ಒಮ್ಮೆ ದಿಗಿಲುಗೊಂಡ ಜಯಾ ಬಚ್ಚನ್ ನಂತ್ರ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. ಜಯಾ ಮುಖದಲ್ಲಿ ನಗು ನೋಡಿದ ಪಾಪರಾಜಿಗಳು ಖುಷಿಯಲ್ಲಿ ಕೂಗಿದ್ದಾರೆ.
ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದಿಲ್ಲ: ಹೈದರಾಬಾದ್ ಈವೆಂಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಕಾಜೋಲ್ ಗೆ ಮಾತ್ರ ಜಯಾ ಬಚ್ಚನ್ ನಗಿಸೋ ಶಕ್ತಿ ಇದೆ :
ಸೋಶಿಯಲ್ ಮೀಡಿಯಾದಲ್ಲಿ ಜಯಾ ಬಚ್ಚನ್ ಹಾಗೂ ಕಾಜೋಲ್ ವಿಡಿಯೋ ವೈರಲ್ ಆಗಿದೆ. ಕೆಂಪು ಸೀರೆಯಲ್ಲಿ ಮುದ್ದಾಗಿ ಕಾಣ್ತಿದ್ದ ಜಯಾ ಬಚ್ಚನ್, ಮೊದಲು ಕಾಜೋಲ್ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಪಾಪರಾಜಿಗಳು ಈ ವೇಳೆ ಕೂಗಿಕೊಂಡಿದ್ದಾರೆ. ನಿಧಾನ ಎನ್ನುತ್ತ ಕಿವಿ ಮುಚ್ಚಿಕೊಂಡು ತಮ್ಮ ವರಸೆ ತೋರಿಸಿದ್ದ ಜಯಾ ಮನಸ್ಸನ್ನು ಕಾಜೋಲ್ ಬದಲಿಸಿದ್ದಾರೆ. ಜಯಾ ಬಚ್ಚನ್ ಮನಸ್ಸು ಅರಿತವರು ಕಾಜೋಲ್ ಮಾತ್ರ. ಕಾಜೋಲ್ ಗೆ ಮಾತ್ರ ಜಯಾ ಬಚ್ಚನ್ ನಗಿಸುವ ಶಕ್ತಿ ಇದೆ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡ್ತಿದ್ದಾರೆ. ಜಯಾ ಬಚ್ಚನ್ ಮನಸ್ಸು ಮೃದು. ಅವರಿಗೆ ಪ್ರೀತಿ, ಆರೈಕೆಯ ಅಗತ್ಯವಿದೆ. ನೀವು ಪ್ರೀತಿ ನೀಡಿದ್ರೆ ಅವರು ಡಬಲ್ ಪ್ರೀತಿ ನೀಡ್ತಾರೆ ಎನ್ನುವ ಕಮೆಂಟ್ ಗಳು ಬಂದಿವೆ. ಇದೇ ಮೊದಲ ಬಾರಿ ಜಯಾ ಬಚ್ಚನ್ ನಗು ನೋಡಿದ್ದು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರಿಗೆ ನಕ್ಕಿದ್ದು ಜಯಾ ಬಚ್ಚನ್ ಎನ್ನುವ ವಾಸ್ತವ ಅರಿಯಲು ಸಾಧ್ಯವಾಗ್ತಿಲ್ಲ. ಇದು ಎಐ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಜ್ಯೋತಿಕಾ ಗರ್ಭಿಣಿಯಾಗಿದ್ದಾಗ ಸೂರ್ಯ ಈ ರೀತಿ ಮಾಡಿದ್ರಾ? ಆ ನಟಿ ಹಂಚಿಕೊಂಡ ಸೀಕ್ರೆಟ್ ಏನು?
ದುರ್ಗೆ ಪೆಂಡಾಲ್ ನಲ್ಲಿ ಮಿಂಚಿದ ಜಯಾ – ಕಾಜೋಲ್ :
ಜಯಾ ಬಚ್ಚನ್ ಕೆಂಪು ರೇಷ್ಮೆ ಸೀರೆ ಧರಿಸಿದ್ದರು. ಗೋಲ್ಡನ್ ಜರಿ ಬಾರ್ಡರ್ ಸೀರೆಯಲ್ಲಿ ಜಯಾ ಸಿಂಪಲ್ ಆಗಿ, ಸುಂದರವಾಗಿ ಕಾಣ್ತಿದ್ದರು. ಮ್ಯಾಚಿಂಗ್ ಪ್ಲೇನ್ ಬ್ಲೌಸ್ ಧರಿಸಿದ್ದ ಜಯಾ ಬಚ್ಚನ್, ರೂಬಿ ಸ್ಟಡ್ ಕಿವಿಯೋಲೆ, ಒಂದು ಕೈಯಲ್ಲಿ ರೂಬಿ-ಡೈಮಂಡ್ ಬ್ರೇಸ್ಲೆಟ್ ಮತ್ತು ಇನ್ನೊಂದು ಕೈಯಲ್ಲಿ ವಾಚ್ ಧರಿಸಿದ್ದರು. ಕೆಂಪು ಬಿಂದಿ ಇಟ್ಟಿದ್ದ ಅವರು ದೇಸಿ ಲುಕ್ ನಲ್ಲಿದ್ರು. ಇನ್ನು ಕಾಲೋಜ್ ಟಿಶ್ಯೂ ಸೀರೆಯುಟ್ಟಿದ್ದರು. ಕೈ ತುಂಬ ಧರಿಸಿದ್ದ ಕೆಂಪು ಬಳೆ ಅವರ ಅಂದವನ್ನು ಹೆಚ್ಚಿಸಿತ್ತು.
