- Home
- Entertainment
- ‘ಎದುರಿಗೆ ನನ್ನ ಸಿಂಹಿಣಿ, ನೂರು ಅಡಿ ದೂರದಲ್ಲಿ ಮೂರು ಸಿಂಹಗಳು’: ರಣಬೀರ್ ಬಿಚ್ಚಿಟ್ಟ ಲವ್ ರಹಸ್ಯವೇನು?
‘ಎದುರಿಗೆ ನನ್ನ ಸಿಂಹಿಣಿ, ನೂರು ಅಡಿ ದೂರದಲ್ಲಿ ಮೂರು ಸಿಂಹಗಳು’: ರಣಬೀರ್ ಬಿಚ್ಚಿಟ್ಟ ಲವ್ ರಹಸ್ಯವೇನು?
ನಟ ರಣಬೀರ್ ಕಪೂರ್ ಆಲಿಯಾ ಭಟ್ಗೆ ಮಸೈಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಪೋಸ್ ಮಾಡಿದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಮೂರು ಸಿಂಹಗಳ ಎದುರು ನಡೆದ ಆ ವಿಶೇಷ ಕ್ಷಣದ ಬಗ್ಗೆ ತಿಳಿಯಿರಿ.

ಪ್ರಪೋಸ್ ಮಾಡಿದ ಘಟನೆ
ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 18’ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರಣಬೀರ್ ಕಪೂರ್ ತಾನು ಆಲಿಯಾ ಭಟ್ಗೆ ಪ್ರಪೋಸ್ ಮಾಡಿದ ಘಟನೆ ಹಂಚಿಕೊಂಡಿದ್ದಾರೆ.
ಜೇಬಿನಲ್ಲಿ ಉಂಗುರವಿತ್ತು
ನಾನು ಮತ್ತು ಆಲಿಯಾ ಮಸೈಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ಹೋಗಿದ್ದೆವು. ನಾನು ಮುಂಚಿತವಾಗಿಯೇ ನಮ್ಮ ಗೈಡ್ಗೆ ಹಣ ಕೊಟ್ಟು, ಕಾಡಿನ ಮಧ್ಯದಲ್ಲಿ ಎಲ್ಲಾದರೂ ಜೀಪ್ ನಿಲ್ಲಿಸುವಂತೆ ಹೇಳಿದ್ದೆ. ಜೇಬಿನಲ್ಲಿ ಉಂಗುರವಿತ್ತು.
ಫೋಟೋ ತೆಗೆಯಲು ಸೂಚಿಸಿದ್ದೆ
ಒಂದು ಮಂಡಿಯೂರಿ ಕುಳಿತು ಪ್ರಪೋಸ್ ಮಾಡುವಾಗ ದೂರದಿಂದ ಫೋಟೋ ತೆಗೆಯಲು ಗೈಡ್ಗೆ ಸೂಚಿಸಿದ್ದೆ. ಹೆಣ್ಣುಮಕ್ಕಳಿಗೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಳ್ಳುವುದು ತುಂಬಾ ಇಷ್ಟ, ಆಲಿಯಾಗೂ ಇದು ಮುಖ್ಯವಾಗುತ್ತದೆ ಎಂಬುದು ನನ್ನ ಲೆಕ್ಕಾಚಾರವಾಗಿತ್ತು.
ನನ್ನನ್ನು ಮದುವೆಯಾಗುತ್ತೀಯಾ?
ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ, ನಮ್ಮಿಂದ ಕೇವಲ ನೂರು ಅಡಿ ದೂರದಲ್ಲಿ ಮೂರು ಅಸಲಿ ಸಿಂಹಗಳು ನಿಂತಿದ್ದವು. ಇತ್ತ ನನ್ನ ಎದುರಿಗೆ ನನ್ನ ಸಿಂಹಿಣಿ ನಿಂತಿದ್ದಳು. ಆ ಸಿಂಹಗಳ ಎದುರು ನಾನೊಂದು ಇಲಿಯಂತೆ ಮಂಡಿಯೂರಿ ಕುಳಿತು, ನಡುಗುತ್ತಲೇ ‘ಬೇಬಿ, ನನ್ನನ್ನು ಮದುವೆಯಾಗುತ್ತೀಯಾ?’ ಎಂದು ಕೇಳಿದೆ.
ಅಪರೂಪದ ಅನುಭವ
ಅದು ನನ್ನ ಬದುಕಿನ ಅತ್ಯಂತ ಅಪರೂಪದ ಅನುಭವ, ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್ ವೇಳೆ ಈ ಜೋಡಿ ಹತ್ತಿರವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





