MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನೆಪೋಟಿಸಂ: ಅಣ್ಣಾವ್ರ ಕುಟುಂಬದ ಬಗ್ಗೆ ಸುದೀಪ್‌ ಹೇಳಿದ ಮಾತಿಗೆ ಶಿವಣ್ಣ ಕೊಟ್ಟ ರಿಯಾಕ್ಷನ್‌ ನೋಡಿ

ನೆಪೋಟಿಸಂ: ಅಣ್ಣಾವ್ರ ಕುಟುಂಬದ ಬಗ್ಗೆ ಸುದೀಪ್‌ ಹೇಳಿದ ಮಾತಿಗೆ ಶಿವಣ್ಣ ಕೊಟ್ಟ ರಿಯಾಕ್ಷನ್‌ ನೋಡಿ

ನೆಪೋಟಿಸಂ ಕುರಿತು ಪತ್ರಕರ್ತರ ಪ್ರಶ್ನೆಗೆ, ತನ್ನನ್ನು ಮಾತ್ರ ಯಾಕೆ ಕೇಳುತ್ತೀರಿ, ಶಿವಣ್ಣನನ್ನೂ ಕೇಳಿ ಎಂದು ಸುದೀಪ್ ಹೇಳಿದ್ದರು. ಇದೀಗ ಸುದೀಪ್ ಎದುರೇ ಈ ಪ್ರಶ್ನೆ ಎದುರಿಸಿದ ಶಿವರಾಜ್‌ಕುಮಾರ್, ಪ್ರತಿಭೆ ಇದ್ದವರು ಚಿತ್ರರಂಗಕ್ಕೆ ಬರುತ್ತಾರೆ ಎಂದು ಖಡಕ್ ಉತ್ತರ ನೀಡಿದ್ದಾರೆ.

2 Min read
Author : Suchethana D
Published : Jun 08 2026, 07:59 PM IST
Share this Photo Gallery
  • FB
  • TW
  • Linkdin
  • Whatsapp
16
ಸಿನಿ ಇಂಡಸ್ಟ್ರಿಯಲ್ಲಿ ನೆಪೋಟಿಸಂ
Image Credit : Social Media

ಸಿನಿ ಇಂಡಸ್ಟ್ರಿಯಲ್ಲಿ ನೆಪೋಟಿಸಂ

ಸುದೀಪ್ ಅಕ್ಕನ ಮಗ ಸಂಚಿತ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಪ್ರಚಾರದ ಸಮಯದಲ್ಲಿ, ಕಿಚ್ಚ ಸುದೀಪ್​ (Kichcha Sudeep) ಅವರಿಗೆ ಪತ್ರಕರ್ತರು ನೆಪೋಟಿಸಂ ಬಗ್ಗೆ ಪ್ರಶ್ನೆ ಕೇಳಿದ್ದರು. ಈಗ ಇಂಡಸ್ಟ್ರಿಯಲ್ಲಿ ನೆಪೋಟಿಸಂ ಹೆಚ್ಚಾಗ್ತಿದೆ. ಅವರವರ ಮಕ್ಕಳೇ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ ಎನ್ನುವ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಶಿವಣ್ಣನ ಯಾಕೆ ಕೇಳಲ್ಲ ಎಂದಿದ್ದ ಸುದೀಪ್‌
Image Credit : Social Media

ಶಿವಣ್ಣನ ಯಾಕೆ ಕೇಳಲ್ಲ ಎಂದಿದ್ದ ಸುದೀಪ್‌

ಇದಕ್ಕೆ ಗರಂ ಆಗಿದ್ದ ಸುದೀಪ್‌, ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್​ ಕುಮಾರ್​ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್​ಕುಮಾರ್​ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ ಎಂದ ಪ್ರಶ್ನಿಸಿದ್ದರು.

Related Articles

Related image1
ನೆಪೋಟಿಸಂ ಅಣ್ಣಾವ್ರ ಮನೆಯಿಂದ್ಲೇ ಶುರುವಾಯ್ತಲ್ಲ, ಶಿವಣ್ಣಂಗೆ ಯಾಕೆ ಪ್ರಶ್ನೆ ಕೇಳಲ್ಲ: ಸುದೀಪ್​ ಗರಂ
Related image2
ಅಂದು ಆ್ಯಂಕರ್​ ಅನುಶ್ರೀ, ಇಂದು ಸೋನು ಗೌಡ; ಮಂಚದ ವಿಷ್ಯ ಪದೇಪದೇ ಬರೋದ್ಯಾಕೆ
36
ಸುದೀಪ್‌ ಎದುರೇ ಶಿವಣ್ಣಗೆ ಪ್ರಶ್ನೆ
Image Credit : our own

ಸುದೀಪ್‌ ಎದುರೇ ಶಿವಣ್ಣಗೆ ಪ್ರಶ್ನೆ

ಈಗ ಇದರ ಬಗ್ಗೆ ಶಿವರಾಜ್ ಕುಮಾರ್‌ ಅವರಿಗೆ ಸುದೀಪ್‌ ಅವರ ಎದುರೇ ಪ್ರಶ್ನೆ ಎದುರಾಗಿದೆ. ಶಿವರಾಜ್‌ ಕುಮಾರ್‌ ಮತ್ತು ಸುದೀಪ್‌ ಅವರು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೇ ಕಾಣಿಸಿಕೊಂಡಾಗ, ಈ ಪ್ರಶ್ನೆಯನ್ನು ಶಿವರಾಜ್‌ ಕುಮಾರ್‌ ಅವರಿಗೆ ಪ್ರಶ್ನಿಸಲಾಯಿತು.

46
ಶಿವರಾಜ್ ಕುಮಾರ್‌ ಕೋಪ
Image Credit : our own

ಶಿವರಾಜ್ ಕುಮಾರ್‌ ಕೋಪ

ಅದಕ್ಕೆ ಶಿವರಾಜ್‌ ಕುಮಾರ್‌ ಅವರು, ಅದನ್ನೆಲ್ಲಾ ನಾನು ನೋಡಿದ್ದೇನೆ. ಮೊದಲನೆಯದ್ದಾಗಿ ನೀವು ಆ ಪ್ರಶ್ನೆಯನ್ನು ಸುದೀಪ್‌ ಅವರಿಗೆ ಕೇಳಿದ್ದೇ ತಪ್ಪು ಎಂದು ಸ್ವಲ್ಪ ಸಿಟ್ಟಿನಿಂದಲೇ ನುಡಿದರು. ಟ್ಯಾಲೆಂಟ್‌ ಇದ್ದವರು ಇಂಡಸ್ಟ್ರಿಗೆ ಬರುತ್ತಾರೆ. ಇಲ್ಲಿ ಅವರ ಮಗ, ಇವರ ಮಗ ಎಂದು ಬರುವುದಿಲ್ಲ. ಯಾರಿಗೆ ಕಲೆ ಇರುತ್ತದೆಯೋ ಅವರು ಬರುತ್ತಾರೆ. ನೀವು ಇಂಥ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಹೇಳಿದರು.

56
ಸುದೀಪ್‌ ಏನು ಹೇಳಿದ್ರು?
Image Credit : our own

ಸುದೀಪ್‌ ಏನು ಹೇಳಿದ್ರು?

ನಿನ್ನೆ ಕೂಡ ಸುದೀಪ್‌ ಅವರು ಇದೇ ಮಾತನ್ನು ಹೇಳಿದ್ದರು. ಬಾಂಬೆನಲ್ಲಿ ಹುಟ್ಟಿರೋ ಯಾವುದೋ ಒಂದು ಶಬ್ದ (ನೆಪೋಟಿಸಂ) ಇಲ್ಲಿ ಹೇಳೋದು ತಪ್ಪು. ಅಣ್ಣಾವ್ರ ಕಾಲದಿಂದಲೇ ಇದು ಇದೆ. ಯಾರ ಮಕ್ಕಳಿಗೆ ಕಲೆ ಒಲಿಯುತ್ತದೆಯೋ, ಯಾರನ್ನು ಜನರು ನೋಡಲು ಇಷ್ಟಪಡುತ್ತಾರೋ ಅವರು ಇಂಡಸ್ಟ್ರಿಗೆ ಬರುತ್ತಾರೆ. ಕನ್ನಡ ಜನ ಇಷ್ಟಪಟ್ಟರೆ ಮುಗೀತು. ಇದು ಯಾರ ಜಾಗ ಬೇಕಾದರೂ ಆಗಬಹುದು ಎಂದು ತಮ್ಮ ಮಾತಿಗೆ ಸುದೀಪ್​ ಸ್ಪಷ್ಟನೆ ನೀಡಿದ್ದರು.

66
ಶಿವಣ್ಣ, ಅಪ್ಪು ಸ್ಫೂರ್ತಿ
Image Credit : Google

ಶಿವಣ್ಣ, ಅಪ್ಪು ಸ್ಫೂರ್ತಿ

ಇವತ್ತು ಶಿವಣ್ಣ ಮೇರು ನಟನಾಗಿ ಬೆಳೆದಿದ್ದಾರೆ. ನಾವು ಅವರಿಂದ ಸ್ಫೂರ್ತಿ ಪಡೆದು ಬೆಳೆದವರು. ಅಪ್ಪು ಅವರು ಎಂತಹ ಅದ್ಭುತ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತು. ಇವುಗಳಿಗೆ ನೆಪೋಟಿಸಂ ಅನ್ನೋದು ಬರಬಾರದು, ಅವರಿಂದ ಸ್ಫೂರ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಎಂದು ಸುದೀಪ್​ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಟಿವಿ ಶೋ
ಸ್ಯಾಂಡಲ್‌ವುಡ್
Latest Videos
Recommended Stories
Recommended image1
ಶಿಲ್ಪಾ ಶೆಟ್ಟಿ ಮತ್ತೆ ಅದೇನೋ ಮಾಡೋ ಆಸೆ ಆಗಿದ್ಯಂತೆ.. ಏನದು ಶಿಲ್ಪಾ ಶೆಟ್ಟಿಯ 'ಸೀಕ್ರೆಟ್' ಆಸೆ?
Recommended image2
ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!
Recommended image3
Kiccha Sudeep Bodyguard:‌ ಇಟಲಿಯಿಂದ ಬಂದ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಸಾಧನೆ ಅಷ್ಟಿಷ್ಟಲ್ಲ; ಆ ಆಸೆ ಇದ್ಯಂತೆ
Related Stories
Recommended image1
ನೆಪೋಟಿಸಂ ಅಣ್ಣಾವ್ರ ಮನೆಯಿಂದ್ಲೇ ಶುರುವಾಯ್ತಲ್ಲ, ಶಿವಣ್ಣಂಗೆ ಯಾಕೆ ಪ್ರಶ್ನೆ ಕೇಳಲ್ಲ: ಸುದೀಪ್​ ಗರಂ
Recommended image2
ಅಂದು ಆ್ಯಂಕರ್​ ಅನುಶ್ರೀ, ಇಂದು ಸೋನು ಗೌಡ; ಮಂಚದ ವಿಷ್ಯ ಪದೇಪದೇ ಬರೋದ್ಯಾಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved