MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ರಶ್ಮಿಕಾಗೆ ಮದ್ವೆ: ಇನ್ನೇನಿದ್ರು ಭಾರತೀಯ ಸಿನಿಮಾ ಆಳೋದು ರುಕ್ಮಿಣಿ ವಸಂತ್!

ರಶ್ಮಿಕಾಗೆ ಮದ್ವೆ: ಇನ್ನೇನಿದ್ರು ಭಾರತೀಯ ಸಿನಿಮಾ ಆಳೋದು ರುಕ್ಮಿಣಿ ವಸಂತ್!

ರಕ್ಷಿತ್ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿ, ಮನೆ ಮಾತಾಗಿದ್ದು ರುಕ್ಮಿಣಿ ವಸಂತ್‌ಗೆ ಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೆಸರು ತಂದು ಕೊಟ್ಟಿದ್ದು, ಕಾಂತಾರಾ ಚಾಪ್ಟರ್ 1. ಇದೀಗ ಈ ನಟಿಯನ್ನು ಮೃಣಾಲ್ ಠಾಕೂರ್‌ಗೆ ಹೋಲಿಸುತ್ತಿದ್ದಾರೆ. 

2 Min read
Author : Naveen Kodase
Published : Feb 19 2026, 02:48 PM IST
Share this Photo Gallery
  • FB
  • TW
  • Linkdin
  • Whatsapp
16
ರುಕ್ಮಿಣಿ ವಸಂತ್ ಎಲ್ಲಾ ಪಾತ್ರಕ್ಕೂ ಸೈ
Image Credit : Social media

ರುಕ್ಮಿಣಿ ವಸಂತ್ ಎಲ್ಲಾ ಪಾತ್ರಕ್ಕೂ ಸೈ

ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿದ ರುಕ್ಮಿಣಿ ವಸಂತ್ ಬಗ್ಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಭಾರತದಲ್ಲಿಯೇ ಒಂದು ಭರವಸೆ ಹುಟ್ಟಿಸಿತ್ತು. ಆ ಸೌಂದರ್ಯದ ಜೊತೆ ಆ್ಯಕ್ಟಿಂಗ್ ಎಲ್ಲರಿಗೂ ಇಷ್ಟವಾಗಿತ್ತು. ನಂತರ ಬಹು ನೀರೀಕ್ಷಿತ ಕಾಂತಾರಾ-1ರಲ್ಲಿ ಕನಕವತಿಯಾಗಿ ನಟಿಸಿದ್ದು ಎಲ್ಲರಿಗೂ ಹುಚ್ಚೆಬ್ಬಿಸುವಂತೆ ಮಾಡಿತ್ತು.

26
ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರುಕ್ಮಿಣಿ
Image Credit : X

ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರುಕ್ಮಿಣಿ

ರಾಣಿಯ ಪಾತ್ರ, ಒಳ್ಳೇಯವಳೆಂದು ತನ್ನನ್ನು ತಾನೇ ಬಿಂಬಿಸಿಕೊಂಡು, ನೆಗಟಿವ್ ಶೇಡ್‌ನಲ್ಲಿ ನಟಿಸಿದ ರುಕ್ಮಿಣಿ, ನ್ಯಾಷನಲ್ ಕ್ರಶ್ ಎನಿಸಿಕೊಂಡರು. ಆ ಕಾಸ್ಟೂಮ್, ಬಾಡಿ ಲ್ಯಾಂಗ್ಜೇಜ್, ನಟನೆ ಎಲ್ಲವೂ ವೀಕ್ಷಕರಿಗೆ ಅಚ್ಚುಮೆಚ್ಚು ಎನಿಸಿತು. ಕೇವಲ ಸೌಂದರ್ಯವೊಂದನ್ನು ಇಟ್ಟುಕೊಂಡು, ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿಯರ ಮುಂದೆ ರುಕ್ಮಿಣಿ ವಿಭಿನ್ನ ಎನಿಸಿಕೊಂಡರು.

Related Articles

Related image1
ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ
Related image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
36
ಟಾಕ್ಸಿಕ್‌ನಲ್ಲಿಯೂ ರುಕ್ಮಿಣಿ ನಟನೆ
Image Credit : Instagram

ಟಾಕ್ಸಿಕ್‌ನಲ್ಲಿಯೂ ರುಕ್ಮಿಣಿ ನಟನೆ

ನಂತರ ಹೊಸ ಹೊಸ ಪಾತ್ರಗಳು ಈ ನಟಿಗೆ ಒದಗಿ ಬಂದವು. ಇದೀಗ ಐವರು ತಾರೆಯರೊಂದಿಗೆ ಬರುತ್ತಿರುವ ಯಶ್ ನಟನೆಯ ದೊಡ್ಡ ಬಜೆಟ್‌ ಮೂವಿ ಟಾಕ್ಸಕ್‌ನಲ್ಲಿಯೂ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಸೀತಾರಾಮಂ ನಟಿ ಮೃಣಾಲ್ ಠಾಕೂರ್ ಅವರನ್ನು ಮೀರಿಸುತ್ತಾರೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

46
ಭರವಸೆಯ ನಟಿಯಾಗಿ ಬೆಳೆದುನಿಂತ ರುಕ್ಮಿಣಿ
Image Credit : Instagram

ಭರವಸೆಯ ನಟಿಯಾಗಿ ಬೆಳೆದುನಿಂತ ರುಕ್ಮಿಣಿ

ಅಷ್ಟೇ ಅಲ್ಲ ಭಾರತದ ಎಲ್ಲ ವುಡ್ ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುವ ಭರವಸೆಯುಳ್ಳ ನಟಿಯಾಗಿದ್ದು, 2026ರಲ್ಲಿ ಬಹು ಬೇಡಿಕೆಯ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಪಟ್ಟ ದಕ್ಕಿಸಿಕೊಂಡವರು ಈ ರುಕ್ಮಿಣಿ. ಆ ಬೆನ್ನಲ್ಲೇ ಮೃಣಾಲ್ ಠಾಕೂರ್ ಜೊತೆ ನೆಟ್ಟಿಗರು ಕಂಪೇರ್ ಮಾಡುತ್ತಿದ್ದು, ಬಹು ಭರವಸೆಯ ನಟಿ ಎಂದೇ ಹೇಳಲಾಗುತ್ತಿದೆ.

56
ಭಾರತೀಯ ಚಿತ್ರರಂಗ ಆಳಲು ರೆಡಿಯಾದ ರುಕ್ಮಿಣಿ
Image Credit : Instagram

ಭಾರತೀಯ ಚಿತ್ರರಂಗ ಆಳಲು ರೆಡಿಯಾದ ರುಕ್ಮಿಣಿ

ಯಶ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಿರುವ ಟಾಕ್ಸಿಕ್ ಚಿತ್ರದಲ್ಲಿ ಮೆಲ್ಲಿಸಾ ಆಗಿ ನಟಿಸುತ್ತಿದ್ದು, ಜನರಲ್ಲಿ ಈ ನಟಿಯ ಬಗ್ಗೆ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ತಮಿಳು ಚಿತ್ರ ಮದ್ರಾಸಿಯಲ್ಲಿ ಮೃಣಾಲ್ ಬದಲಿಗೆ ರುಕ್ಮಿಣಿಯನ್ನು ಆರಿಸಿಕೊಂಡಿದ್ದು, ಭಾರತೀಯ ಚಿತ್ರ ಜಗತ್ತನ್ನೇ ಆಳುವ ಸಾಮಾರ್ಥ್ಯ ಇರುವ ನಟಿ ಎಂದೇ ಹೇಳಲಾಗುತ್ತಿದೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಇದೀಗ ಬಾಲಿವುಡ್‌ನಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಕರ್ನಾಟಕದ ಕರ್ಶ್ ಆಗಿದ್ದ ಇವರು ನ್ಯಾಷನಲ್ ಕ್ರಶ್ ಆಗಿ ಬದಲಾಗಿದ್ದು, ಅವರ ಫ್ಯಾನ್ಸ್ ಹೆಚ್ಚುತ್ತಲೇ ಇದ್ದಾರೆ. ಇದೀಗ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದು, ಇನ್ನು ಕನ್ನಡದ ಮತ್ತೊಬ್ಬ ನಟಿ ರುಕ್ಮಿಣ್ ವಸಂತ್ ಬಾಲಿವುಡ್ ಸೇರಿ ಭಾರತೀಯ ಚಿತ್ರರಂಗವನ್ನು ಆಳಲಿದ್ದಾರೆಂದು ಹೇಳುತ್ತಿದ್ದಾರೆ ಅವರ ಫ್ಯಾನ್ಸ್.

66
ರುಕ್ಮಿಣಿ ವಸಂತ್‌ ಅವರನ್ನು ದೀಪಿಕಾ ಪಡುಕೋಣೆ ಜತೆ ಹೋಲಿಕೆ
Image Credit : Instagram

ರುಕ್ಮಿಣಿ ವಸಂತ್‌ ಅವರನ್ನು ದೀಪಿಕಾ ಪಡುಕೋಣೆ ಜತೆ ಹೋಲಿಕೆ

ಅಷ್ಟೇ ಅಲ್ಲ ಒಳ್ಳೇಯ ಫಿಸಿಕ್ ಇರೋ ರುಕ್ಮಿಣ್ ವಸಂತ್ ಅವರನ್ನು ದೀಪಿಕಾ ಪಡುಕೋಣೆ ಅವರಿಗೂ ಹೋಲಿಸುವುದುಂಟು. ಮೂಲತಃ ರಾಜ್ಯದವರಾದ ನಟಿಯೂ ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಅನಭಿಷಿಕ್ತ ನಟಿಯಾಗಿ ಮೆರೆದವರು. ಬ್ಯೂಟಿ ಜೊತೆಗೆ ಒಳ್ಳೇಯ ಅಭಿನಯ ಅವರಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಅವರಂತೆ ಇದೀಗ ರುಕ್ಮಿಣಿ ಸರದಿ ಎನ್ನುತ್ತಿದ್ದಾರೆ ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸ್ಯಾಂಡಲ್‌ವುಡ್
ಬಾಲಿವುಡ್
ಟಾಕ್ಸಿಕ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ: ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?
Recommended image2
Vijay-Rashmika Wedding: ರಶ್ಮಿಕಾ ಜೊತೆ ಮದುವೆ ನಂತರ ವಿಜಯ್ ದೇವರಕೊಂಡ ಹಣೆಬರಹ ಬದಲಾಗಲಿದೆಯೇ? ಜ್ಯೋತಿಷಿ ಹೇಳಿದ್ದೇನು?
Recommended image3
Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​
Related Stories
Recommended image1
ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ
Recommended image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved