- Home
- Entertainment
- Cine World
- ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ
ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ
ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ, ರುಕ್ಮಿಣಿ ವಸಂತ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಸ್ ಸಿನಿಮಾದ ಫೇರಿ ಟೇಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.

ಟಾಕ್ಸಿಕ್ ಸಿನಿಮಾದ ಫೇರಿ ಟೇಲ್ ಪೋಸ್ಟರ್
ಯಶ್ ಅಭಿನಯದ ಬಹುನಿರೀಕ್ಷ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಫೇರಿ ಟೇಲ್ ಪೋಸ್ಟರ್ ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿದೆ. ಫೇರಿ ಟೇಲ್ ಪೋಸ್ಟರ್ ಭಾಗವಾಗಿ ಇತ್ತೀಚೆಗೆ ಟಾಕ್ಸಿಕ್ ಸಿನಿಮಾ ತಂಡ ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಪೋಸ್ಟಕ್ ಬಿಡುಗಡೆ ಮಾಡಿತ್ತು. ಇದೀಗ ಕಾಂತಾರ ಖ್ಯಾತಿಯ ಕನಕವತಿ ಪೋಸ್ಟರ್ ಬಿಡುಗಡೆಯಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ
ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕನಕವತಿಯಾಗಿ ಭಾರಿ ಜನಮನ್ನಣೆ ಗಳಿಸಿದ್ದ ರುಕ್ಮಿಣಿ ವಸಂತ ಇದೀಗ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಹೊಸ ಅವತಾರ ಜನರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಕಾಂತಾರದ ಕನಕವತಿಗೂ ಟಾಕ್ಸಿಕ್ ಸಿನಿಮಾದ ಮೆಲ್ಲಿಸಾ ಪಾತ್ರಕ್ಕೂ ಭಾರಿ ವ್ಯತ್ಯಾಸ ಜನರನ್ನು ಮೋಡಿ ಮಾಡಿದೆ.
ಟಾಕ್ಸಿಕ್ ಸಿನಿಮಾ ನನ್ನ ಕನಸು
ಟಾಕ್ಸಿಕ್ ಸಿನಿಮಾದಲ್ಲಿ ಭಾಗವಾಗಿರುವುದು ಅತ್ಯಂತ ಖುಷಿ ಹಾಗೂ ಹೆಮ್ಮೆ ತಂದಿದೆ ಎಂದು ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ. ಇದು ಕನಸಾಗಿತ್ತು, ಈ ಪಾತ್ರ ಹಾಗೂ ಹೊಸ ಪಯಣಕ್ಕೆ ಹೆಚ್ಚು ಖುಷಿ ನೀಡಿದೆ ಎಂದು ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಹೊಸ ಅವತಾರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ರುಕ್ಮಿಣಿ ವಸಂತ್ ಅಭಿನಯನಕ್ಕೆ ಗೀತು ಮೋಹನ್‌ದಾಸ್ ಫಿದಾ
ಟಾಕ್ಸಿಕ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅಭಿನಯ, ಪಾತ್ರ ನಿರ್ವಹಣೆಗೆ ನಿರ್ದೇಶಕಿ ಗೀತು ಮೋಹನ್‌ದಾಸ್ ಫಿದಾ ಆಗಿದ್ದಾರೆ. ರುಕ್ಮಿಣಿ ಪಾತ್ರವನ್ನು ಅಭಿನಯಿಸುವುದಲ್ಲ, ಆಕೆ ಪರಕಾಯ ಪ್ರವೇಶ ಮಾಡುತ್ತಾರೆ. ಆಕೆಯ ಪರ್ಫಾಮೆನ್ಸ್ ಅದ್ಭುತ ಎಂದಿದ್ದಾರೆ. ರುಕ್ಮಣಿ ಹಲವು ಪ್ರಶ್ನೆ ಕೇಳುತ್ತಾರೆ. ಆದರೆ ಇದು ಡೌಟ್ ಕಾರಣದಿಂದ ಅಲ್ಲ, ಕ್ಯೂರಿಸಿಟಿ ಕಾರಣದಿಂದ ಪ್ರಶ್ನೆ ಕೇಳುತ್ತಾರೆ. ಭಾರಿ ತಯಾರಿ ಮಾಡಿಕೊಳ್ಳುತ್ತಾರೆ ಎಂದು ಗೀತು ಮೋಹನ್‌ದಾಸ್ ಹೇಳಿದ್ದಾರೆ.
ಟಾಕ್ಸಿಕ್ ಫೇರಿ ಟೇಲ್
ಇತ್ತೀಚೆಗೆ ಟಾಕ್ಸಿಕ್ ಸಿನಿಮಾ ತಂಡ ಫೇರಿ ಟೇಲ್ ಪೋಸ್ಟರ್ ಬಿಡುಗಡೆ ಮಾಡಿ ಭಾರಿ ಕುತೂಹಲ ಸೃಷ್ಟಿಸಿದೆ. ಎಲಿಜಬೆತ್ ಪಾತ್ರದಲ್ಲಿ ಬಾಲಿಡುವ್ ನಟಿ ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ವಿಂಟೇಜ್ ಕಾರು, ಅತ್ಯಾಕರ್ಷಕ ಕಾಸ್ಟ್ಯೂಮ್ ಸೇರಿದಂತೆ ಟಾಕ್ಸಿಕ್ ಸಿನಿಮಾದ ಕತೆ ಆಳ ಹಾಗೂ ಆಗಾಧತೆ ಸುಳಿವು ನೀಡಿದ್ದರು.
ಟಾಕ್ಸಿಕ್ ಫೇರಿ ಟೇಲ್
ನಾದಿಯಾ ಫೇರಿ ಟೇಲ್ ಪೋಸ್ಟರ್
ಟಾಕ್ಸಿಕ್ ಸಿನಿಮಾದ ಫೇರಿ ಟೇಲ್ ಪೋಸ್ಟರ್ ಭಗವಾಗಿ ನಾದಿಯಾ ಪಾತ್ರ ಇಂಟ್ರಡ್ಯೂಸ್ ಮಾಡಲಾಗಿತ್ತು. ಈ ಪಾತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಫೇರಿ ಟೇಲ್ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ.
ನಾದಿಯಾ ಫೇರಿ ಟೇಲ್ ಪೋಸ್ಟರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

