- Home
- Entertainment
- Kiccha Sudeep Caravan: ಅಬ್ಬಬ್ಬಾ.. 6.5 ಕೋಟಿ ರೂ ಬೆಲೆ ಕ್ಯಾರವಾನ್ ಖರೀದಿಸಿದ ಕಿಚ್ಚ ಸುದೀಪ್!
Kiccha Sudeep Caravan: ಅಬ್ಬಬ್ಬಾ.. 6.5 ಕೋಟಿ ರೂ ಬೆಲೆ ಕ್ಯಾರವಾನ್ ಖರೀದಿಸಿದ ಕಿಚ್ಚ ಸುದೀಪ್!
Actor Kiccha Sudeep News: ಭಾರತದಲ್ಲಿ ಸಾಕಷ್ಟು ದಿಗ್ಗಜರು ಸ್ವಂತ ಕ್ಯಾರವಾನ್ ಹೊಂದಿರುತ್ತಾರೆ. ಅದರಲ್ಲಿ ಬಾತ್‌ರೂಮ್, ಬೆಡ್, ಕಿಚನ್ ಸೇರಿದಂತೆ ಕೆಲ ಸೌಲಭ್ಯಗಳು ಇರುತ್ತವೆ. ಈಗ ನಟ ಕಿಚ್ಚ ಸುದೀಪ್ ಅವರು ಕ್ಯಾರವಾನ್ ಖರೀದಿ ಮಾಡಿದ್ದಾರೆ.

ಎಲ್ಲಿ ರೆಡಿ ಆಯ್ತು?
ದೇಶದ ಪ್ರಸಿದ್ಧ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಮಾಲೀಕತ್ವದ DC2 ಸಂಸ್ಥೆಯೇ ಈ ಕ್ಯಾರವಾನ್ ಕಸ್ಟಮೈಸ್ ಮಾಡಿದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ಕ್ಯಾರವಾನ್ ವಿನ್ಯಾಸ ಮಾಡಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್ ಡಿಸೈನ್ ಆಗಿದೆ. ಇದರಲ್ಲಿ ಜಿಮ್ ಮಾಡ್ಯೂಲರ್ ಕೂಡ ಇದೆಯಂತೆ.
K ಸಿಗ್ನೇಚರ್
ಈ ಕ್ಯಾರವಾನ್‌ನ ಮುಂಭಾಗ, ಹಿಂಭಾಗದಲ್ಲಿ K ಎಂಬ ಲೋಗೋ ಕೂಡ ಇದೆ. ಅವರ ಕಾರ್ ಮೇಲೂ ಕೂಡ K ಎಂಬ ಸಿಗ್ನೇಚರ್ ಇರುತ್ತದೆ, ಈಗ ಕ್ಯಾರವಾನ್ ಮೇಲೂ ಇದೆ.
ಸಿನಿಮಾ ಶೂಟಿಂಗ್
'ಬಿಲ್ಲ ರಂಗ ಭಾಷಾ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಶೂಟಿಂಗ್ ಸೆಟ್‌ಗೆ ಕ್ಯಾರವಾನ್ ಆಗಮನ ಆಗಿದೆ. ಇದರ ಜೊತೆಗೆ ಇನ್ನೇನು ಸೆಪ್ಟೆಂಬರ್‌ನಲ್ಲಿ ಬಿಗ್ ಬಾಸ್ ಶೋ ಕೂಡ ಆರಂಭ ಆಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

