MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 'ಹಿಂದಿ ಭಾಷಾ ಶ್ರೇಷ್ಠತೆ ಅಹಂ ಒಪ್ಪಲ್ಲ': ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ಜಾವೇದ್ ಅಖ್ತರ್! ಅಷ್ಟಕ್ಕೂ ಆಗಿದ್ದೇನು?

'ಹಿಂದಿ ಭಾಷಾ ಶ್ರೇಷ್ಠತೆ ಅಹಂ ಒಪ್ಪಲ್ಲ': ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ಜಾವೇದ್ ಅಖ್ತರ್! ಅಷ್ಟಕ್ಕೂ ಆಗಿದ್ದೇನು?

ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಛಾರಣೆಯನ್ನು ಟೀಕಿಸುವವರ ವಿರುದ್ಧ ಬಾಲಿವುಡ್ ಹಿರಿಯ ಕಥೆಗಾರ ಜಾವೇದ್ ಅಖ್ತರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಷಾ ಶ್ರೇಷ್ಠತೆಯ ಅಹಂಕಾರ ಸರಿಯಲ್ಲ ಎಂದು ಅವರು ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಏನದು ವಿವಾದ ಇಲ್ಲಿ ತಿಳಿಯಿರಿ.

2 Min read
Author : Sathish Kumar KH
Published : Oct 25 2026, 08:46 PM IST
Share this Photo Gallery
  • FB
  • TW
  • Linkdin
  • Whatsapp
15
ರಶ್ಮಿಕಾ ಬೆಂಬಲಕ್ಕೆ ನಿಂತ ಜಾವೇದ್ ಅಖ್ತರ್
Image Credit : Instagram

ರಶ್ಮಿಕಾ ಬೆಂಬಲಕ್ಕೆ ನಿಂತ ಜಾವೇದ್ ಅಖ್ತರ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ; ಬಾಲಿವುಡ್‌ನಲ್ಲೂ ಸ್ಟಾರ್ ನಟರ ಜೊತೆ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆದರೆ, ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಾತನಾಡುವ ಹಿಂದಿ ಉಚ್ಛಾರಣೆ (Accent) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟೀಕೆಗಳು, ಟ್ರೋಲ್‌ಗಳು ಕೇಳಿಬರುತ್ತಲೇ ಇರುತ್ತವೆ.

ಇದೀಗ ಈ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಪರವಾಗಿ ಬಾಲಿವುಡ್‌ನ ಹಿರಿಯ ಚಿತ್ರಸಾಹಿತಿ ಹಾಗೂ ಕಥೆಗಾರ ಜಾವೇದ್ ಅಖ್ತರ್ (Javed Akhtar) ಧ್ವನಿ ಎತ್ತಿದ್ದಾರೆ. ಹಿಂದಿ ಭಾಷಾ ಶ್ರೇಷ್ಠತೆಯ ಗುಂಗಿನಲ್ಲಿರುವವರಿಗೆ ಖಡಕ್ ಆಗಿ ತಪರಾಕಿ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಟ್ರೋಲರ್ಸ್‌ಗೆ ಜಾವೇದ್ ಅಖ್ತರ್ ನೀಡಿದ ಖಡಕ್ ತಿರುಗೇಟು ಏನು?
Image Credit : Getty

ಟ್ರೋಲರ್ಸ್‌ಗೆ ಜಾವೇದ್ ಅಖ್ತರ್ ನೀಡಿದ ಖಡಕ್ ತಿರುಗೇಟು ಏನು?

ರಶ್ಮಿಕಾ ಅವರ ಹಿಂದಿ ಸಂಭಾಷಣೆಯನ್ನು ಅಣಕಿಸುವವರ ವಿರುದ್ಧ 'X' (ಟ್ವಿಟರ್) ಖಾತೆಯಲ್ಲಿ ಸಿಡಿದೆದ್ದಿರುವ ಜಾವೇದ್ ಅಖ್ತರ್, ‘ರಶ್ಮಿಕಾ ಅವರ ಉಚ್ಛಾರಣೆಯಲ್ಲಿ ತಪ್ಪು ಹುಡುಕುವವರಿಗೆ, ವಿಶ್ವದ ಅತ್ಯಂತ ಹಳೆಯ ಆಡುಭಾಷೆಯಾದ ತಮಿಳಿನ ಕೆಲವೇ ಕೆಲವು ಸಾಲುಗಳನ್ನು ಮಾತನಾಡಲು ಕೊಡಿ; ನೋಡೋಣ ಅವರು ಹೇಗೆ ಉಚ್ಛರಿಸುತ್ತಾರೆಂದು! ಈ ನಕಲಿ ಮತ್ತು ಆಧಾರರಹಿತ ಭಾಷಾ ಶ್ರೇಷ್ಠತೆಯ ಅಹಂಕಾರವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಮಾತೃಭಾಷೆಯಲ್ಲದ ಭಾಷೆಯೊಂದನ್ನು ಕಲಿತು, ಅದರಲ್ಲಿ ಸ್ವತಃ ಡಬ್ಬಿಂಗ್ ಮಾಡಿ ನಟಿಸುವಾಗ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳದೆ, ಕೇವಲ ಪ್ರಾದೇಶಿಕ ಆಕ್ಸೆಂಟ್ ಅನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅನ್ಯಾಯ ಎಂದು ಜಾವೇದ್ ಅಖ್ತರ್ ಬಲವಾಗಿ ಪ್ರತಿಪಾದಿಸಿದ್ದಾರೆ.

Those who have any problem with the pronounciation of Tamil actor Rashmika should be given a few lines of Tamil which is the oldest spoken language in the world and let’s see how well they pronounce Tamil . This fake and baseless linguistic superiority is not acceptable.

— Javed Akhtar (@Javedakhtarjadu) October 25, 2026

Related Articles

Related image1
ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಂಡ ಕನ್ನಡದ ಹಿರಿಯ ನಟ! 'ರಣಬಾಲಿ'ಯಲ್ಲಿ ಬಿರಾದಾರ್‌ಗೆ ಮಹತ್ವದ ಪಾತ್ರ
Related image2
Rashmika Deverakonda: ರಶ್ಮಿಕಾ ಮಂದಣ್ಣ ಇನ್ಮುಂದೆ ಅಧಿಕೃತವಾಗಿ 'ರಶ್ಮಿಕಾ ದೇವರಕೊಂಡ'..? ಇಲ್ನೋಡಿ.. 'ಅನ್ನಪೂರ್ಣೆ'ಯಾದ ಬಳಿಕ ಈ ಚೇಂಜ್!
35
'ನಾನು ಸೌತ್ ಇಂಡಿಯನ್, ಆಕ್ಸೆಂಟ್ ಇದ್ದೇ ಇರುತ್ತೆ': ರಶ್ಮಿಕಾ ನೇರ ಮಾತು
Image Credit : X

'ನಾನು ಸೌತ್ ಇಂಡಿಯನ್, ಆಕ್ಸೆಂಟ್ ಇದ್ದೇ ಇರುತ್ತೆ': ರಶ್ಮಿಕಾ ನೇರ ಮಾತು

ಇತ್ತೀಚೆಗೆ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ, ತಮ್ಮ ಹಿಂದಿ ಉಚ್ಛಾರಣೆ ಮೇಲಿನ ಟೀಕೆಗಳ ಬಗ್ಗೆ ಮಾತನಾಡಿದ್ದರು. 'ನನ್ನ ಹಿಂದಿ ಮಾತಿನಲ್ಲಿ ದಕ್ಷಿಣ ಭಾರತೀಯ ಆಕ್ಸೆಂಟ್ ಇದೆ ಎಂದು ಹಲವರು ಹೇಳುತ್ತಾರೆ. ಆದರೆ ನಾನೊಬ್ಬ ದಕ್ಷಿಣ ಭಾರತದವಳು. ಹಾಗಾಗಿ ನನ್ನ ಮಾತಿನಲ್ಲಿ ಆ ಪ್ರಭಾವ (South Indian Accent) ಇರುವುದು ಸಹಜ. ಅದಿಲ್ಲದೆ ಬೇರೆ ರೀತಿ ಇರಲು ಹೇಗೆ ಸಾಧ್ಯ? ಇದನ್ನು ಸಮಸ್ಯೆಯೆಂದು ನೋಡುವುದೇ ತಪ್ಪು' ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದರು.

45
ಸ್ವತಃ ತಾವೇ ಡಬ್ಬಿಂಗ್ ಮಾಡುವ ಛಲ!
Image Credit : X

ಸ್ವತಃ ತಾವೇ ಡಬ್ಬಿಂಗ್ ಮಾಡುವ ಛಲ!

'ಅನಿಮಲ್', 'ಚಾವಾ', 'ಸಿಕಂದರ್', 'ಥಮ್ಮಾ' ಮುಂತಾದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ತಮ್ಮ ಸಿನಿಮಾಗಳಿಗೆ ತಾವೇ ಡಬ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

'ನಾನು ನನ್ನ ನಿರ್ದೇಶಕರಿಗೆ ಯಾವಾಗಲೂ ಬೇರೆ ಡಬ್ಬಿಂಗ್ ಕಲಾವಿದರನ್ನು ಬಳಸಿಕೊಳ್ಳುವ ಆಯ್ಕೆ ನೀಡುತ್ತೇನೆ. ಆದರೆ, ನಿರ್ದೇಶಕರು ನನ್ನ ನೈಜ ಧ್ವನಿಯನ್ನೇ ಇಷ್ಟಪಟ್ಟು ನನ್ನಿಂದಲೇ ಡಬ್ ಮಾಡಿಸುತ್ತಾರೆ.

‘ವಿಭಿನ್ನ ಭಾಷೆಗಳಿಗೆ ನನ್ನ ಸ್ವಂತ ಧ್ವನಿಯಲ್ಲಿ ಡಬ್ ಮಾಡುವುದು ನನಗೆ ಹೆಮ್ಮೆಯ ವಿಷಯ. ಟ್ರೋಲ್‌ಗಳಿಗೆ ಹೆದರಿ ನಾನೆಂದೂ ಒಂದು ಭಾಷೆಯ ಗಡಿಗೆ ಸೀಮಿತವಾಗುವುದಿಲ್ಲ; ಎಲ್ಲ ಭಾಷೆಗಳಲ್ಲೂ ನಟಿಸುತ್ತೇನೆ’ ಎಂದು ರಶ್ಮಿಕಾ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

55
ಜಾವೇದ್ ಅಖ್ತರ್ ನಿರ್ಧಾರಕ್ಕೆ ಪರ-ವಿರೋಧ
Image Credit : Getty

ಜಾವೇದ್ ಅಖ್ತರ್ ನಿರ್ಧಾರಕ್ಕೆ ಪರ-ವಿರೋಧ

ರಶ್ಮಿಕಾ ಮಂದಣ್ಣ ಅವರ ಈ ಸ್ಪಷ್ಟ ನಿಲುವು ಹಾಗೂ ಜಾವೇದ್ ಅಖ್ತರ್ ಅವರ ಬೆಂಬಲವೀಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಬಹುಭಾಷಾ ಕಲಾವಿದರಿಗೆ ಸಿಗಬೇಕಾದ ಗೌರವದ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ರಶ್ಮಿಕಾ ಮಂದಣ್ಣ
ಬಾಲಿವುಡ್
ಹಿಂದಿ ಹೇರಿಕೆ
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ದಸರಾಗೆ ಶುರುವಾದ ಅಬ್ಬರ.. ದೀಪಾವಳಿವರೆಗೂ ನಿಲ್ಲೋದು ಡೌಟು ಅಂತಿದ್ದಾರೆ ರಜನಿ-ರಶ್ಮಿಕಾ!
Recommended image2
ಕನ್ನಡದ ಹುಡುಗಿಯರಿಗೆ ತೆಲುಗಿನಲ್ಲಿ ಭರ್ಜರಿ ಡಿಮ್ಯಾಂಡ್: ಲಿಸ್ಟ್‌ನಲ್ಲಿದ್ದಾರೆ ಈ ಸ್ಟಾರ್ ನಟಿಯರು!
Recommended image3
ಮತ್ತೊಮ್ಮೆ ಅಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ: ವಿದ್ಯಾ ಬಾಲನ್ ಹೇಳಿದ ಮನದ ಮಾತಿದು!
Related Stories
Recommended image1
ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಂಡ ಕನ್ನಡದ ಹಿರಿಯ ನಟ! 'ರಣಬಾಲಿ'ಯಲ್ಲಿ ಬಿರಾದಾರ್‌ಗೆ ಮಹತ್ವದ ಪಾತ್ರ
Recommended image2
Rashmika Deverakonda: ರಶ್ಮಿಕಾ ಮಂದಣ್ಣ ಇನ್ಮುಂದೆ ಅಧಿಕೃತವಾಗಿ 'ರಶ್ಮಿಕಾ ದೇವರಕೊಂಡ'..? ಇಲ್ನೋಡಿ.. 'ಅನ್ನಪೂರ್ಣೆ'ಯಾದ ಬಳಿಕ ಈ ಚೇಂಜ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved