ಪಕ್ಷ ಬೇಧವಿಲ್ಲದೇ ಎಲ್ಲಾ ರಾಜಕಾರಣಿಗಳ ಮನಗೆದ್ದ ಗಿಲ್ಲಿ: ಮನೆಗೆ ಕರೆಸಿ ಬೆನ್ನುತಟ್ಟಿದ ಗಾಲಿ
ಕನ್ನಡ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನನ್ನು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಸನ್ಮಾನಿಸಿದ್ದಾರೆ. ಇದೀಗ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಲಕ್ಷ್ಮಿ ತಮ್ಮ ನಿವಾಸಕ್ಕೆ ಗಿಲ್ಲಿಯನ್ನು ಕರೆದು ಸನ್ಮಾನಿಸಿ ಶುಭ ಹಾರೈಸಿದ್ದಾರೆ.

ಪಕ್ಷಬೇಧವಿಲ್ಲದೇ ಗಿಲ್ಲಿ ನಟನಿಗೆ ರಾಜಕಾಣಿಗಳ ಸನ್ಮಾನ
ಕನ್ನಡ ಬಿಗ್‌ಬಾಸ್ ಮನೆಯಲ್ಲಿ ತನ್ನದೇ ಹಾಸ್ಯದಿಂದ ಎಲ್ಲರ ನಗಿಸುತ್ತಾ ಕಾಲೆಳೆಯುತ್ತಾ ಕರ್ನಾಟಕದ ಜನರ ಮನೆ ಮಗನಂತಾಗಿರುವ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನನ್ನು ಎಲ್ಲಾ ರಾಜಕಾಣಿಗಳು ಪಕ್ಷ ಬೇಧ ಮರೆತು ಸ್ವಾಗತಿಸಿ ಸನ್ಮಾನಿಸುತ್ತಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಗಿಲ್ಲಿ ನಟನನ್ನು ಒಬ್ಬೊಬ್ಬರೇ ರಾಜಕಾರಣಿಗಳು ಕರೆದು ಸನ್ಮಾನಿಸಿ ಖುಷಿ ಪಡುತ್ತಿದ್ದಾರೆ.
ಸಿಎಂ ಬಳಿಕ ಈಗ ಗಾಲಿ ಜನಾರ್ದನ ರೆಡ್ಡಿಯಿಂದಲೂ ಗಿಲ್ಲಿಗೆ ಸನ್ಮಾನ
ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಗಿಲ್ಲಿಯನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್, ಡಿಕೆ ಶಿವಕುಮಾರ್ ಹೀಗೆ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿ ಸನ್ಮಾನಿಸಿದ್ದಾರೆ. ಫೋನ್ ಕರೆ ಮಾಡಿಯೂ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಈಗ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು ಆಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಕೂಡ ಗಿಲ್ಲಿ ನಟನನ್ನು ಕರೆದು ಸನ್ಮಾನಿಸಿದ್ದಾರೆ.
ಮನೆಗೆ ಕರೆದು ಸನ್ಮಾನಿಸಿದ ಗಾಲಿ ಜನಾರ್ದನ ರೆಡ್ಡಿ ಅರುಣಾ ಲಕ್ಷ್ಮಿ ದಂಪತಿ
ಈ ಬಗ್ಗೆ ಸ್ವತಃ ಶಾಸಕ ಗಾಲಿ ಜನಾರ್ದನ ರೆಡ್ಡಿಯವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿ ಗಿಲ್ಲಿ ನಟನಿಗೆ ಶುಭ ಹಾರೈಸಿದ್ದಾರೆ. ಕನ್ನಡದ ಹೆಸರಂತ ರಿಯಾಲಿಟಿ ಶೋ ಬಿಗ್ ಬಾಸ್ 12ರ ಆವೃತ್ತಿಯ ವಿಜೇತ, ರಾಜ್ಯ ಅಲ್ಲದೆ ದೇಶ ವಿದೇಶದಾದ್ಯಂತ ತನ್ನ ಮಾತಿನಿಂದಲೇ ಮನೆ ಮನೆಗಳ ಮಾತಾಗಿ ನಾಡಿನ ಜನರ ಹೃದಯ ಗೆದ್ದ ಗಿಲ್ಲಿ ನಟ ಅವರನ್ನು ನಮ್ಮ ನಿವಾಸದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿ ಮಾಡಿ, ಆತ್ಮೀಯವಾಗಿ ಸನ್ಮಾನಿಸಿ, ಮುಂದಿನ ಅವರ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದೆವು ಎಂದು ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಾತಿನಿಂದಲೇ ಎಲ್ಲರ ಮನೆ ಸೆಳೆಯುತ್ತಿರುವ ಗಿಲ್ಲಿ
ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಗಿಲ್ಲಿಗೆ ಶಾಲು ಹೊದಿಸಿ ಬೃಹತ್ ಹೂವಿನ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಿದ್ದಾರೆ. ಹೌದು ಗಿಲ್ಲಿ ನಟ ತಮ್ಮ ಮಾತಿನಿಂದಲೇ ಎಲ್ಲರನ್ನು ರಂಜಿಸಿದವರು, ಅವರು ಆ ಸಮಯಕ್ಕೆ ಸರಿಯಾಗಿ ಮಾಡುವ ಹಾಸ್ಯ ಪ್ರತಿಯೊಬ್ಬರ ಮನೆ ಗೆದ್ದಿದೆ. ಕೆಲ ದಿನಗಳ ಹಿಂದಷ್ಟೇ ಅವರು ಪೊಲೀಸರ ಜೊತೆಗೂ ಹಾಸ್ಯ ಮಾಡಿ ಅವರ ಭದ್ರತೆಗೆಂದು ಬಂದ ಪೊಲೀಸರು ಬಿದ್ದು ಬಿದ್ದು ನಗುವಂತೆ ಮಾಡಿದ್ದರು.
ಇದನ್ನೂ ಓದಿ: ಪಿಜ್ಜಾ ಡೆಲಿವರಿ ಬಾಯ್ ಆದ ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ: ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ
ಪೊಲೀಸರನ್ನು ನಗುವಂತೆ ಮಾಡಿದ್ದ ಗಿಲ್ಲಿ
ಕನ್ನಡ ಬಿಗ್‌ಬಾಸ್‌ನಲ್ಲಿ ಗೆಲುವಿನ ನಂತರ ಗಿಲ್ಲಿ ಅವರಿಗೆ ಊಹೆಗೂ ಮೀರಿದ ಜನಪ್ರಿಯತೆ ಬಂದಿದ್ದು, ಅವರೆಲ್ಲಿ ಹೋಗುತ್ತಾರೋ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸೇರಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಸಿನಿಮಾ ನಟನಿಗಿಂತ ಹೆಚ್ಚು ಕ್ರೇಜ್ ಗಿಲ್ಲಿ ನಟನ ಮೇಲೆ ಜನರಿಗೆ ಹುಟ್ಟಿದೆ. ಹೀಗಾಗಿ ಅವರು ಹೋಗುವಲೆಲ್ಲಾ, ಜನ ಮುತ್ತಿಕೊಳ್ಳುತ್ತಿರುವುದರಿಂದಾಗಿ ಅವರಿಗೆ ರಕ್ಷಣೆ ನೀಡುವುದಕ್ಕೆ ಪೊಲೀಸರು ಹೋಗುತ್ತಿದ್ದಾರೆ. ಹೀಗೆ ತನ್ನ ರಕ್ಷಣೆಗೆ ಬಂದ ಪೊಲೀಸರು ತನ್ನನ್ನು ಎಳೆದುಕೊಂಡು ಹೋಗುತ್ತಿರುವುದು ನೋಡಿ, ಪೊಲೀಸರ ಬಳಿಯೇ ಗಿಲ್ಲಿ ' ಅಣ್ಣ ಒಳ್ಳೆ ಕಳ್ರನ್ನಾ ಏಳ್ಕೊಂಡೋಗೋ ತರ ಹೋಯ್ತಿದ್ದೀರಲ್ಲಣ್ಣ ಎಂದು ಕೇಳಿದ್ದರು. ಇದು ಪೊಲೀಸರು ನಗುವಂತೆ ಮಾಡಿತ್ತು.
ಇದನ್ನೂ ಓದಿ: ಗಂಡನಿಂದಲೇ ಸ್ವಾಟ್ ಕಮಾಂಡೋ ಆಗಿದ್ದ 24 ವರ್ಷದ ಗರ್ಭಿಣಿ ಪತ್ನಿಯ ಭೀಕರ ಹತ್ಯೆ: ಒಂದೂವರೆ ವರ್ಷದ ಮಗು ಅನಾಥ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

