- Home
- Entertainment
- ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂ... ಬಾಲಿವುಡ್ ಸ್ಟಾರ್ ನಟಿಯರ ಸೀಕ್ರೆಟ್ ಹೆಸರು ಇಲ್ಲಿವೆ ನೋಡಿ!
ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂ... ಬಾಲಿವುಡ್ ಸ್ಟಾರ್ ನಟಿಯರ ಸೀಕ್ರೆಟ್ ಹೆಸರು ಇಲ್ಲಿವೆ ನೋಡಿ!
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮುದ್ದಿನ ಅಡ್ಡಹೆಸರುಗಳಿಂದ ಕರೆಯುವುದು ಸಹಜ. ಇದೇ ರೀತಿ, ಬಾಲಿವುಡ್‌ನ ಜನಪ್ರಿಯ ನಟಿಯರಾದ ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಕಪೂರ್ ಸಹೋದರಿಯರಿಗೂ ವಿಚಿತ್ರ ಹಾಗೂ ತಮಾಷೆಯ ಅಡ್ಡಹೆಸರುಗಳಿವೆ.

ಚಿಂಟು, ಮಿಂಟು, ಚಿನ್ನ, ಬಂಗಾರಿ...
ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಇಟ್ಟ ಹೆಸರಿನ ಷಾರ್ಟ್ ಕಟ್ ಮಾಡಿ ಕರೆಯುವುದು ಮಾಮೂಲು. ಇನ್ನು ಕೆಲವರು ಮುದ್ದು, ಚಿನ್ನ, ಬಂಗಾರಿ, ಪುಟ್ಟಿ, ಚಿಂಟು, ಮಿಂಟು... ಹೀಗೆ ಮಕ್ಕಳನ್ನು ಕರೆಯುವುದು ಉಂಟು. ಕೆಲವೊಮ್ಮೆ ಈ ಅಡ್ಡ ಹೆಸರುಗಳೇ ಜೀವನಪೂರ್ತಿ ಇರುತ್ತದೆ ಅನ್ನಿ. ಇವುಗಳಲ್ಲಿ ಕೆಲವೊಂದು ವಿಚಿತ್ರ ಎನ್ನಿಸಿದರೆ, ಮತ್ತೆ ಕೆಲವೊಂದು ಪ್ರಾಣಿಗೆ ಕರೀತಿರೋದೋ, ಮಕ್ಕಳಿಗೋ ಗೊತ್ತಾಗದ ಹಾಗೆ ಇರುತ್ತದೆ. ಮತ್ತೆ ಕೆಲವು ಹಾಸ್ಯ ಎನ್ನಿಸುವುದೂ ಉಂಟು. ಒಟ್ಟಿನಲ್ಲಿ ಕರೆದದ್ದು ಅವರಿಗೇ ಎಂದು ಗೊತ್ತಾದ್ರೆ ಸಾಕು ಅಷ್ಟೇ. ಇದೇ ರೀತಿ ಬಾಲಿವುಡ್ ನಟಿಯರಿಗೆ ಫನ್ನಿ ಫನ್ನಿ ಅಡ್ಡ ಹೆಸರುಗಳು ಇವೆ. ಇವುಗಳನ್ನು ಇಂಗ್ಲಿಷ್ನಲ್ಲಿ ಸ್ವೀಟ್ ಆಗಿ ನಿಕ್ ನೇಮ್ (Nick Name) ಅನ್ನುವುದು ಉಂಟು.ಐಶ್ವರ್ಯ ರೈ (Aishwarya Rai) ಅವರಿಂದ ಹಿಡಿದು ಕರಿಷ್ಮಾ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರಿಗೆ ಅಡ್ಡ ಹೆಸರುಗಳು ಇದ್ದು ಅವುಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಮಿಮಿ ದೇಸಿ ಗರ್ಲ್
ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಹೇಳುವುದಾದರೆ, ಇವರನ್ನು ಪಿಗ್ಗಿ ಚಾಪ್ಸ್ ಎಂದು ಹೇಳುವುದು ಬಹುತೇಕ ಮಂದಿಗೆ ಗೊತ್ತೇ ಇದೆ. ಅದನ್ನು ಷಾರ್ಟ್ ಮಾಡಿ ಪಿಗ್ಗಿ ಎಂದೂ ಹೇಳುತ್ತಾರೆ. ಇವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ I Am Piggy Chops (@iampiggychops) ಎಂದೇ ಇದೆ, ಇನ್ನು ಕೆಲವರು ಈಕೆಗೆ ದೇಸಿ ಗರ್ಲ್ ಎಂದು ಹೇಳುವುದು ಉಂಟು. ಆದರೆ ಪ್ರಿಯಾಂಕಾ (Priyanka Chopra) ಮನೆಯಲ್ಲಿ ಅವರಿಗೆ ಕರೆಯುವುದು ವಿಥು ಅಥವಾ ಮಿಮಿ ಎಂದು.
ಐಶ್ವರ್ಯ ಅಲ್ಲ ಈಕೆ ಗುಲ್ಲು!
ಬಚ್ಚನ್ ಫ್ಯಾಮಿಲಿಯ ಸೊಸೆ ಐಶ್ವರ್ಯ ರೈ ಬಚ್ಚನ್ ಅವರಿಗೆ ಮನೆಯಲ್ಲಿ ಗುಲ್ಲು ಎಂದೇ ಕರೆಯಲಾಗುತ್ತಿತ್ತು. ಚಿಕ್ಕವರಿರುವಾಗಲೂ ನೋಡಲು ರಸಗುಲ್ಲಾದಂತಿದ್ದ ಐಶ್ವರ್ಯರನ್ನು ಸ್ವೀಟ್ ಆಗಿ ಗುಲ್ಲು ಎಂದು ಕರೆಯುತ್ತಿದ್ದರು. ಈಗಲೂ ಅದು ಬಿಟ್ಟಿಲ್ಲ. ಆಕೆಯ ತವರು ಮನೆಯವರು, ಕುಟುಂಬಸ್ಥರು ಹಾಗೂ ಕೆಲ ಕ್ಲೋಸ್ ಫ್ರೆಂಡ್ಸ್ ಈಗಲೂ ಗುಲ್ಲು ಎಂದು ಕರೆಯುವುದು ಉಂಟು. ಇನ್ನು ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ (Sonam Kapoor) ಅವರನ್ನು ಜಿರಾಫೆ ಎಂದೇ ಕುಟುಂಬಸ್ಥರು ತಮಾಷೆ ಮಾಡುತ್ತಾರೆ. ಈಗಷ್ಟೇ ಅಮ್ಮನಾಗಿರುವ ಸೋನಂ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನೀಳಕಾಯದ ಹಿನ್ನೆಲೆಯಲ್ಲಿ ತಮ್ಮನ್ನು ಜಿರಾಫೆ ಎಂದು ಕರೆಯುತ್ತಾರೆ ಎಂದಿದ್ದರು.
‘ನುಷ್ಕೇಶ್ವರ್’ ಅನುಷ್ಕಾ ಶರ್ಮಾ
ಇನ್ನು ಅನುಷ್ಕಾ ಶರ್ಮಾ ಅವರದ್ದು ವಿಚಿತ್ರ ನಿಕ್ನೇಮ್. ಇವರನ್ನು ‘ನುಷ್ಕೇಶ್ವರ್’ ಎಂದು ಕರೆಯುತ್ತಿದ್ದರಂತೆ ನಂತರ ನುಷ್ಕಿ ನುಷ್ಕಿ ಎಂದು ಕರೆಯಲಾಗುತ್ತಿತ್ತು. ಪತಿ ವಿರಾಟ್ ಕೊಹ್ಲಿ ಕೂಡ ಈಗಲೂ ನುಷ್ಕಿ ಎಂದೇ ಕರೆವುದು. ಇನ್ನು ಇನ್ನೋರ್ವ ಬಾಲಿವುಡ್ ಅಮ್ಮ ಆಲಿಯಾ ಭಟ್ರನ್ನು ಆಲೂ ಎಂದೇ ಕರೆಯಲಾಗುತ್ತದೆ. ಅವರ ತಾಯಿ ಸೋನಿ ರಜ್ದಾನ್ ಮತ್ತು ತಂದೆ ಮಹೇಶ್ ಭಟ್ ಸೇರಿದಂತೆ ಕೆಲವು ಸ್ನೇಹಿತರು, ಕುಟುಂಬಸ್ಥರು ಈಗಲೂ ಆಲೂ ಎನ್ನುತ್ತಾರೆ.
ಲೋಲೋ ಕರಿಷ್ಮಾ
ನಟಿ ಕರಿಷ್ಮಾ ಕಪೂರ್ (Karishma Kapoor) ಅವರನ್ನು ಬಾಲ್ಯದಿಂದಲೂ ಲೋಲೋ ಎಂದು ಕರೆಯಲಾಗುತ್ತದೆ. ಬಾಲಿವುಡ್‌ನ ಬಹುತೇಕ ಮಂದಿ ಇದೇ ಹೆಸರಿನಿಂದ ಅವರನ್ನು ಕರೆದರೆ, ಇನ್ನೋರ್ವ ಕಪೂರ್ ಫ್ಯಾಮಿಲಿಯ ಪುತ್ರಿ ಕರೀನಾ ಕಪೂರ್ ಅವರನ್ನು ಬೆಬೋ ಎಂದು ಕರೆಯಲಾಗುತ್ತದೆ. ಇದು ಎಲ್ಲರಿಗೂ ತಿಳಿದದ್ದೇ. ಕರೀನಾ ಅನ್ನುವುದಕ್ಕಿಂತಲೂ ಹೆಚ್ಚಾಗಿ ಈಕೆ ಬೆಬೋ ಎಂದೇ ಚಿರಪರಿಚಿತರು.
ಜಿರಾಫೆ ಸೋನಂ ಕಪೂರ್
ಇನ್ನು ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ (Sonam Kapoor) ಅವರನ್ನು ಜಿರಾಫೆ ಎಂದೇ ಕುಟುಂಬಸ್ಥರು ತಮಾಷೆ ಮಾಡುತ್ತಾರೆ. ಈಗಷ್ಟೇ ಅಮ್ಮನಾಗಿರುವ ಸೋನಂ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನೀಳಕಾಯದ ಹಿನ್ನೆಲೆಯಲ್ಲಿ ತಮ್ಮನ್ನು ಜಿರಾಫೆ ಎಂದು ಕರೆಯುತ್ತಾರೆ ಎಂದಿದ್ದರು.
ಆಲೂ ಆಲಿಯಾ
ಇನ್ನು ಇನ್ನೋರ್ವ ಬಾಲಿವುಡ್ ಅಮ್ಮ ಆಲಿಯಾ ಭಟ್ರನ್ನು ಆಲೂ ಎಂದೇ ಕರೆಯಲಾಗುತ್ತದೆ. ಅವರ ತಾಯಿ ಸೋನಿ ರಜ್ದಾನ್ ಮತ್ತು ತಂದೆ ಮಹೇಶ್ ಭಟ್ ಸೇರಿದಂತೆ ಕೆಲವು ಸ್ನೇಹಿತರು, ಕುಟುಂಬಸ್ಥರು ಈಗಲೂ ಆಲೂ ಎನ್ನುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

