ಮಾರ್ಕ್ ಸುದೀಪ್ ಆಡಿದ ಮಾತುಗಳನ್ನು ಡಿಕೋಡ್ ಮಾಡಿದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ
ಸುದೀಪ್ ನೀಡಿದ ಹೇಳಿಕೆ ಸ್ಟಾರ್ ವಾರ್ ಚರ್ಚೆಗೆ ಕಾರಣವಾಗಿದೆ. ಈ ವಿವಾದದ ಕುರಿತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಪ್ರತಿಕ್ರಿಯಿಸಿದ್ದು, ಸುದೀಪ್ ಮಾತುಗಳು ಯಾವುದೇ ನಟನ ವಿರುದ್ಧವಾಗಿರಲಿಲ್ಲ, ಬದಲಿಗೆ ಸಿನಿಮಾ ಪೈರಸಿ ಮತ್ತು ನಕಲಿ ವಿಮರ್ಶೆಗಳ ವಿರುದ್ಧದ ಎಚ್ಚರಿಕೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೋಡ್
ಹುಬ್ಬಳ್ಳಿಯ ಮಾರ್ಕ್ ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರ ಮಾತುಗಳು ಗಾಂಧಿನಗರದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಸುದೀಪ್ ಹೇಳಿಕೆ ಬೆನ್ನಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮಾತು ಚಂದನವನದಲ್ಲಿ ಸ್ಟಾರ್ ವಾರ್ ಆರಂಭವಾಗಿದೆಯಾ ಎಂಬ ಅನುಮಾನಗಳಿಗೆ ಕಾರಣವಾಯ್ತು. ಇದೀಗ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ಸುದೀಪ್ ಮಾತುಗಳನ್ನು ಡಿಕೋಡ್ ಮಾಡಿದ್ದಾರೆ.
ಯಾರು ಯಾರಿಗೆ ಮತ್ತು ಯಾಕೆ ಎಚ್ಚರಿಕೆ?
ನಾನೋರ್ವ ನಿರ್ದೇಶಕನಾಗಿದ್ದು, ಯಾರು ಯಾರಿಗೆ ಮತ್ತು ಯಾಕೆ ಎಚ್ಚರಿಕೆ ನೀಡಬೇಕು. ನಟ ಕಿಚ್ಚ ಸುದೀಪ್ ಯಾರೋ ಒಬ್ಬರ ಬಗ್ಗೆ ಹೇಳಿದ ಮಾತಲ್ಲ. ಇವತ್ತು ನಮ್ಮ ಇಂಡಸ್ಟ್ರಿಯನ್ನು ಪೈರಸಿ ಕಾಡುತ್ತಿದ್ದು, ಸಿನಿಮಾ ಬಗ್ಗೆ ನಡೆಸುವ ಅಪಪ್ರಚಾರ ಸಿನಿಮಾ ಥಿಯೇಟರ್‌ಗಳ ಮುಂದೆ ನಡೆಸುವ ಹೈ ಡ್ರಾಮಾ ಎಲ್ಲದರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಪೈರಸಿ
ಬುಕ್ ಮೈ ಶೋಗಳಲ್ಲಿ ಕೆಟ್ಟದಾಗಿ ಕಮೆಂಟ್ಸ್ ಹಾಕೋದು, ಫೇಕ್ ರಿವ್ಯೂಗಳ ಸ್ಕ್ರೀನ್ ಶಾರ್ಟ್‌ಗಳನ್ನು ಹಾಕೋದು, ಥಿಯೇಟರ್‌ಗೆ ಬಂದ ಕೆಲವೇ ಗಂಟೆಗಳಲ್ಲಿ ಲಿಂಕ್‌ಗಳಲ್ಲಿ ಹಾಕುತ್ತಾರೆ. ಇಂತಹವರಿಂದಾಗಿ ಸಿನಿಮಾಗಳು ಹೀನಾಯ ಸ್ಥಿತಿಗೆ ತಲುಪುತ್ತಿವೆ. ಪೈರಸಿ ಮತ್ತು ಸುಳ್ಳು ವಿಮರ್ಶೆ ಮಾಡುವ ಕಿಡಿಗೇಡಿಗಳಿಗೆ ಸುದೀಪ್ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದ್ದಾರೆ.
ಮಾರ್ಕ್, ಡೆವಿಲ್ ಮತ್ತು 45 ಸಿನಿಮಾಗೂ ಪೈರೇಸಿ ಆಗಬಾರದು. ಇಂತಹವರ ವಿರುದ್ಧ ಹೋರಾಟ ಮಾಡಬೇಕು ಅಲ್ಲವಾ ಎಂದು ಚಕ್ರವರ್ತಿ ಚಂದ್ರಚೂಡ ಪ್ರಶ್ನೆ ಮಾಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೇಳಿಕೆ ಖಂಡಿವಾಗಿಯೂ ಉತ್ತಮವಾದ ಬೆಳವಣಿಗೆ ಅಲ್ಲ. ಸುದೀಪ್ ಬಗ್ಗೆಯೇ ಹೇಳಿದ್ರೆ ನನ್ನ ಬಳಿಯಲ್ಲಿ ಮಾತನಾಡಲು ಹಲವು ವಿಚಾರಗಳಿವೆ. ಆ ಹೆಣ್ಣು ಮಗಳು ಯಾಕೆ ಆ ಹೇಳಿಕೆ ಕೊಟ್ರೋ ಗೊತ್ತಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಇವರು ಯಾಕೆ ರಿಯಾಕ್ಟ್ ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ಚಕ್ರವರ್ತಿ ಚಂದ್ರಚೂಡ ಪ್ರತಿಕ್ರಿಯೆ
ಸಾರಥಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ದರ್ಶನ್ ಜೈಲಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮಾಡಿದ ಸಹಕಾರ ಮರೆಯಬಾರದು. ಕಾಟೇರ ನೋಡಿ ಸುದೀಪ್ ಏನ್ ಹೇಳಿದ್ರು, ಕಳೆದ ಬಾರಿ ಬರ್ತ್ ಡೇ ಸಂದರ್ಭದಲ್ಲಿ ಸಂದೀಪ್ ತಮ್ಮ ಅಭಿಮಾನಿಗಳಿಗೆ ಏನ್ ಮೆಸೇಜ್ ನೀಡಿದ್ರು ತಿಳಿದುಕೊಳ್ಳಬೇಕು. ಯಾವುದೇ ವ್ಯಕ್ತಿಯ ಹೆಸರೇಳಿಲ್ಲ ಅವರು ಇಂಥವರಿಗೆ ಹೇಳಿದ್ದಾರೆ ಅಂತ ಹೇಳಲಿ ಆಗ ನಾನು ಮಾತನಾಡುತ್ತೇನೆ ಎಂದು ವಿಜಯಲಕ್ಷ್ಮೀ ದರ್ಶನ್ ಹೇಳಿಕೆಗಳಿಗೆ ಚಕ್ರವರ್ತಿ ಚಂದ್ರಚೂಡ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಕೊನೆಯ ಬಾರಿ ಅತ್ತಿದ್ದನ್ನು ಹೇಳಿಕೊಂಡ ಉಪೇಂದ್ರ; ಈಗ ಕಣ್ಣೀರು ಬತ್ತಿದೆ ಎಂದ ರಿಯಲ್ ಸ್ಟಾರ್
ಚಿತ್ರರಂಗಕ್ಕೆ ಒಳೆಯದಲ್ಲ
ಶಿವಣ್ಣ ಹಾಗೂ ಸುದೀಪ್ ಅಣ್ಣ-ತಮ್ಮನ ರೀತಿಯಲ್ಲಿದ್ದಾರೆ. ಶಿವಣ್ಣನ ಆರೋಗ್ಯ ಹಾಳಾದಾಗ ಸುದೀಪ್ ಯಾವ ರೀತಿ ಸ್ಪಂದಿಸಿದ್ದರು ಮತ್ತು ಅವರನ್ನು ಹೇಗೆ ಆರಾಧಿಸುತ್ತಾರೆ ಅನ್ನೋದನ್ನು ನಾವೆಲ್ಲ ನೋಡಿದ್ದೇವೆ. ಅವರ 45 ಸಿನಿಮಾಗೆ ಸುದೀಪ್ ಅವರೇ ಮೊದಲು ವಿಶ್ ಮಾಡಿದ್ರು. ಶಿವರಾಜ್‌ಕುಮಾರ್ ಮತ್ತು ಸುದೀಪ್ ಮಧ್ಯೆ ಯಾವುದೇ ಸ್ಪರ್ಧೆ ಇಲ್ಲ. ಈ ವಿಷಯದಲ್ಲಿ ಶಿವಣ್ಣ ಅವರನ್ನು ಯಾಕೆ ಎಳೆದುಕೊಂಡು ಬರುತ್ತೀರಿ. ಈ ರೀತಿಯ ಬೆಳವಣಿಗೆ ಚಿತ್ರರಂಗಕ್ಕೆ ಒಳೆಯದಲ್ಲ. ಅನಗತ್ಯ ವಿವಾದಗಳನ್ನು ಸೃಷ್ಟಿಸಬಾರದು ಎಂದು ಚಕ್ರವರ್ತಿ ಚಂದ್ರಚೂಡ ಮನವಿ ಮಾಡಿಕೊಂಡರು.
ಇದನ್ನೂ ಓದಿ: Bigg Boss Kannada 12: ಮುಂದಿನ ವೀಕೆಂಡ್ ಸಂಚಿಕೆಗೆ ಬರಲ್ಲ ಸುದೀಪ್? ಕಿಚ್ಚನ ಬದಲಿಗೆ ಬರೋರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

