ಇದೀಗ ನಟ ಧನ್ವೀರ್ ಗೌಡ ಅವರು ' ಕಾಡಿನಲ್ಲಿ ಬಹಳಷ್ಟು ಪ್ರಾಣಿಗಳು ಇದ್ರೂ ಕಾಡಿಗೆ ಸಿಂಹನೇ ರಾಜ.. ಅದು ಸಿಂಗಲ್ ಆಗಿದ್ರೂ ಅದೇ ಕಾಡಿನ ರಾಜ' ಎಂಬರ್ಥದ ಡೈಲಾಗ್ ಪೋಸ್ಟ್ ಮಾಡಿದ್ದಾರೆ. ಧನ್ವೀರ್ ಗೌಡ ಅವರ ಪೋಸ್ಟ್ ಈಗಾಗಲೇ ಹಚ್ಚಿರುವ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿಯುತ್ತದೆಯಾ?
ಸುದೀಪ್-ದರ್ಶನ್ ಫ್ಯಾನ್ಸ್ ವಾರ್…
ನಟ ದರ್ಶನ್ (Darshan Thoogudeepa) ಹಾಗೂ ಕಿಚ್ಚ ಸುದೀಪ್ (Kichcha Sudeep) ನಡುವಿನ ಫ್ಯಾನ್ಸ್ ವಾರ್ ಮತ್ತೆ ತಾರಕಕ್ಕೆ ಏರಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ನಟ ಸುದೀಪ್ ಅವರು 'ಮಾರ್ಕ್' ಸಿನಿಮಾದ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದರು. ಅಲ್ಲಿ ಸುದೀಪ್ ಪೈರಸಿ ವಿರುದ್ಧ ಮಾತನಾಡಿದ್ದರು ಎನ್ನಲಾಗಿದ್ದರೂ ಸುದೀಪ್ ಅವರು ಎಲ್ಲಿಯೂ ಪೈರಸಿ ಎನ್ನುವ ಪದ ಉಪಯೋಗಿಸದೇ ಆ ಬಗ್ಗೆ ಮಾತನ್ನಾಡಿದ್ದರು. ಆದರೆ, ಸಹಜವಾಗಿಯೇ ಅದು ಪೈರಸಿ ವಿರುದ್ಧ ಎಂಬುದು ಅರ್ಥವಾಗದ ದರ್ಶನ್ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾಗಳು ಅದು ದರ್ಶನ್ ವಿರುದ್ಧ ಆಡಿರುವ ಮಾತು ಎಂದೇ ಭಾವಿಸಿದ್ದಾರೆ.
ಜೊತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೂಡ ಕಿಚ್ಚ ಸುದೀಪ್ ಆಡಿರುವ ‘ಯುದ್ಧ’ದ ಬಳಿಕ ವೇದಿಕೆಯೊಂದರಲ್ಲಿ ಮಾತನ್ನಾಡಿದ್ದಾರೆ.- ಅದೀಗ ಚಿತ್ರವಿಚಿತ್ರ ತಿರುವುಗಳನ್ನು ತೆಗೆದುಕೊಂಡಿದ್ದು, ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗಿದೆಯಾ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ..
ಈ ಎಲ್ಲದರ ಮಧ್ಯೆ ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಹೊಸ ವಾರ್ ಸೃಷ್ಟಿಸುವತ್ತ ಸಾಗಿದೆಯಾ? ಈ ಅನುಮಾನ ಈಗ ದಟ್ಟವಾಗಿ ಕಾಡತೊಡಗಿದೆ. ಕಾರಣ, ನಟ ಕಿಚ್ಚ ಸುದೀಪ್ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ - 'ಹುಬ್ಬಳ್ಳಿಯ ಗಂಡುಮೆಟ್ಟಿದ ನೆಲದಲ್ಲಿ ನಿಂತು ಮಾತನಾಡಿದ್ರೆ ಇಡೀ ಕರುನಾಡಿಗೆ ಕೇಳಿಸುತ್ತೆ ಅಂತ ಮಾತು ಶುರು ಮಾಡಿದ ಕಿಚ್ಚ, ಆಮೇಲೆ ಆಡಿದ್ದೆಲ್ಲಾ ವಿಚಿತ್ರ ಎನ್ನಿಸುವ ಕಿಡಿನುಡಿಗಳೇ... 'ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ’ . ಈಗ ನಾನು ಯುದ್ಧಕ್ಕೆ ಸಿದ್ದ ಅಂತ ಹೇಳಿದ್ರು ಕಿಚ್ಚ ಸುದೀಪ್.
ಯಾರ ವಿರುದ್ದ ಕಿಚ್ಚನ ಯುದ್ಧ? ಏನಿದು ಸಮರ? ಯಾರ ವಿರುದ್ಧವೋ ಅಥವಾ ಯಾವುದರ ವಿರುದ್ಧವೋ?
45ಗೆ ಟಕ್ಕರಾ..? ದಾಸನ ಫ್ಯಾನ್ಸ್ಗೆ ವಾರ್ನಿಂಗಾ..?
ಹೌದು ಸುದೀಪ್ ಆಡಿರೋ ಮಾತುಗಳನ್ನ ಕೇಳಿದವರಿಗೆ , ಈ ಯುದ್ಧ ಯಾರ ವಿರುದ್ದ ಅನ್ನೋ ಡೌಟ್ ಶುರುವಾಗಿದೆ. ಯಾಕಂದ್ರೆ ಮಾರ್ಕ್ ಸಿನಿಮಾ ಬಿಡುಗಡೆ ದಿನವೇ ಶಿವಣ್ಣ, ಉಪೇಂದ್ರ ರಾಜ್ ಶೆಟ್ಟಿ ನಟಿಸಿರೋ 45 ಸಿನಿಮಾ ರಿಲೀಸ್ ಆಗ್ತಾ ಇದೆ. ಮಾರ್ಕ್ ಮತ್ತು 45 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಸಮರ ನಡೆಯಲಿದೆ.
ಈಗಾಗ್ಲೇ 45 ತಂಡದವರು ನಮ್ಮ ಸಿನಿಮಾನೂ ಗೆಲ್ಲಲಿ ಮಾರ್ಕ್ ಕೂಡ ಗೆಲ್ಲಲಿ ಅಂತ ಹಾರೈಸಿದ್ದಾರೆ. ಆದ್ರೆ ಕಿಚ್ಚ ಯಾಕೆ ಸಮರದ ಮಾತನಾಡಿದ್ರು ಅಂತ ಫ್ಯಾನ್ಸ್ಗೆ ಡೌಟ್ ಬಂದಿದೆ. ಅಸಲಿಗೆ ಕಿಚ್ಚ ಸಮರ ಸಾರಿರೋದು 45 ಮೇಲಲ್ಲ, ಡೆವಿಲ್ ಮೇಲೆ ಅಂತ ಸಂದೇಹ ಶುರುವಾಗಿದೆಯಾ?
ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್.. ಫ್ಯಾನ್ಸ್ ವಾರ್.. ಪರ್ವ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಸುದೀಪ್ 'ಯುದ್ಧಕ್ಕೆ ಸಿದ್ದ ಮಾತಿಗೆ ಬದ್ಧ' ಅಂತ ಹೇಳಿದ್ರು. ಅದಕ್ಕೆ ಟಾಂಗ್ ಕೊಡುವಂತೆ ವಿಜಯಲಕ್ಷ್ಮೀ ದರ್ಶನ್ ಮಾತನಾಡಿದ್ರು. ಈ ಇಬ್ಬರ ಮಾತುಗಳನ್ನಿಟ್ಟುಕೊಂಡು ಕಿಚ್ಚ-ದಾಸನ ಫ್ಯಾನ್ಸ್ ಅಖಾಡಕ್ಕೆ ಇಳಿದು ಯುದ್ಧ ಮಾಡ್ತಾ ಇದ್ದಾರೆ.
ಕಿಚ್ಚ Vs ದಾಸ.. ಫ್ಯಾನ್ಸ್ ವಾರ್ಗೆ ಧನ್ವೀರ್ ಎಂಟ್ರಿ
ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ, ಅಂತ ಡೈಲಾಗ್ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇದೀಗ ನಟ ಧನ್ವೀರ್ ಗೌಡ ಅವರು ' ಕಾಡಿನಲ್ಲಿ ಬಹಳಷ್ಟು ಪ್ರಾಣಿಗಳು ಇದ್ರೂ ಕಾಡಿಗೆ ಸಿಂಹನೇ ರಾಜ.. ಅದು ಸಿಂಗಲ್ ಆಗಿದ್ರೂ ಅದೇ ಕಾಡಿನ ರಾಜ' ಎಂಬರ್ಥದ ಡೈಲಾಗ್ ಪೋಸ್ಟ್ ಮಾಡಿದ್ದಾರೆ. ಧನ್ವೀರ್ ಗೌಡ ಅವರ ಪೋಸ್ಟ್ ಈಗಾಗಲೇ ಹಚ್ಚಿರುವ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿಯುತ್ತದೆಯಾ? ಖಂಡಿತ ಎನ್ನುತ್ತಿವೆ ಸೋಷಿಯಲ್ ಮೀಡಿಯಾ ಸುದ್ದಿಗಳು. ಒಟ್ಟಿನಲ್ಲಿ, ನಟ ಸುದೀಪ್, ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಪೋಸ್ಟ್‌ಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೆಂಡಿಂಗ್‌ನಲ್ಲಿ ಇವೆ.. ಮುಂದೇನಾಗುತ್ತೆ ಅಂತ ಕಾದುನೋಡುವ ಪ್ರಮೇಯ ಮಾಧ್ಯಮಗಳು ಸೇರಿದಂತೇ ಇಡೀ ಕರ್ನಾಟಕ ಎದುರುನೋಡುವಂತಾಗಿದೆ.

