MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ನಟನೆಯಾಚೆಗೂ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡ ಸನ್ನಿ ಲಿಯೋನ್; ಇಲ್ಲಿದೆ ಕೋಟಿ ಕೋಟಿ ಆದಾಯದ ಮೂಲ

ನಟನೆಯಾಚೆಗೂ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡ ಸನ್ನಿ ಲಿಯೋನ್; ಇಲ್ಲಿದೆ ಕೋಟಿ ಕೋಟಿ ಆದಾಯದ ಮೂಲ

ನಟಿ ಸನ್ನಿ ಲಿಯೋನ್ ಓರ್ವ ಯಶಸ್ವಿ ಉದ್ಯಮಿಯೂ ಹೌದು. ವರದಿಗಳ ಪ್ರಕಾರ 98 ಕೋಟಿ ರೂ. ಸಂಪತ್ತಿನ ಒಡತಿಯಾಗಿರುವ ಇವರು, ಕಾಸ್ಮೆಟಿಕ್ ಬ್ರ್ಯಾಂಡ್, ಪ್ರೊಡಕ್ಷನ್ ಹೌಸ್, ಕ್ರೀಡಾ ತಂಡಗಳಲ್ಲಿ ಹೂಡಿಕೆ ಸೇರಿದಂತೆ ಹತ್ತು ಹಲವು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.

2 Min read
Author : Mahmad Rafik
Published : May 13 2026, 11:51 AM IST
Share this Photo Gallery
  • FB
  • TW
  • Linkdin
  • Whatsapp
18
ಸನ್ನಿ ಲಿಯೋನಿ
Image Credit : instagram

ಸನ್ನಿ ಲಿಯೋನಿ

ಸನ್ನಿ ಲಿಯೋನಿ ಭಾರತದ ಜನಪ್ರಿಯ ನಟಿಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾದ ಜಿಸ್ಮ್2 ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ಸನ್ನಿ ಲಿಯೋನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 13ನೇ ಮೇ 2026ರಂದು ಸನ್ನಿ ಲಿಯೋನ್ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Add Asianetnews Kannada as a Preferred SourcegooglePreferred
28
Business Women Sunny Leone
Image Credit : instagram

Business Women Sunny Leone

ನಟನೆ ಜೊತೆಯಲ್ಲಿ ಸನ್ನಿ ಲಿಯೋನ್ ಓರ್ವ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಲೈಲಾ ಸನ್ನಿ ಒಟ್ಟು 10 ವ್ಯವಹಾರಗಳನ್ನು ನಿರ್ವಹಣೆ ಮಾಡುತ್ತಾರೆ. ಇಕಾನಾಮಿಕ್ ಟೈಮ್ಸ್ ವರದಿ ಪ್ರಕಾರ, ಸನ್ನಿ ಲಿಯೋನ್ 98 ಕೋಟಿ ಸಂಪತ್ತಿನ ಒಡತಿಯಾಗಿದ್ದಾರೆ. ಸನ್ನಿ ಲಿಯೋನ್ ಅವರ ಆದಾಯದ ಮೂಲಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

Related Articles

Related image1
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!
Related image2
ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!
38
ವುಮನ್ ಪೋರ್ಟಲ್‌ನಲ್ಲಿ ಹೂಡಿಕೆ, ಚೆನ್ನೈ ಸ್ವಾಗರ್ಸ್ ಒಡತಿ
Image Credit : instagram

ವುಮನ್ ಪೋರ್ಟಲ್‌ನಲ್ಲಿ ಹೂಡಿಕೆ, ಚೆನ್ನೈ ಸ್ವಾಗರ್ಸ್ ಒಡತಿ

ಸನ್ನಿ ಲಿಯೋನ್ ರಿಯಾಲಿಟಿ ಶೋನ ನಿರೂಪಕಿಯಾಗಿದ್ದು, ಸೆಲಿಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್‌ ಟೀಮ್ (ಚೆನ್ನೈ ಸ್ವಾಗರ್ಸ್) ಒಡತಿಯಾಗಿದ್ದಾರೆ. ವುಮನ್ ಲೈಫ್‌ಸ್ಟೈಲ್ Hauterfly ಪೋರ್ಟಲ್‌ನಲ್ಲಿಯೂ ಸನ್ನಿ ಹೂಡಿಕೆ ಮಾಡಿದ್ದಾರೆ. ಈ ಎರಡರಿಂದಲೂ ಸನ್ನಿ ಅವರಿಗೆ ಆದಾಯ ಬರುತ್ತದೆ.

48
ಫ್ರೆಗರೆನ್ಸ್ ಬಿಜೆನೆಸ್, ಆನ್‌ಲೈನ್ ಗೇಮಿಂಗ್
Image Credit : instagram

ಫ್ರೆಗರೆನ್ಸ್ ಬಿಜೆನೆಸ್, ಆನ್‌ಲೈನ್ ಗೇಮಿಂಗ್

ಸನ್ನಿ ಲಿಯೋ ಫ್ರೆಗರೆನ್ಸ್ ಬ್ರ್ಯಾಂಡ್‌ಗಳಾದ ಲಸ್ಟ್ ಮತ್ತು ಎಫ್ಟೋಗೂ ಎಂಟ್ರಿ ಕೊಟ್ಟಿದ್ದಾರೆ. ಈ ಬ್ರ್ಯಾಂಡ್‌ಗಳು ಡಿಯೊಡೊರೆಂಟ್, ಬಾಡಿ ಮಿಸ್ಸ್ ಮತ್ತು ಪರ್ಪ್ಯೂಮ್ ಉತ್ಪಾದನೆ ಮಾಡುತ್ತವೆ. 2018ರಲ್ಲಿ 'ತೀನ್ ಪತ್ತಿ' ಹೆಸರಿನ ಆನ್‌ಲೈನ್ ಗೇಮ್ ಲಾಂಚ್ ಮಾಡಿದ್ದಾರೆ. ಇದು ಬಾಲಿವುಡ್ ಕಲ್ಪನೆಯಲ್ಲಿ ಆಟಕ್ಕೆ ಟೇಬಲ್ ವ್ಯವಸ್ಥೆ ಮಾಡಿಕೊಡುತ್ತದೆ.

58
ನಿರ್ಮಾಣ ಸಂಸ್ಥೆಯ ಓನರ್
Image Credit : instagram

ನಿರ್ಮಾಣ ಸಂಸ್ಥೆಯ ಓನರ್

ಪತಿ ಡೇನಿಯಲ್ ವೆಬರ್ ಜೊತೆಗೂಡಿ ಸನ್‌ಸಿಟಿ ಮೀಡಿಯಾ ಅಂಡ್ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. 2015ರಲ್ಲಿ ನಿರ್ಮಾಪಕಿಯಾದ ಸನ್ನಿ ಲಿಯೋನ್, ಟ್ಯಾಲೆಂಟ್‌ ಮ್ಯಾನೇಜ್ಮೆಂಟ್ ಜೊತೆ ಈ ಬ್ಯುಸಿನೆಸ್ ಆರಂಭಿಸಿದರು.

68
ಕಾಸ್ಮೆಟಿಕ್ ಬ್ರ್ಯಾಂಡ್, ಇನ್ನರ್‌ವಿಯರ್ ಲಾಂಚ್
Image Credit : Asianet News

ಕಾಸ್ಮೆಟಿಕ್ ಬ್ರ್ಯಾಂಡ್, ಇನ್ನರ್‌ವಿಯರ್ ಲಾಂಚ್

ನಟಿ ಸನ್ನಿ ಲಿಯೋನ್ ಹಲವು ಕಾಸ್ಮೆಟಿಕ್ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಇದರ ಜೊತೆಯುಲ್ಲಿ ತಮ್ಮದೇ ಸ್ವಂತ 'ಸ್ಟಾರ್ ಸ್ಟ್ರಕ್' ಹೆಸರಿನ ಕಾಸ್ಮೆಟಿಕ್ ಹೊಂದಿದ್ದು, ಇದರಿಂದ ಕೋಟಿ ಕೋಟಿ ಸಂಪದಾನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಪತಿ ವೆಬರ್ ಜೊತೆ 'ಇನ್‌ಫೇಮಸ್' ಹೆಸರಿನ ಇನ್ನರ್ ವಿಯರ್ ಲಾಂಚ್ ಮಾಡಿದ್ದಾರೆ.

78
ಸಾಕರ್ ತಂಡದ ಸಹ-ಯಜಮಾನಿ, NFTನಿಂದ ಆದಾಯ
Image Credit : pinterest

ಸಾಕರ್ ತಂಡದ ಸಹ-ಯಜಮಾನಿ, NFTನಿಂದ ಆದಾಯ

ಸನ್ನಿ ಲಿಯೋನ್ ಯುಕೆ ಮೂಲದ ಸಾಕರ್ ತಂಡವಾದ ಲೀಸೆಸ್ಟರ್ ಗ್ಯಾಲಕ್ಟಿಕೋಸ್‌ನ ಸಹ-ಯಜಮಾನಿ ಆಗಿದ್ದಾರೆ. 2019 ರಲ್ಲಿ ಸಾಕರ್ ತಂಡದಲ್ಲಿ ಪಾಲುದಾರಿಕೆ ಪಡೆದುಕೊಂಡಿದ್ದಾರೆ. ಸನ್ನಿ ಲಿಯೋನ್ 2021 ರಲ್ಲಿ ಡಿಜಿಟಲ್ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ತನ್ನದೇ ಆದ NFT ಗಳನ್ನು ಪ್ರಾರಂಭಿಸಿದ್ದಾರೆ. ಇ-ಪ್ಲಾಟ್‌ಫಾರ್ಮ್ "ಐ ಡ್ರೀಮ್ ಆಫ್ ಸನ್ನಿ" ಸಹ ಆರಂಭಿಸಿದ್ದಾರೆ.

ಇದನ್ನೂ ಓದಿ: ಸನ್ನಿ ಲಿಯೋನ್‌ ಮನೆ ಅಲ್ಲ, ಪ್ಯಾಲೆಸ್! ಒಳಗೆ ಏನಿದೆ ಗೊತ್ತಾ?

88
ಸೋಶಿಯಲ್ ಮೀಡಿಯಾ ಖಾತೆ
Image Credit : instagram

ಸೋಶಿಯಲ್ ಮೀಡಿಯಾ ಖಾತೆ

ಇದೆಲ್ಲದರ ಜೊತೆಯಲ್ಲಿ ಸೋಶಿಯಲ್‌ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿಯೂ ಸನ್ನಿ ಲಿಯೋನ್ ಆಕ್ಟಿವ್ ಆಗಿದ್ದಾರೆ. ಪ್ರಮೋಷನ್, ಜಾಹೀರಾತಿನ ವಿಜ್ಞಾಪನೆ, ಬ್ರ್ಯಾಂಡ್ ಲಾಂಚಿಂಗ್ ಸೇರಿದಂತೆ ಹಲವು ಮಾರ್ಗಗಳಿಂದ ಸನ್ನಿ ಲಿಯೋನ್ ಆದಾಯ ಸಂಪಾದಿಸುತ್ತಾರೆ.

ಇದನ್ನೂ ಓದಿ: ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸನ್ನಿ ಲಿಯೋನ್
ಬಾಲಿವುಡ್
ಮನರಂಜನಾ ಸುದ್ದಿ
ನಟಿ

Latest Videos
Recommended Stories
Recommended image1
Amruthadhaare ದಿಯಾ ಬೇಬಿ ರಿಯಲ್​ ಮದ್ವೆ ನಾಳೆನೇ: ಎಲ್ಲಿ, ಎತ್ತ? ಆಮಂತ್ರಣ ಪತ್ರಿಕೆ ವೈರಲ್​
Recommended image2
'ಮೋದಿಯವರನ್ನು ನೋಡಿದ್ದೇನೆ' ಎಂದ ನಟ-ಸಾಹಿತಿ ತನಿಕೇಳ್ಳ ಭರಣಿ, ರಾಮ, ಕೃಷ್ಣರ ಬಗ್ಗೆ ಹೇಳಿದ್ದೇನು?
Recommended image3
Dileep Raj Death: ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ!: ಸುಷ್ಮಾ ಭಾರದ್ವಾಜ್
Related Stories
Recommended image1
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!
Recommended image2
ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved