- Home
- Entertainment
- Nivedita Gowda: ಅದೂ ಇದೂ ನೋಡ್ಬೇಡಿ... ನ್ಯೂಯಾರ್ಕ್ನಲ್ಲಿ ನನ್ನ ಕನ್ನಡ ಪ್ರೇಮನೂ ನೋಡಿ ಸ್ವಲ್ಪ!
Nivedita Gowda: ಅದೂ ಇದೂ ನೋಡ್ಬೇಡಿ... ನ್ಯೂಯಾರ್ಕ್ನಲ್ಲಿ ನನ್ನ ಕನ್ನಡ ಪ್ರೇಮನೂ ನೋಡಿ ಸ್ವಲ್ಪ!
ನ್ಯೂಯಾರ್ಕ್ ಬೀದಿಯಲ್ಲಿ ರೀಲ್ಸ್ ಮಾಡಿರೋ ಬಿಗ್ಬಾಸ್ ನಿವೇದಿತಾ ಗೌಡ, ಅಲ್ಲಿ ಕನ್ನಡದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೇಗಿದೆ ನೋಡಿ ಇದು?

ಎಲ್ಲರ ಹುಬ್ಬೇರಿಸೋ ನಟಿ
ನಿವೇದಿತಾ ಗೌಡ ದಿನಕ್ಕೊಂದರಂತೆ ವಿಡಿಯೋ ಹಾಕಿ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಈಕೆ ತೊಡುವ ಡ್ರೆಸ್ಗಳು ದಿನದಿಂದ ದಿನಕ್ಕೆ ಚಿಕ್ಕದಾಗುತ್ತಾ ಬಂದಿರುವ ಕಾರಣ ಇನ್ನಿಲ್ಲದಂತೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ಈಕೆಯ ಜೊತೆ ಯಾರೇ ಕಾಣಿಸಿಕೊಂಡರೂ ಅವರ ಜೊತೆ ನಟಿಗೆ ಲಿಂಕ್ ಮಾಡುವ ಪರಿಪಾಠವೂ ಹೆಚ್ಚಾಗಿದೆ. ಯಾರೇ ಕೆಟ್ಟ ಕಮೆಂಟ್ ಮಾಡಲಿ, ಏನೇ ಹೇಳಲಿ ಅವುಗಳಿಗೆ ನಿವೇದಿತಾ ಡೋಂಟ್ ಕೇರ್. ಇದೀಗ ಲಂಡನ್, ಅಮೆರಿಕ ಎಂದೆಲ್ಲಾ ಫಾರಿನ್ ಟೂರ್ ಮಾಡುತ್ತಿದ್ದಾರೆ.
ರೀಲ್ಸ್ಗೆ ನೆಗೆಟಿವ್ ಕಮೆಂಟ್ಸ್
ಅಷ್ಟಕ್ಕೂ ಚಂದನ್ ಶೆಟ್ಟಿ ಅವರ ಜೊತೆಗೆ ಇರುವಾಗಲೂ ನಿವೇದಿತಾ ರೀಲ್ಸ್ ಮಾಡುತ್ತಿರಲಿಲ್ಲ ಎಂದೇನಲ್ಲ. ಆದರೆ ಡಿವೋರ್ಸ್ ಆದ್ಮೇಲೆ ರೀಲ್ಸ್ ಹೆಚ್ಚಾಗಿದೆ. ನೀವು ಮುಖ ತೋರಿಸಲು ರೀಲ್ಸ್ ಮಾಡ್ತಿರೋ, ಇನ್ನೇನು ತೋರಿಸಲೋ ಎನ್ನುವಷ್ಟರ ಮಟ್ಟಿಗೆ ಈಕೆಯ ರೀಲ್ಸ್ ಕೆಟ್ಟ ಕಮೆಂಟುಗಳಿಂದಲೇ ಈಗಲೂ ತುಂಬಿ ಹೋಗುವುದೇ ಇದೆ.
ಹೊಸ ವರ್ಷದಲ್ಲಿ ವಿದೇಶದಲ್ಲಿ ಎಂಜಾಯ್
ಈ ಬಾರಿಯ ಹೊಸ ವರ್ಷದಲ್ಲಿ ವಿದೇಶಗಳಲ್ಲಿ ಸಕತ್ ಎಂಜಾಯ್ ಮಾಡಿದ್ದರು. ನ್ಯೂಯಾರ್ಕ್ನಲ್ಲಿ ಯುವಕನ ಜೊತೆ ಆಕಾಶಬುಟ್ಟಿ ಬಿಡುವ ವಿಡಿಯೋ ಶೇರ್ ಮಾಡಿಕೊಂಡಿದ್ದ ನಿವೇದಿತಾ, ಕೊನೆಗೆ ಲಂಡನ್ನ ವಿಡಿಯೋ ಶೇರ್ ಮಾಡಿಕೊಂಡಿದ್ದರು.
ತುಂಡುಡುಗೆಯಲ್ಲಿ ನ್ಯೂಯಾರ್ಕ್ನಲ್ಲಿ ನಿವೇದಿತಾ
ಇದೀಗ ಮತ್ತೆ ಮಾಮೂಲಿನಂತೆಯೇ ತುಂಡುಡುಗೆಯಲ್ಲಿಯೇ ನ್ಯೂಯಾರ್ಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಲ ಮಾತ್ರ ಯಾಕೋ ಅವರ ಅಭಿಮಾನಿಗಳು, ನಟಿಯ ಮೇಲೆ ಭಾರಿ ಒಲವು ತೋರಿದಂತಿದೆ. ಅದಕ್ಕೆ ಕಾರಣ, ನ್ಯೂಯಾರ್ಕ್ ಬೀದಿಯಲ್ಲಿ ಅವರು ಕನ್ನಡದ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಕನ್ನಡದಲ್ಲಿ ನಟಿ ಡಾನ್ಸ್
ಅಷ್ಟಕ್ಕೂ ಇಂದಿನ ಹಲವು ಕನ್ನಡ ಹಾಡುಗಳು ಅದು ಕನ್ನಡ ಎಂದು ತಿಳಿಯಬೇಕಿದ್ದರೆ ಹಲವರು ಕಷ್ಟಪಡುವ ಸ್ಥಿತಿ ಇದೆ ಅನ್ನಿ. ಕನ್ನಡದಲ್ಲಿಯೂ rampಗಳು ಜಾಸ್ತಿಯಾಗಿದ್ದರಿಂದ ಅದು ಯಾವ ಭಾಷೆ ಎಂದು ತಿಳಿಯುವುದಕ್ಕೆ ಹಳಬರಿಗೆ ಸ್ವಲ್ಪ ಕಷ್ಟನೇ ಆಗುತ್ತದೆ. ಆದರೆ ನಿವೇದಿತಾ ಮಾತ್ರ ವಿದೇಶದಲ್ಲಿಯೂ ಕನ್ನಡದ ಹಾಡನ್ನು ಸಂಭ್ರಮಿಸಿ, ಅಲ್ಲಿದ್ದವರನ್ನೂ ಕುಣಿಸಿದ್ದರಿಂದ ಕನ್ನಡಿಗರು ಖುಷಿ ಪಟ್ಟುಕೊಂಡಿದ್ದಾರೆ.
ಹೊಸ ವರ್ಷದಲ್ಲೂ ವಿದೇಶದಲ್ಲಿ ನಟಿ
ಹೊಸ ವರ್ಷದ ಸಂದರ್ಭದಲ್ಲಿ ನ್ಯೂಯಾರ್ಕ್ನಲ್ಲೇ ಇದ್ದ ನಟಿ ಅಲ್ಲಿಯ ವಿಡಿಯೋ ಶೇರ್ ಮಾಡಿ, ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್ ಮಾಡಿದ್ದರು. ಕ್ರಿಸ್ಮಸ್ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡಿದ್ದರು. ಸಾಲದು ಎನ್ನುವುದಕ್ಕೆ ಈ ಹೊಸ ಹುಡುಗ ಯಾರು ಎನ್ನುವ ಬಗ್ಗೆ ಇನ್ನೂ ತಡಕಾಟ ನಡೆಸಿದ್ದರು. ಇದೀಗ ಕನ್ನಡದ ಪ್ರೇಮಕ್ಕೆ ಸಲಾಂ ಎಂದಿದ್ದಾರೆ.