- Home
- Entertainment
- Bigg Boss ಫ್ಯಾನ್ಸ್ಗೆ ಒಳ್ಳೆ ಆಫರ್: ಹೋಲ್ಡ್ ಮಾಡಿ ಸ್ಕ್ರಾಲ್ ಮಾಡಿ- ಏನು ಕಾಣಿಸ್ತು ಹೇಳಿ....
Bigg Boss ಫ್ಯಾನ್ಸ್ಗೆ ಒಳ್ಳೆ ಆಫರ್: ಹೋಲ್ಡ್ ಮಾಡಿ ಸ್ಕ್ರಾಲ್ ಮಾಡಿ- ಏನು ಕಾಣಿಸ್ತು ಹೇಳಿ....
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಆರಂಭವಾಗಲಿದೆ. ಈ ಸೀಸನ್‌ಗಾಗಿ ವಜ್ರ ಖಚಿತವಾದ ಹೊಸ ಲೋಗೋವನ್ನು ಅನಾವರಣಗೊಳಿಸಲಾಗಿದ್ದು, ಹೋಲ್ಡ್ ಮಾಡಿ ಸ್ಕ್ರಾಲ್ ಮಾಡಿ ಎನ್ನಲಾಗಿದೆ. ಏನಿದು ನೋಡಿ…

ಇದೇ 28ರಿಂದ Bigg Boss ಆರಂಭ
ಬಿಗ್ಬಾಸ್ ಕನ್ನಡದ ಸೀಸನ್ 12ಕ್ಕೆ ((Bigg Boss Kannada Season 12)) ಇದೇ 28ರಿಂದ ಆರಂಭವಾಗಲಿದೆ. ಬಿಗ್ಬಾಸ್ ಮನೆಯೊಳಕ್ಕೆ ಹೋಗುವವರು ಯಾರು ಎನ್ನುವುದು ವೀಕ್ಷಕರಿಗೆ ತಿಳಿಯಬೇಕಿದೆಯಷ್ಟೇ. ಅಷ್ಟಕ್ಕೂ ಇದಾಗಲೇ ಸ್ಪರ್ಧಿಗಳು ಕೂಡ ಅಂತಿಮಗೊಂಡಿದ್ದು, ಎಲ್ಲರ ಹೆಸರುಗಳೂ ರಿವೀಲ್ ಆಗಿಲ್ಲ. ಅಂತೆ-ಕಂತೆ ಅಡಿ ಕೆಲವರ ಹೆಸರು ರಿವೀಲ್ ಆಗಿವೆ ಅಷ್ಟೇ. ಆದ್ದರಿಂದ ಯಾರು ಮನೆಯೊಳಕ್ಕೆ ಹೋಗುತ್ತಾರೆ ಎಂದು ನೋಡಲು 28ರ ವರೆಗೆ ಕಾಯಲೇಬೇಕಿದೆ.
ಮುಗಿದ ಸೀರಿಯಲ್ಗಳು
ಇದಾಗಲೇ ಕಲರ್ಸ್ ಕನ್ನಡ ವಾಹಿನಿ (Colors Kannada) ಹಲವಾರು ಪ್ರೊಮೋಗಳನ್ನು ರಿಲೀಸ್ ಮಾಡುತ್ತಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ. ಗ್ರ್ಯಾಂಡ್ ಓಪನಿಂಗ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡದ ಕೆಲವು ಸೀರಿಯಲ್ಗಳನ್ನು ಮುಕ್ತಾಯಗೊಳಿಸಲಾಗಿದೆ. ಕೆಲವು ಸೀರಿಯಲ್ಗಳ ಟೈಮ್ ಬದಲಾದರೆ, ಮತ್ತೆ ಕೆಲವನ್ನು 1 ಗಂಟೆ ಪ್ರಸಾರ ಮಾಡಿ ಮುಗಿಸಲಾಗುತ್ತಿದೆ.
ಸಂಭಾವನೀಯ ಲಿಸ್ಟ್
ಇದರ ನಡುವೆಯೇ, ಕೆಲವರ ಹೆಸರು ಮುನ್ನೆಲೆಗೆ ಬಂದಿದೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನಾ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್, ಅಮೃಟಾ ರಾಮಾಮೂರ್ತಿ, ಸಿಂಗರ್ ಸುನಿಲ್, ಬಾಲು ಬೆಳಗುಂಡಿ, ತೇಜಸ್ ಗೌಡ, ಆಶ್ ಮೆಲ್ಲೋ, ದಿವ್ಯಾ ವಸಂತ್, ಗೀತಾ ಎಂದು ಹೇಳಲಾಗುತ್ತಿದೆ. ಈ ಲಿಸ್ಟ್ ಬದಲಾಗುತ್ತಲೇ ಇದೆ.
ಅಸಲಿಯತ್ತು ತಿಳಿಯಬೇಕಿದೆ
ಅದೇನೇ ಇದ್ದರೂ ಒಳಗೆ ನಿಜವಾಗಿಯೂ ಹೋಗ್ತಾ ಇರುವವರು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದೀಗ ಕಲರ್ಸ್ ಕನ್ನಡ ಇನ್ನೊಂದು ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್ ಬಾಸ್ 12ರ ಲೋಗೋ ನಿಮ್ಮ ಕೈಯಲ್ಲಿ.. ಹೋಲ್ಡ್ ಮಾಡಿ ಸ್ಕ್ರಾಲ್ ಮಾಡಿ ಎಂದು ಕ್ಯಾಪ್ಷನ್ ನೀಡಲಾಗಿದೆ. ಅಷ್ಟಕ್ಕೂ ಇದೆ ಈ ಬಾರಿಯ ಲೋಗೋ.
ಪ್ರತಿ ಸೀಸನ್ನಲ್ಲಿಯೂ ಬದಲು
ಬಿಗ್ಬಾಸ್ ಹಲವಾರು ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಪ್ರತಿ ಭಾಷೆಯಲ್ಲಿಯೂ ಪ್ರತಿ ಸೀಸನ್ನಲ್ಲಿಯೂ ವಿಭಿನ್ನ ರೀತಿಯ ಲೋಗೋ ಕಾಣಿಸುತ್ತದೆ. ಆ ವರ್ಷದ ಥೀಮ್ಗೆ ತಕ್ಕಂತೆ ಅದರ ಲೋಗೋ ಬದಲಾಗುತ್ತದೆ. ಅದೇ ರೀತಿ ಇದೀಗ ಕನ್ನಡದ 12ನೇ ಸೀಸನ್ನ ಲೋಗೋ ಪ್ರದರ್ಶಿಸಲಾಗಿದೆ. ಇದನ್ನು scroll ಮಾಡುತ್ತಾ ಹೋಗಿ ಎಂದು ವಾಹಿನಿ ಹೇಳಿದೆ. ಹಾಗಿದ್ದರೆ ನಿಮಗೆ ಏನು ಕಾಣಿಸ್ತು?
ಕಣ್ಣಿನಲ್ಲಿದೆ 12
ಅಷ್ಟಕ್ಕೂ ಈ ಬಿಗ್ಬಾಸ್ ಕಣ್ಣಿನಲ್ಲಿ 12 ಎಂದು ಕನ್ನಡದ ಸಂಖ್ಯೆಯಲ್ಲಿ ಬರೆದಿರುವುದನ್ನು ನೋಡಬಹುದಾಗಿದೆ. ಬಿಗ್ಬಾಸ್ 12ರ ಸಂಕೇತವದು. ಈ ಲೋಗೋ ನೋಡಿಯೇ ನೆಟ್ಟಿಗರು ಉತ್ಸುಕರಾಗಿದ್ದಾರೆ. ಯಾವಾಗ ಷೋ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ.
ವಜ್ರ ಖಚಿತ ಕಣ್ಣು
ಅಷ್ಟೇ ಅಲ್ಲದೇ ಇದಾಗಲೇ ನೋಡಿರುವಂತೆ ಈ ಬಾರಿಯ ಬಿಗ್ಬಾಸ್ ಕಣ್ಣು ವಜ್ರ ಖಚಿತವಾಗಿದೆ. ಸುಂದರವಾಗಿ ಕಾಣಿಸುತ್ತದೆ. ಹೊಳೆಯುತ್ತಿದೆ. ಅದರಲ್ಲಿಯೂ 12 ಎಂದು ನೋಡಬಹುದು. ಕೆಳಗಿನ ಲಿಂಕ್ ಓಪನ್ ಮಾಡಿದ್ರೆ ಅದು ನಿಮಗೆ ಕಾಣಿಸಲಿದೆ…