MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?

ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಇಬ್ಬರೂ ಅಧಿಕೃತವಾಗಿ ಒಂದಾಗುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಮತ್ತು ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಜೋಡಿಯ ವಯಸ್ಸಿನ ವ್ಯತ್ಯಾಸ ಎಷ್ಟು? 

2 Min read
Author : Padmashree Bhat
Published : Feb 24 2026, 08:55 AM IST
Share this Photo Gallery
  • FB
  • TW
  • Linkdin
  • Whatsapp
15
 'ದಿ ವೆಡ್ಡಿಂಗ್ ಆಫ್ ವಿರೋಶ್'
Image Credit : instagram

'ದಿ ವೆಡ್ಡಿಂಗ್ ಆಫ್ ವಿರೋಶ್'

ಟಾಲಿವುಡ್‌ನ ಈ ಪ್ರೇಮ ಪಕ್ಷಿಗಳು ತಮ್ಮ ಮದುವೆಯ ಬಗ್ಗೆ ಇದ್ದ ಸಸ್ಪೆನ್ಸ್‌ಗೆ ತೆರೆ ಎಳೆದಿದ್ದಾರೆ. ಹಲವು ವರ್ಷಗಳಿಂದ ರಹಸ್ಯವಾಗಿ ಪ್ರೀತಿಸುತ್ತಿದ್ದ ಈ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಭಿಮಾನಿಗಳಿಗಾಗಿ ತಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ 'ವಿರೋಶ್' (Virosh) ಹೆಸರಿನಲ್ಲಿ ಮದುವೆ ಆಯೋಜಿಸುತ್ತಿರುವುದಾಗಿ ಘೋಷಿಸಿದ್ದಾರೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

25
ಇಬ್ಬರ ವಯಸ್ಸಿನ ಅಂತರ
Image Credit : instagram

ಇಬ್ಬರ ವಯಸ್ಸಿನ ಅಂತರ

ಮದುವೆ ಘೋಷಣೆ ಬೆನ್ನಲ್ಲೇ, ಇಬ್ಬರ ವಯಸ್ಸಿನ ಅಂತರ ಹಾಟ್ ಟಾಪಿಕ್ ಆಗಿದೆ. ಇಂಟರ್‌ನೆಟ್ ಮಾಹಿತಿ ಪ್ರಕಾರ, ವಿಜಯ್ ದೇವರಕೊಂಡ 1989ರ ಮೇ 9ರಂದು ಜನಿಸಿದ್ದು, ಅವರಿಗೆ 36 ವರ್ಷ. ರಶ್ಮಿಕಾ ಮಂದಣ್ಣ 1996ರ ಏಪ್ರಿಲ್ 5ರಂದು ಹುಟ್ಟಿದ್ದು, ಅವರಿಗೆ 29 ವರ್ಷ. ಇಬ್ಬರ ನಡುವೆ ಸುಮಾರು 7 ವರ್ಷಗಳ ವಯಸ್ಸಿನ ಅಂತರವಿದೆ. ಆದರೂ, ನೋಡಲು ಅಷ್ಟು ವ್ಯತ್ಯಾಸ ಕಾಣಿಸುವುದಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Related Articles

Related image1
ಡಯಟ್ ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!
Related image2
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ: ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?
35
ಎಲ್ಲಿ ಮದುವೆ ಆಗಲಿದೆ?
Image Credit : stockPhoto

ಎಲ್ಲಿ ಮದುವೆ ಆಗಲಿದೆ?

ವಿಜಯ್ ಮತ್ತು ರಶ್ಮಿಕಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಫೆಬ್ರವರಿ 26ರಂದು ಅಲ್ಲಿನ ಒಂದು ಐತಿಹಾಸಿಕ ಅರಮನೆಯಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ. ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮದುವೆಯ ಒಂದೇ ಒಂದು ಫೋಟೋ ಹೊರಗೆ ಬರದಂತೆ ನೋಡಿಕೊಳ್ಳಲು ವಿಜಯ್ ಅಂತರಾಷ್ಟ್ರೀಯ ಭದ್ರತೆಯನ್ನು ನೇಮಿಸಿದ್ದಾರೆ ಎನ್ನಲಾಗಿದೆ. ಸಂಬಂಧಿಕರಿಗೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

45
ಯಾರು ಭಾಗವಹಿಸುತ್ತಾರೆ?
Image Credit : instagram

ಯಾರು ಭಾಗವಹಿಸುತ್ತಾರೆ?

ಫೆಬ್ರವರಿ 24ರಂದು ಹಳದಿ ಶಾಸ್ತ್ರದೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ. ಫೆಬ್ರವರಿ 25ರಂದು ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ. ಫೆಬ್ರವರಿ 26ರಂದು ಅರಮನೆಯಲ್ಲಿ ವಿವಾಹ ನಡೆಯಲಿದೆ. ನಂತರ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದವರಿಗಾಗಿ ಭಾರಿ ರಿಸೆಪ್ಷನ್ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ಗಣ್ಯರು ಹಾಗೂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ.

55
ಲವ್‌ ಬಗ್ಗೆ ಮಾತಾಡಿರಲಿಲ್ಲ
Image Credit : instagram

ಲವ್‌ ಬಗ್ಗೆ ಮಾತಾಡಿರಲಿಲ್ಲ

ವಿಜಯ್ ಮತ್ತು ರಶ್ಮಿಕಾ ಪರಿಚಯ 'ಗೀತ ಗೋವಿಂದಂ' ಚಿತ್ರದಿಂದ ಶುರುವಾಯಿತು. ನಂತರ 'ಡಿಯರ್ ಕಾಮ್ರೇಡ್' ಸಿನಿಮಾ ಸಮಯದಲ್ಲಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು ಎಂದು ಹೇಳಲಾಗುತ್ತದೆ. ಈ ಚಿತ್ರದ ಲಿಪ್‌ಲಾಕ್ ದೃಶ್ಯದ ನಂತರ ಇಬ್ಬರ ನಡುವೆ ಏನೋ ಇದೆ ಎಂಬ ಮಾತುಗಳು ಶುರುವಾಗಿದ್ದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ತುಟಿ ಬಿಚ್ಚಿರಲಿಲ್ಲ. ಆದರೂ, ವೆಕೇಷನ್ ಫೋಟೋಗಳ ಮೂಲಕ ಆಗಾಗ ಸಿಕ್ಕಿಬೀಳುತ್ತಿದ್ದರು. ಈಗ ಮದುವೆ ಘೋಷಣೆಯೊಂದಿಗೆ ಎಲ್ಲವೂ ನಿಜವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಸೆಲೆಬ್ರಿಟಿಗಳು

Latest Videos
Recommended Stories
Recommended image1
ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview
Recommended image2
ಸ್ಟಾರ್‌ ಹೀರೋಗಳ ಜೊತೆ ನಟಿಸಿ, UK ಕಂಪೆನಿಗೆ ಡೈರೆಕ್ಟರ್‌ ಆದ ನಟ ದರ್ಶನ್‌ ಸಿನಿಮಾ ಹೀರೋಯಿನ್!‌ ಯಾರದು?
Recommended image3
'ಗಂಡು ಮಗು ಹುಟ್ಟಿದೆ' ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು
Related Stories
Recommended image1
ಡಯಟ್ ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!
Recommended image2
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ: ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved