MLA, MPಯಾಗಲು Bigg Boss ಜಾಹ್ನವಿ ಸಿದ್ಧತೆ ಹೇಗೆ ನಡೀತಿದೆ? ನಟಿ ಓಪನ್ ಮಾತು
ಬಿಗ್ಬಾಸ್ ಖ್ಯಾತಿಯ ನಟಿ ಜಾಹ್ನವಿ, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.

ಬಿಗ್ಬಾಸ್ ಖ್ಯಾತಿಯ ಜಾಹ್ನವಿ
ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್ಬಾಸ್ 12ಕ್ಕೆ ಹೋಗಿ ಬಂದ ಮೇಲೆ ಬಿಗ್ಬಾಸ್ ಜಾಹ್ನವಿಯಾಗಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್ಗಳೂ ಬರುತ್ತಿವೆ.

ಜಾಹ್ನವಿ ಈಗ ರಾಜಕಾರಣಿ
ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ಈಚೆಗಷ್ಟೇ ಅವರು ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. ಎಚ್ಜಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ
ಇದೀಗ ಅವರಿಗೆ ದೊಡ್ಡ ಹುದ್ದೆ ಏರುವ ಆಸೆನಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಹ್ನವಿ ಅವರು, ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಯುತ್ತಿದೆ. ಆಗಸ್ಟ್ 31ರ ಒಳಗೆ ಮಾಡುವಂತೆ ಸುಪ್ರೀಂಕೋರ್ಟ್ ಕೂಡ ಹೇಳಿದೆ. ನಾನು ಪವರ್ ಆಕಾಂಕ್ಷಿ ಅಲ್ಲ ಅಂತ ಖಂಡಿತ ಹೇಳುವುದಿಲ್ಲ ಎನ್ನುತ್ತಲೇ ಇದರಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಜಾಹ್ನವಿ.
ಅವರ ಹೇಳಿಕೆಗೆ ಬದ್ಧ
ಪವರ್ ಇದ್ದರೆ ಜನರ ಸೇವೆ ಮಾಡಬಹುದು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಗಲೀ, ಎಂಎಲ್ಎ, ಎಂಪಿ ಯಾವುದಕ್ಕೇ ಆದರೂ ಪಕ್ಷ ನೀವು ನಿಂತುಕೊಳ್ಳಿ ಎಂದರೆ ಹೇಳಿದರೆ ನಾನು ಅದಕ್ಕೆ ಸಿದ್ಧ ಇದ್ದೇನೆ. ಇದಾಗಲೇ ನನ್ನ ಇಂಗಿತವನ್ನು ವ್ಯಕ್ತಪಡಿಸಿದ್ದೇನೆ. ಪಕ್ಷದ ಧುರೀಣರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದು ನಟಿ ಹೇಳಿದ್ದಾರೆ.
ಡ್ರೆಸ್ ಸೆನ್ಸ್
ಅಷ್ಟಕ್ಕೂ ಜಾಹ್ನವಿ ಡ್ರೆಸ್ ಸೆನ್ಸ್ಗೆ ಸಕತ್ ಫೇಮಸ್ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಜಗಳದಿಂದ ಫೇಮಸ್
ಅಂದಹಾಗೆ ಜಾಹ್ನವಿ ಅವರು ಬಿಗ್ಬಾಸ್ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್ ಆಗಿದ್ದರು. ಒಂದು ಸ್ಪರ್ಧೆ ಎಂದು ಬಂದಾಗ ಎಲ್ಲವೂ ಅನಿವಾರ್ಯ ಆಗುವ ಕಾರಣದಿಂದ ಅವರು, ಸಹಜವಾಗಿ ಜಗಳ ಮಾಡಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

