MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Karna Serial ಭವ್ಯಾ ಗೌಡರ ಹೊಸ ಹೀರೋ ಚೇತನ್​ ಗೌಡ ಯಾರು? 90 ಹಸುಗಳ ಒಡೆಯನ ಸ್ಟೋರಿ ಇದು

Karna Serial ಭವ್ಯಾ ಗೌಡರ ಹೊಸ ಹೀರೋ ಚೇತನ್​ ಗೌಡ ಯಾರು? 90 ಹಸುಗಳ ಒಡೆಯನ ಸ್ಟೋರಿ ಇದು

ಕರ್ಣ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ 'ದೇವಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದು, ಬಣ್ಣದ ಲೋಕ ಪ್ರವೇಶಿಸಲು ಅವರು ಪಟ್ಟ ಶ್ರಮ ಮತ್ತು ಅನುಭವಿಸಿದ ಮೋಸಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

2 Min read
Author : Suchethana D
Published : Jul 13 2026, 08:08 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಯಾಂಡಲ್​ವುಡ್​ಗೆ ಭವ್ಯಾ ಗೌಡ
Image Credit : Social Media

ಸ್ಯಾಂಡಲ್​ವುಡ್​ಗೆ ಭವ್ಯಾ ಗೌಡ

ಕರ್ಣ ಸೀರಿಯಲ್​ (Karna Serial) ನಿಧಿಯಾಗಿ ಎಲ್ಲರ ಮೆಚ್ಚುಗೆ ಗಳಿಸ್ತಿರೋ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ ಇದಾಗಲೇ ಫ್ಲವರ್​ ಬಿಜಿನೆಸ್​ ಶುರು ಮಾಡಿದ್ದಾರೆ. ಇದರ ನಡುವೆಯೇ ಇದೀಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಭವಿಷ್ಯ ರೂಪಿಸಿಕೊಳ್ಳಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಭವ್ಯಾ ಗೌಡ ಅವರು ದೇವಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ. ಯುವ ರೈತ ಚೇತನ್‌ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ತಿದ್ದರೆ. ಭವ್ಯಾ ಗೌಡ ಹಾಗೂ ಚೇತನ್‌ ಗೌಡ ಅವರ ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾಯಕನಾದ ಚೇತನ್​ ಗೌಡ ಯಾರು?
Image Credit : Social Media

ನಾಯಕನಾದ ಚೇತನ್​ ಗೌಡ ಯಾರು?

ಭವ್ಯಾ ಗೌಡ (Bhavya Gowda) ಅವರ ಪರಿಚಯ ಹಲವರಿಗೆ ಇದೆ. ಆದರೆ ಇದೀಗ ಚೇತನ್​ ಗೌಡ ಯಾರು ಎನ್ನುವ ಕುತೂಹಲ ಸಿನಿ ಪ್ರಿಯರನ್ನು ಕೆರಳಿಸುತ್ತಿದೆ. ಅಷ್ಟಕ್ಕೂ ಚೇತನ್​ ಗೌಡ ಅವರು ರೈತರು. 70 ಹಸು, 20 ಕರು, ಎಮ್ಮೆ, 15 ನಾಯಿ ಸೇರಿದಂತೆ ಟ್ರ್ಯಾಕ್ಟರ್‌, ಜೆಸಿಬಿ, ಟಿಪ್ಪರ್‌ ಎಲ್ಲಾ ಗಾಡಿಗಳನ್ನು ಇಟ್ಟುಕೊಂಡು ವ್ಯವಸಾಯ ಮಾಡ್ತಿರೋ ಚೇತನ್​ ಗೌಡ ಅವರು ಇದೀಗ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Related Articles

Related image1
'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ
Related image2
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
36
ಜರ್ನಿ ಬಗ್ಗೆ ನಟ
Image Credit : Social Media

ಜರ್ನಿ ಬಗ್ಗೆ ನಟ

ದೇವಿ ಸಿನಿಮಾದ ಲಾಂಚ್​ ವೇಳೆ ತಮ್ಮ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ ಚೇತನ್​ ಗೌಡ. ರೈತನೊಬ್ಬ ಸಿನಿಮಾಕ್ಕೆ ಎಂಟ್ರಿ ಕೊಡಬೇಕಾದ ಪಟ್ಟ ಶ್ರಮಗಳ ಬಗ್ಗೆ, ಹಲವು ನಿರ್ದೇಶಕರಿಂದ ತಮಗೆ ಆಗಿರುವ ಮೋಸ, ಅನ್ಯಾಯ ಕುರಿತಾದ ನೋವನ್ನೂ ಇದೇ ವೇಳೆ ಹೇಳಿಕೊಂಡಿದ್ದಾರೆ.

46
ಮಂಡ್ಯದ ಗಂಡು
Image Credit : sstv_media Instagram

ಮಂಡ್ಯದ ಗಂಡು

ಮಂಡ್ಯದ ಚೇತನ್​ ಅವರು, 17 ವರ್ಷದ ಹಿಂದೆ ಬಣ್ಣದ ಲೋಕದ ಕನಸನ್ನು ಹೊತ್ತು ಬೆಂಗಳೂರಿಗೆ ಬಂದವರು. ನನಗೆ ಚಿಕ್ಕಂದಿನಿಂದಲೂ ಹೀರೋ ಆಗಬೇಕು ಅಂತ ಆಸೆ ಇತ್ತು. ಆದರೆ ಇದನ್ನು ನಂಬಿ ತುಂಬಾ ಹಣ ಕಳೆದುಕೊಂಡೆ. ತುಂಬಾ ಮಂದಿ ಮೋಸ ಮಾಡಿದ್ರು. ದೇವಿ ಸಿನಿಮಾಕ್ಕೆ ಕಥೆ ಬರೆದು ಇಟ್ಟುಕೊಂಡ್ರೂ ನನ್ನಿಂದ ಹಣ ಪಡೆದು ಎಲ್ಲಾ ಮೋಸ ಮಾಡಿಬಿಟಟರು. ನಾವು ರೈತರು, ರೈತರಾಗಿಯೇ ಉಳಿದುಕೊಳ್ಳೋಣ ಅಂತ ಊರಿಗೆ ಹೊರಟಿದ್ದೆ ಎಂದು ಭಾವುಕರಾದರು ಚೇತನ್​.

56
ಮೋಸದ ಮೇಲೆ ಮೋಸ
Image Credit : Social Media

ಮೋಸದ ಮೇಲೆ ಮೋಸ

ಒಂದೂವರೆ ವರ್ಷದ ಹಿಂದೆ ಒಬ್ಬ ನಿರ್ದೇಶಕ ಬಂದು, ಸ್ಟೋರಿ ಚೆನ್ನಾಗಿದೆ. ದುಡ್ಡು ಹಾಕಲು ಹೇಳಿದ್ರು. ನಾವು ಹಳ್ಳಿ ಜನ ಮುಗ್ದರು, ಸರಿ ಆಯ್ತು ಅಂತ ದುಡ್ಡು ಹಾಕಿದೆ. ಆದರೆ ಅವರು ನಾಪತ್ತೆಯಾದರು. ಡೈರೆಕ್ಟರ್‌ ಎಲ್ಲಿ ಅಂತ ಕೇಳಿದ್ರೆ ಡೈರೆಕ್ಟರ್‌ ಎಲ್ಲಿಯೂ ಕಾಣಿಸಲಿಲ್ಲ. ಕೊನೆಗೆ ಸಿನಿಮಾ ಮಾಡೋಕಾಗಲ್ಲ ಅಂದ್ರು. ತುಂಬಾ ನೋವಾಯ್ತು. ಆ ಸಮಯದಲ್ಲಿಯೇ ಒಬ್ಬರ ಮೇಲೊಬ್ಬರು ಬಂದು ಮೋಸ ಮಾಡುತ್ತಲೇ ಹೋದರು ಎಂದಿದ್ದಾರೆ ಚೇತನ್​.

66
ದೇವಿಯ ರೂಪದಲ್ಲಿ...
Image Credit : Colors Kannada

ದೇವಿಯ ರೂಪದಲ್ಲಿ...

ಒಂದು ಹತ್ತು ಜನ ಡೈರೆಕ್ಟರ್‌ ಮೋಸ ಮಾಡಿದ ಮೇಲೆ, ಹನ್ನೊಂದನೇ ಸಿನಿಮಾ ನಾನೇ ಬರೆಯಬೇಕು ಅಂತ, ಮಂತ್ರಾಲಯ ರಾಘವೇಂದ್ರ ದೇವಸ್ಥಾನದಲ್ಲಿ ಸ್ವಾಮಿಗೆ ಕೈ ಮುಗಿದು ಆಚೆ ಬಂದೆ. ಇಪ್ಪತ್ತು ನಿಮಿಷದಲ್ಲಿ ಕಥೆ ಬರೆದೆ. ಆ ಇಪ್ಪತ್ತು ನಿಮಿಷ ಜರ್ನಿಯಲ್ಲಿ ಒಂದು ದೇವಸ್ಥಾನ ಸಿಗುತ್ತೆ. ಅದೇ ದೇವಿ ಅನ್ನೋ ಒಂದು ಹೆಣ್ಣು ದೇವರು. ಅದೇ ಟೈಟಲ್‌ ತಗೊಂಡೆ. ಅದನ್ನೇ ಈಗ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಚೇತನ್​ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್ವುಡ್ ಫಿಲ್ಮ್
ಭವ್ಯಾ ಗೌಡ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಕರ್ಣ ಧಾರಾವಾಹಿ

Latest Videos
Recommended Stories
Recommended image1
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
Recommended image2
Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!
Recommended image3
ಬೇಬಿ ಬಂಪ್‌ನಲ್ಲಿ ಮಿಂಚಿದ ದೀಪಿಕಾ: ರಣವೀರ್ ಜೊತೆ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್
Related Stories
Recommended image1
'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ
Recommended image2
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved