Vijayalakshmi : ಲಕ್ಷಣ ಹಾಗೂ ಮೈನಾ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ವಿಜಯಲಕ್ಷ್ಮೀ ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ತೆಲುಗು ಕಿರುತೆರೆಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.
ಕನ್ನಡ ಕಿರುತೆರೆ ನಟಿ ವಿಜಯಲಕ್ಷ್ಮಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟಿ ವಿಜಯಲಕ್ಷ್ಮಿ. ಮೊದಲ ಧಾರಾವಾಹಿ ಮೂಲಕವೇ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ವಿಜಯಲಕ್ಷ್ಮೀ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಮೈನಾ’ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರು ನಟಿಸಿರುವ ಎರಡು ಧಾರಾವಾಹಿಗಳೂ ಸಹ ಸೂಪರ್ ಹಿಟ್. ಜನ ಇವರ ಪಾತ್ರ ಹಾಗೂ ಧಾರಾವಾಹಿಯನ್ನು ಇಷ್ಟಪಟ್ಟಿದ್ದರು.
ಭರ್ಜರಿ ಬ್ಯಾಚುಲರ್ಸ್ ಮೂಲಕ ಸದ್ದು
ವಿಜಯಲಕ್ಷ್ಮೀ ಸೀರಿಯಲ್ ಜೊತೆ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಜೀ ಕನ್ನಡ ‘ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮದಲ್ಲಿ ನೇಪಾಳ ಮೂಲದ ಡ್ಯಾನ್ಸರ್, ಗಾಯಕ ಪ್ರೇಮ್ ಥಾಪಗೆ ಮೆಂಟರಿಂಗ್ ಆಗಿದ್ದರು. ಇದೀಗ ತೆಲುಗಿನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಕೋಲಾರದ ಚೆಲುವೆ.
ಸಿರಿ ಮಲ್ಲೆ ಪೂವೆ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ತಯಾರಿ ನಡೆಸಿದ್ದಾರೆ. ಶೀಘ್ರದಲ್ಲಿ ಶುರುವಾಗಲಿರುವ ತೆಲುಗು ಧಾರಾವಾಹಿಯಲ್ಲಿ ವಿಜಯಲಕ್ಷ್ಮಿ ನಟಿಸಲಿದ್ದಾರೆ. ತೆಲುಗಿನ ‘ಈ ಟಿವಿ ವಿನ್’ ವಾಹಿನಿಯ ಹೊಚ್ಚ ಹೊಸ ಧಾರಾವಾಹಿ ‘ಸಿರಿ ಮಲ್ಲೆ ಪೂವೆ’ (Sirimalle Puvva) ಎಂಬ ಧಾರಾವಾಹಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. ಇದು ನಟಿಯ ಮೊದಲ ತೆಲುಗು ಧಾರಾವಾಹಿಯಾಗಿದ್ದು, ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು, ಶ್ವೇತ ವರ್ಣದ ಬಟ್ಟೆಯಲ್ಲಿ ಉಯ್ಯಾಲೆಯಾಡುತ್ತಿರುವ ನಾಯಕಿಯ ಜಲಕ್ ತೋರಿಸಲಾಗಿದೆ. ಪ್ರೊಮೋ ನೋಡಿ ಫ್ಯಾನ್ಸ್ ನಟಿಗೆ ಶುಭ ಕೋರಿದ್ದಾರೆ.
ನಿಮ್ಮ ಆಶೀರ್ವಾದ ಇರಲಿ
ವಿಜಯಲಕ್ಷ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ಪ್ರೊಮೊ ತುಣುಕೊಂದನ್ನು ಶೇರ್ ಮಾಡಿ ‘ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.... ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಹೊಸ ಕಥೆಯೊಂದಿಗೆ ಬರಲಿದ್ದೇವೆ’. ಎಂದು ತಿಳಿಸಿದ್ದಾರೆ. ಧಾರಾವಾಹಿ ಯಾವಾಗ ಶುರುವಾಗಲಿದೆ ಎನ್ನುವ ಕುರಿತು ಮಾಹಿತಿ ಇಲ್ಲ. ಇನ್ನು ಈ ಧಾರಾವಾಹಿಯಲ್ಲಿ ನಾಯಕನಾಗಿ ಕನ್ನಡಿಗರೇ ಆದ ಮೂರ್ತಿ ಎಸ್ ನಟಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.


