MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ

ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ

ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್‌ ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.

2 Min read
Author : Suchethana D
Published : Jul 27 2026, 07:55 PM IST
Share this Photo Gallery
  • FB
  • TW
  • Linkdin
  • Whatsapp
16
ಭಾಗ್ಯಲಕ್ಷ್ಮಿ ಲವರ್‌ಬಾಯ್‌
Image Credit : Social Media

ಭಾಗ್ಯಲಕ್ಷ್ಮಿ ಲವರ್‌ಬಾಯ್‌

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ (Bhagyalkashmi Serial)ನಲ್ಲಿ ಆದಿಯಾಗಿ ಭರ್ಜರಿ ಎಂಟ್ರಿ ಕೊಟ್ಟು, ಬಳಿಕ ಭಾಗ್ಯಳ ಜೀವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ನಟ ಹರೀಶ್‌ ರಾಜ್‌. 50ರ ಹರೆಯದಲ್ಲಿಯೂ ಲವರ್‌ ಬಾಯ್‌ ಎಂದೇ ಗುರುತಿಸಿಕೊಂಡವು ನಟ. ಇದೀಗ ಅದೇ ಕ್ರೇಜ್‌ನೊಂದಿಗೆ ಮತ್ತೊಮ್ಮೆ ಲವರ್‌ ಬಾಯ್‌ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಟ, ನಿರ್ದೇಶಕನಾಗಿ ಬೆಳ್ಳಿ ಪರದೆಗೆ
Image Credit : Instagram

ನಟ, ನಿರ್ದೇಶಕನಾಗಿ ಬೆಳ್ಳಿ ಪರದೆಗೆ

ನಿರ್ದೇಶಕರಾಗಿ, ನಟನಾಗಿ 'ಲವ್ ಕಾಕ್ಟೇಲ್' ಚಿತ್ರದಲ್ಲಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಹರೀಶ್‌ ರಾಜ್‌. ಮೂರು ದಶಕಗಳ ತಮ್ಮ ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ನಟ ಮುಂದಾಗಿದ್ದಾರೆ. ಪ್ರೇಮಕಥೆಗೆ ಮನರಂಜನೆಯ ಸ್ಪರ್ಶ ನೀಡುವ ಪಾತ್ರದಲ್ಲಿ ನಟ ಮಿಂಚಲಿದ್ದಾರೆ.

Related Articles

Related image1
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು
Related image2
ಕೆಲಸ ಸಿಗುವುದಿಲ್ಲ ಎಂದು ಕ್ಯಾನ್ಸರ್​ ರೋಗವನ್ನೇ ಮುಚ್ಚಿಟ್ಟೆ: ಆ ಕರಾಳ ಘಟನೆ ನೆನೆದ ಖ್ಯಾತ ನಟಿ
36
ಪ್ರೇಮದಲ್ಲಿ ಸೋತ ನಂತರವೂ ಜೀವನ
Image Credit : Instagram

ಪ್ರೇಮದಲ್ಲಿ ಸೋತ ನಂತರವೂ ಜೀವನ

ಪ್ರೇಮದಲ್ಲಿ ಸೋತ ನಂತರವೂ ಜೀವನವನ್ನು ಹೇಗೆ ಖುಷಿಯಾಗಿ ಎದುರಿಸಬಹುದು ಎಂಬ ಸಂದೇಶವನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ಲವ್ ಕಾಕ್ಟೇಲ್' ಚಿತ್ರದಲ್ಲಿ. ಈ ಕುರಿತು ಖುದ್ದು ಅವರೇ ಮಾಹಿತಿ ನೀಡಿದ್ದಾರೆ.

46
ನಟ ಹೇಳಿದ್ದೇನು?
Image Credit : Instagram

ನಟ ಹೇಳಿದ್ದೇನು?

'ಲವ್ ಕಾಕ್ಟೇಲ್' ಚಿತ್ರದ ಕುರಿತು ಮಾತನಾಡಿದ ಹರೀಶ್ ರಾಜ್, ತಮ್ಮ ಸಿನಿ ಬದುಕಿನ ಮಹತ್ವದ ಘಟ್ಟವನ್ನು ಈ ಚಿತ್ರದ ಮೂಲಕ ಆಚರಿಸುತ್ತಿರುವುದಾಗಿ ಹೇಳಿದರು. ಚಿತ್ರರಂಗದಲ್ಲಿ ನನಗೆ 30 ವರ್ಷದ ಪಯಣ. ಈಗ ನನಗೆ 50 ವರ್ಷ. ಈ ಸಂತೋಷವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಈ ಸಿನಿಮಾ ಮಾಡಿದ್ದೇನೆ. ಇದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ ಎಂದು ಹೇಳಿದರು.

56
ವೆಂಕಟೇಶಾಯ ನಮಃ'
Image Credit : Instagram

ವೆಂಕಟೇಶಾಯ ನಮಃ'

ಈ ಸಿನಿಮಾಕ್ಕೆ ಆರಂಭದಲ್ಲಿ 'ವೆಂಕಟೇಶಾಯ ನಮಃ' ಎಂಬ ಹೆಸರನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಸಲಹೆಯ ಮೇರೆಗೆ ಚಿತ್ರದ ಶೀರ್ಷಿಕೆಯನ್ನು 'ಲವ್ ಕಾಕ್ಟೇಲ್' ಎಂದು ಬದಲಾಯಿಸಲಾಗಿದೆ ಎಂದೂ ವಿವರಿಸಿದರು. ಈಚೆಗೆ ನಿಧನರಾದ ಹಿರಿಯ ನಟ ಉಮೇಶ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಅವರ ಬಗ್ಗೆ ನೆನಪಿಸಿಕೊಂಡ ನಟ ಹರೀಶ್ ರಾಜ್, "ಅವರು ಚಿತ್ರದಲ್ಲಿ ಅದ್ಭುತ ಪಾತ್ರ ನಿರ್ವಹಿಸಿದ್ದರು. ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನೋವಿನ ಸಂಗತಿ" ಎಂದರು.

66
ಚಿತ್ರದ ಕುರಿತು
Image Credit : Colors Kannada Instagram

ಚಿತ್ರದ ಕುರಿತು

ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸಿದ್ದು, ರಾಜಾ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಟಿವಿ ಶೋ

Latest Videos
Recommended Stories
Recommended image1
'ಬಾಹುಬಲಿ'ಗಾಗಿ ನಾಸರ್‌ಗೆ ಸಿಕ್ಸ್ ಪ್ಯಾಕ್ ಮಾಡಲು ಹೇಳಿದ್ದರಾ ರಾಜಮೌಳಿ? ಇಲ್ಲಿದೆ ಕುತೂಹಲಕಾರಿ ಕಥೆ
Recommended image2
ಮದುವೆಗೂ ಮುನ್ನವೇ ಗೊತ್ತಿತ್ತು..: ಪತ್ನಿ ಜೈನಬ್ ಟ್ರೋಲ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಅಖಿಲ್
Recommended image3
ಕುಚ್‌ಕುಚ್ ಹೋಗಯಾ.. ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಲವ್ವಲ್ಲಿ ಅರ್ಷ್‌ದೀಪ್ ಸಿಂಗ್ ಬಿದ್ದಿದ್ದು ಪಕ್ಕಾ ಆಯ್ತು!
Related Stories
Recommended image1
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು
Recommended image2
ಕೆಲಸ ಸಿಗುವುದಿಲ್ಲ ಎಂದು ಕ್ಯಾನ್ಸರ್​ ರೋಗವನ್ನೇ ಮುಚ್ಚಿಟ್ಟೆ: ಆ ಕರಾಳ ಘಟನೆ ನೆನೆದ ಖ್ಯಾತ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved