MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ: ತೆಲುಗು ವಾಹಿನಿಯಲ್ಲಿ ಘೋಷಿಸಿದ ಕಮಲಿ ಧಾರಾವಾಹಿ ಹೀರೋ, ಹೀರೋಯಿನ್

ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ: ತೆಲುಗು ವಾಹಿನಿಯಲ್ಲಿ ಘೋಷಿಸಿದ ಕಮಲಿ ಧಾರಾವಾಹಿ ಹೀರೋ, ಹೀರೋಯಿನ್

ಕಮಲಿ ಧಾರಾವಾಹಿಯ ಜನಪ್ರಿಯ ಜೋಡಿ ಅಮೂಲ್ಯ ಗೌಡ ಮತ್ತು ನಿರಂಜನ್‌ ಅವರ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ ‘Will You Marry Me’ ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.

2 Min read
Author : Sushma Hegde
Published : Jul 28 2026, 10:09 AM IST
Share this Photo Gallery
  • FB
  • TW
  • Linkdin
  • Whatsapp
15
ನಟಿ ಅಮೂಲ್ಯ ಗೌಡ, ನಟ ನಿರಂಜನ್ ಪ್ರೀತಿಸುತ್ತಿದ್ದಾರಾ?
Image Credit : Asianet News

ನಟಿ ಅಮೂಲ್ಯ ಗೌಡ, ನಟ ನಿರಂಜನ್ ಪ್ರೀತಿಸುತ್ತಿದ್ದಾರಾ?

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ  ಕಮಲಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ನಟಿ ಅಮೂಲ್ಯ ಗೌಡ ಮತ್ತು ನಟ ನಿರಂಜನ್ ಬಗ್ಗೆ ಬಹಳ ದಿನಗಳಿಂದಲೂ ಒಂದು ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇವರಿಬ್ಬರು ಕೇವಲ ಸ್ನೇಹಿತರಾ? ಅಥವಾ ನಿಜವಾಗಿಯೂ ಪ್ರೀತಿಸುತ್ತಿದ್ದಾರಾ? ಎಂಬ ಕುತೂಹಲಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಕಮಲಿ ಧಾರಾವಾಹಿ 2018ರಲ್ಲಿ ಆರಂಭವಾಗಿ 2022ರಲ್ಲಿ ಮುಕ್ತಾಯವಾಗಿತ್ತು. ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಪೂರೈಸಿದ್ದ ಈ ಧಾರಾವಾಹಿಯಲ್ಲಿ ಅಮೂಲ್ಯ ಗೌಡ ಮತ್ತು ನಿರಂಜನ್ ಜೋಡಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿತ್ತು. ಧಾರಾವಾಹಿ ಮುಗಿದ ಬಳಿಕವೂ ಇವರಿಬ್ಬರ ನಡುವಿನ ಸ್ನೇಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಲವ್‌ ಬಗ್ಗೆ ಕೇಳಿದಾಗ ಅಮೂಲ್ಯ ಕೊಟ್ಟಿದ್ದ ಉತ್ತರವೇ ಬೇರೆ
Image Credit : Asianet News

ಲವ್‌ ಬಗ್ಗೆ ಕೇಳಿದಾಗ ಅಮೂಲ್ಯ ಕೊಟ್ಟಿದ್ದ ಉತ್ತರವೇ ಬೇರೆ

ಹಿಂದೆ ಸಂದರ್ಶನವೊಂದರಲ್ಲಿ ಅಮೂಲ್ಯ ಗೌಡ ಅವರಿಗೆ ನಿರಂಜನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು, ನಾನು ಮತ್ತು ನಿರಂಜನ್ ಲವ್ ಮಾಡ್ತಿದ್ದೀವಿ ಅಂತ ಕಮಲಿ ಧಾರಾವಾಹಿ ಸಮಯದಿಂದಲೂ ಮಾತಿದೆ. ನನ್ನ ಕುಟುಂಬಕ್ಕೆ ನಿರಂಜನ್ ಗೊತ್ತು, ಅವರ ಕುಟುಂಬಕ್ಕೂ ನನ್ನ ಪರಿಚಯ ಇದೆ. ನನ್ನ ಪ್ರಪಂಚದಲ್ಲಿ ನಿರಂಜನ್ ಕೂಡ ಇದ್ದಾರೆ ಎಂದು ಹೇಳಿದ್ದರು. 

ಇನ್ನೂ ಕುತೂಹಲಕಾರಿ ವಿಚಾರವೆಂದರೆ, ನಾನು ನಿರಂಜನ್ ಅವರನ್ನು ಪ್ರೀತಿಸುತ್ತಿದ್ದೇನೋ, ಇಲ್ಲವೋ ಎಂದು ಹೇಳಲು ಇಷ್ಟಪಡುವುದಿಲ್ಲ. ಆದರೆ ನಾನು ಅವರನ್ನು ಲವ್ ಮಾಡ್ತಿಲ್ವಾ ಎಂದು ಕೇಳಿದರೆ ‘ನೋ’ ಅಂತ ಕೂಡ ಹೇಳೋದಿಲ್ಲ” ಎಂದು ಅಮೂಲ್ಯ ಹೇಳಿದ್ದರು. ಈ ಹೇಳಿಕೆ ಆಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.

35
ನಾಳೆ ಪ್ರೀತಿಸಿ ಮದುವೆಯಾಗಲೂಬಹುದು
Image Credit : Asianet News

ನಾಳೆ ಪ್ರೀತಿಸಿ ಮದುವೆಯಾಗಲೂಬಹುದು

ಅಮೂಲ್ಯ ಅವರು ಮತ್ತೊಂದು ಮಾತನ್ನೂ ಹೇಳಿದ್ದರು. ನಾನು ಮತ್ತು ನಿರಂಜನ್ ಸ್ನೇಹಿತರು. ಅವರು ತುಂಬಾ ಒಳ್ಳೆಯ ಹುಡುಗ. ನಾವಿಬ್ಬರೂ ನಾಳೆ ಪ್ರೀತಿಸಿ ಮದುವೆಯಾಗಲೂಬಹುದು. ಸೋಶಿಯಲ್ ಮೀಡಿಯಾ ತುಂಬಾ ಸ್ಟ್ರಾಂಗ್ ಆಗಿದೆ. ಇಂದು ನಾವು ಪ್ರೀತಿಸುತ್ತಿಲ್ಲ ಎಂದು ಹೇಳಿ, ನಾಳೆ ಪ್ರೀತಿಸಿ ಮದುವೆಯಾದರೆ, ಹಿಂದಿನ ಹೇಳಿಕೆಗಳನ್ನೇ ಇಟ್ಟುಕೊಂಡು ಜನ ಮಾತನಾಡುತ್ತಾರೆ. ಅದಕ್ಕಾಗಿಯೇ ನಾನು ಲವ್ ಮಾಡ್ತಿಲ್ಲ ಅಂತಲೂ ಹೇಳೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಅಮೂಲ್ಯ ಅವರ ಈ ಮಾತುಗಳು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದವು.

ಹೈದರಾಬಾದ್‌ನಲ್ಲಿ ನಿರಂಜನ್ ತೋರಿಸಿದ ಕಾಳಜಿ ವೈರಲ್

ಅಮೂಲ್ಯ ಮತ್ತು ನಿರಂಜನ್ ಇಬ್ಬರೂ ಬೇರೆ ಬೇರೆ ತೆಲುಗು ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೂಲ್ಯ ಅವರಿಗೆ ಗಾಯವಾಗಿದೆ ಎಂದು ನಿರಂಜನ್‌ಗೆ ಫ್ರಾಂಕ್ ಕಾಲ್ ಮಾಡಿ ಕರೆಸಲಾಗಿತ್ತು.

ಆಗ ಅಮೂಲ್ಯ ಅವರ ಬಗ್ಗೆ ನಿರಂಜನ್ ತೋರಿಸಿದ ಕಾಳಜಿ ಮತ್ತು ಆತಂಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅನೇಕ ಅಭಿಮಾನಿಗಳು, “ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ” ಎಂದು ಅಭಿಪ್ರಾಯಪಟ್ಟಿದ್ದರು.

45
ತೆಲುಗು ಶೋನಲ್ಲಿ ಮದುವೆ ಬಗ್ಗೆ ಬಿಗ್ ಸುಳಿವು?
Image Credit : Asianet News

ತೆಲುಗು ಶೋನಲ್ಲಿ ಮದುವೆ ಬಗ್ಗೆ ಬಿಗ್ ಸುಳಿವು?

ಇದೀಗ ಮತ್ತೊಂದು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ತೆಲುಗು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ ಮತ್ತು ನಿರಂಜನ್ ಅವರ ಮದುವೆಯ ವಿಚಾರ ಚರ್ಚೆಗೆ ಬಂದಿದ್ದು, ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ ಎಂಬ ರೀತಿಯ ಹೇಳಿಕೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಮದುವೆ ಸಂಭ್ರಮದ ವಾತಾವರಣ,  ಕಾಲಿಗೆ ಗಜ್ಜೆ ತೊಡಿಸುವ ಕ್ಷಣ ಮತ್ತು ‘Will U Marry Me’ ಎಂಬ ಬರಹದ ಹಿನ್ನೆಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇದರಿಂದಾಗಿ ಅಮೂಲ್ಯ-ನಿರಂಜನ್ ನಿಜ ಜೀವನದಲ್ಲೂ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ. ಆದರೆ, ಈ ದೃಶ್ಯಗಳು ಟಿವಿ ಶೋನ ಭಾಗವಾಗಿದೆಯೇ ಅಥವಾ ನಿಜ ಜೀವನದ ಮದುವೆ ಘೋಷಣೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಹೀಗಾಗಿ ಅಭಿಮಾನಿಗಳು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.

55
‘ಕಮಲಿ’ ಜೋಡಿ ನಿಜ ಜೀವನದಲ್ಲೂ ಒಂದಾಗ್ತಾರಾ?
Image Credit : instagram

‘ಕಮಲಿ’ ಜೋಡಿ ನಿಜ ಜೀವನದಲ್ಲೂ ಒಂದಾಗ್ತಾರಾ?

ಕಿರುತೆರೆಯಲ್ಲಿ ಜೋಡಿಯಾಗಿ ಮೋಡಿ ಮಾಡಿದ್ದ ಅಮೂಲ್ಯ ಗೌಡ ಮತ್ತು ನಿರಂಜನ್, ನಿಜ ಜೀವನದಲ್ಲೂ ಒಂದಾಗಬೇಕು ಎಂಬುದು ಇವರ ಅಭಿಮಾನಿಗಳ ಬಹುದಿನಗಳ ಆಸೆ. ಈ ಹಿಂದೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ನೇರವಾಗಿ ಯಾವುದೇ ಸ್ಪಷ್ಟ ಘೋಷಣೆ ಮಾಡಿರಲಿಲ್ಲ.

ಆದರೆ ಇದೀಗ ತೆಲುಗು ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಕೇಳಿಬಂದ ಮಾತುಗಳು ಮತ್ತು ವೈರಲ್ ಆಗಿರುವ ದೃಶ್ಯಗಳು ಹೊಸ ಚರ್ಚೆಗೆ ಕಾರಣವಾಗಿವೆ. ‘ಕಮಲಿ’ ಧಾರಾವಾಹಿಯ ಈ ಜನಪ್ರಿಯ ಜೋಡಿ ನಿಜ ಜೀವನದಲ್ಲೂ ಮದುವೆಯಾಗಲಿದೆಯೇ? ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ, ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ-ನಿರಂಜನ್ ಜೋಡಿಯ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಮನರಂಜನಾ ಸುದ್ದಿ
ಪ್ರೀತಿ
ಅಮೂಲ್ಯ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ರೂರಲ್ ಅಲ್ಲ, ಇದು ಐಪಿಎಸ್ ಮಲ್ಲಿಯ ಖಡಕ್ ದರ್ಬಾರ್; ಮಾಜಿ ಗಂಡ ಜೈದೇವ್‌ಗೆ ಲಾಠಿ ಏಟು
Recommended image2
ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ
Recommended image3
'ಹುಚ್ಚು ಹುಚ್ಚರ ಥರ..' ಹೇಳಿಕೆ ಬಳಿಕ ಬಿಗ್ ಬಾಸ್ ಧ್ರುವಂತ್‌ಗೆ ಟ್ರೋಲ್ ಕಾಟ: ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved