MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಶಾರುಖ್​ ಖಾನ್​ ಸೊಸೆಯಾಗಿ ಬರ್ತಿದ್ದಾಳಾ ಈ ಪಾಕ್​ ನಟಿ? ಫೋಟೋ ವೈರಲ್​- ಏನಿದರ ಹಕೀಕತ್ತು?

ಶಾರುಖ್​ ಖಾನ್​ ಸೊಸೆಯಾಗಿ ಬರ್ತಿದ್ದಾಳಾ ಈ ಪಾಕ್​ ನಟಿ? ಫೋಟೋ ವೈರಲ್​- ಏನಿದರ ಹಕೀಕತ್ತು?

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಅವರ ಫೋಟೋವೊಂದು ವೈರಲ್ ಆಗಿ, ಡೇಟಿಂಗ್ ವದಂತಿಗಳಿಗೆ ಕಾರಣವಾಯಿತು. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ತೆಗೆದ ಈ ಚಿತ್ರದ ಬಗ್ಗೆ, ಸಾದಿಯಾ ಖಾನ್ ಸ್ಪಷ್ಟನೆ ನೀಡಿದ್ದಾರೆ.

2 Min read
Author : Suchethana D
Published : May 03 2026, 07:45 PM IST
Share this Photo Gallery
  • FB
  • TW
  • Linkdin
  • Whatsapp
17
ಶಾರುಖ್​ ಖಾನ್​ ಪಾಕ್​ ಪ್ರೀತಿ
Image Credit : Social Media

ಶಾರುಖ್​ ಖಾನ್​ ಪಾಕ್​ ಪ್ರೀತಿ

ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ಗೆ ಪಾಕಿಸ್ತಾನದ ಮೇಲೆ ಇರುವ ಪ್ರೀತಿ ಗೊತ್ತಿದ್ದದ್ದೇ. ಪಾಕಿಸ್ತಾನದ ವಿರುದ್ಧ ಯಾವತ್ತೂ ಅವರು ಏನೊಂದು ಮಾತನಾಡುವುದಿಲ್ಲ. ಉಗ್ರ ಕಸಾಬ್​ನನ್ನು ಜಂಟಲ್​ಮ್ಯಾನ್​ ಎಂದು ಸಂಬೋಧಿಸಿ ಟ್ರೋಲ್​​ ಆದವರು ಶಾರುಖ್​. ಅದೇ ರೀತಿ ಪಾಕಿಸ್ತಾನಕ್ಕೂ ನನಗೂ ತುಂಬಾ ನಂಟಿದೆ. ಅದು ತುಂಬಾ ಒಳ್ಳೆಯ ನಮ್ಮ ನೆರೆಯ ದೇಶ ಎಂದೂ ಹೇಳಿದ್ದರು. ಇದರ ನಡುವೆಯೇ, ಶಾರುಖ್​ ಖಾನ್​ ಪುತ್ರ 28 ವರ್ಷದ ಆರ್ಯನ್​ ಖಾನ್​ ಅವರ ಹಳೆಯ ಫೋಟೋ ಒಂದು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿದೆ. ಅದರಿಂದಾಗಿ ಪಾಕ್​ ನಟಿ ಶಾರುಖ್​ ಸೊಸೆಯಾಗಿ ಬರ್ತಿದ್ದಾಳಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ!

27
10 ವರ್ಷ ದೊಡ್ಡವಳು
Image Credit : Social Media

10 ವರ್ಷ ದೊಡ್ಡವಳು

ಅಷ್ಟಕ್ಕೂ ಇದು ಹಳೆಯ ಫೋಟೋ. ಇದರಲ್ಲಿ, ಆರ್ಯನ್ ಖಾನ್ ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈಕೆ ಆರ್ಯನ್​ನಿಂದ 10 ವರ್ಷ ದೊಡ್ಡವಳಂತೆ. ಇದಾಗಲೇ ಆರ್ಯನ್ ಖಾನ್​ ಐದು ವರ್ಷ ದೊಡ್ಡವಳಾಗಿರುವ ನೋರಾ ಫತೇಹಿ (Nora Fatehi ) ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಭಾರಿ ಸದ್ದು ಮಾಡಿದ ನಡುವೆಯೇ, ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.

Related Articles

Related image1
Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್
Related image2
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
37
ಗೋವಾದ ಗಮ್ಮತ್ತು
Image Credit : Social Media

ಗೋವಾದ ಗಮ್ಮತ್ತು

ಸೆಲೆಬ್ರಿಟಿಗಳು ಅಂದ್ರೆ ಹಾಗೇ ಅಲ್ವಾ? ಅವರ ಫೋಟೋ ಕಂಡ ತಕ್ಷಣ ಅದಕ್ಕೆ ಕಮೆಂಟ್​ ಮಾಡುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಹುಡುಗ-ಹುಡುಗಿ ಫೋಟೋ ಕಂಡರಂತೂ ಮುಗಿದೇ ಹೋಯ್ತು. ಇದೇ ಕಾರಣಕ್ಕೆ ಈಗ ಈ ಫೋಟೋ ಇಷ್ಟೆಲ್ಲಾ ಮತ್ತೆ ಸದ್ದು ಮಾಡ್ತಿದೆ. ಅಸಲಿಗೆ ಈ ಫೋಟೋ ಅನ್ನು ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯ ಗಮ್ಮತ್ತಿನಲ್ಲಿ ಇದ್ದ ವೇಳೆ ಜೋಡಿ ತೆಗೆಸಿಕೊಂಡಿದ್ದಂತೆ!

47
ಫೋಟೋ ಹಾಕಿ ಡಿಲೀಟ್​ ಮಾಡಿದ್ದ ನಟಿ
Image Credit : Social Media

ಫೋಟೋ ಹಾಕಿ ಡಿಲೀಟ್​ ಮಾಡಿದ್ದ ನಟಿ

ಈ ಫೋಟೋ ವೈರಲ್ ಆಗಲು ಕಾರಣ, ಇದನ್ನು ಖುದ್ದು ಸಾದಿಯಾ ಖಾನ್‌ ಅವರು ಇನ್​ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಈ ಫೋಟೋಗೆ ‘ನ್ಯೂ ಇಯರ್‌ನಲ್ಲಿ ತೆಗೆದ ಫೋಟೋ’ ಎಂದು ಕ್ಯಾಪ್ಷನ್ ನೀಡಿದ್ದರು. ಸಾದಿಯಾ ಕಪ್ಪು ಬಣ್ಣದ ಬಟ್ಟೆಯಲ್ಲಿದ್ದರೆ, ಆರ್ಯನ್ ಬಿಳಿ ಬಣ್ಣದ ಕೋಟ್​ ಧರಿಸಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಪೋಸ್ಟ್‌ ಮಾಡಿದ 24 ಗಂಟೆಯ ಒಳಗೇ ಅದನ್ನು ಸಾದಿಯಾ ಇನ್‌ಸ್ಟಾಗ್ರಾಮ್‌ ಖಾತೆಯಿಂದ ತೆಗೆದು ಹಾಕಿದ್ದರು. ಹಾಕಿದ್ದೂ ಅಲ್ಲದೇ, ತೆಗೆದು ಹಾಕಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು.

57
ಕೆಆರ್​ಕೆ ಕೂಡ ಹೇಳಿದ್ರು
Image Credit : instagram

ಕೆಆರ್​ಕೆ ಕೂಡ ಹೇಳಿದ್ರು

ಅಷ್ಟಕ್ಕೂ ಇದು ಇಷ್ಟೆಲ್ಲಾ ಚರ್ಚೆಗೆ ಬರಲು ಒಂದು ಕಾರಣವೂ ಇದೆ. ಅದೇನೆಂದರೆ, ಪಾಕ್​ ನಟಿಯ ಜತೆ ಆರ್ಯನ್​ ಖಾನ್​ (Aryan Khan) ಸಂಬಂಧದಲ್ಲಿ ಇದ್ದಾರೆ ಎಂದು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ KRK ಕೂಡ ಹೇಳಿದ್ದರು. ಇದರಿಂದ ಸುದ್ದಿ ಮತ್ತಷ್ಟು ವೈರಲ್​ ಆಯಿತು. ಏಕೆಂದರೆ ಕೆಆರ್​ಕೆ ಅವರು ಇದಾಗಲೇ ಹಲವಾರು ವಿಷಯಗಳನ್ನು ಬೆಳಕಿಗೆ ತಂದಿದ್ದು, ಈ ವಿಷಯವನ್ನೂ ಅವರೇ ಬಹಿರಂಗಪಡಿಸಿದ್ದರು.

67
ಮಿತಿಯಲ್ಲಿರಲಿ
Image Credit : instagram

ಮಿತಿಯಲ್ಲಿರಲಿ

ಇಷ್ಟೆಲ್ಲಾ ಗಲಾಟೆ ಆದ ಮೇಲೆ, ಪತ್ರಕರ್ತರು ಸಾದಿಯಾ ಖಾನ್​ಗೆ ಈ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಗರಂ ಆಗಿದ್ದ ಸಾದಿಯಾ (Sadia Khan) 'ಜನರು ನನ್ನ ಮತ್ತು ಆರ್ಯನ್ ಬಗ್ಗೆ ಪೂರ್ಣ ಚಿತ್ರಣವನ್ನು ತಿಳಿಯದೆ ಹೇಗೆ ಕಥೆಗಳನ್ನು ರಚಿಸುತ್ತಿದ್ದಾರೆ ಎಂಬುದು ತುಂಬಾ ವಿಚಿತ್ರವಾಗಿದೆ. ಸುದ್ದಿ ಮಾಡಬೇಕು ನಿಜ. ಅದರೆ ಸುದ್ದಿಯ ಹೆಸರಿನಲ್ಲಿ ಎಲ್ಲದಕ್ಕೂ ಮಿತಿಯಿರಬೇಕು' ಎಂದು ಆಕ್ರೋಶ ಹೊರಹಾಕಿದ್ದಾರೆ.

77
ಏನು ಕಾಣಿಸುತ್ತದೆ ನಿಮಗೆ?
Image Credit : instagram

ಏನು ಕಾಣಿಸುತ್ತದೆ ನಿಮಗೆ?

'ವೈರಲ್ ಚಿತ್ರದ ಬಗ್ಗೆ ಮಾತನಾಡಲು ನಿಮಗೆ ಅದರಲ್ಲಿ ಏನು ಕಾಣಿಸುತ್ತದೆ? ನಾವಿಬ್ಬರೂ ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ ಅಷ್ಟೇ. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯ ವೇಳೆ ಹಲವು ಸಿನಿ ತಾರೆಯರು ಬಂದಿದ್ದರು. ಆರ್ಯನ್​ ಖಾನ್​ ಕೂಡ ಬಂದಿದ್ದರು. ಅವರು ಆಕಸ್ಮಿಕವಾಗಿ ಭೇಟಿಯಾದರು, ಒಟ್ಟಿಗೇ ಫೋಟೋ (Photo) ಕ್ಲಿಕ್ಕಿಸಿ ಅದನ್ನು ನಾನು ಶೇರ್​ ಮಾಡಿಕೊಂಡಿದ್ದೆ ಅಷ್ಟೆ. ಅದನ್ನೇ ಡೇಟಿಂಗ್ (Dating)​, ರಿಲೇಷನ್ (Relationship)​ ಎಂದೆಲ್ಲಾ ಕರೆದರೆ ಹೇಗೆ' ಎಂದು ಪ್ರಶ್ನಿಸಿರುವ ಸಾದಿಯಾ, ಆರ್ಯನ್​ ಖಾನ್​ ಸ್ವೀಟ್​ ವ್ಯಕ್ತಿ. ಉತ್ತಮ ನಡತೆಯುಳ್ಳವ. ತಂದೆಯಂತೆ ಮಗ' ಎಂದಿದ್ದಾರೆ. ಸುಖಾಸುಮ್ಮನೆ ತಲೆಬುಡವಿಲ್ಲದ ಸುದ್ದಿ ಹರಡಬೇಡಿ ಎಂದೂ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಾರುಖ್ ಖಾನ್
ಆರ್ಯನ್ ಖಾನ್
ಬಾಲಿವುಡ್
ಮನರಂಜನಾ ಸುದ್ದಿ
ಪಾಕಿಸ್ತಾನ
ನಟಿ

Latest Videos
Recommended Stories
Recommended image1
ಬಾಲಕೃಷ್ಣ ಲವ್ ಮಾಡಿದ್ದು 'ಆ ನಟಿ'ಯನ್ನು; ಆದ್ರೆ ಮದುವೆಯಾಗಿದ್ದು ವಸುಂಧರಾಳನ್ನು.. ಮಧ್ಯೆ ಏನ್ ನಡೀತು?!
Recommended image2
ಅಂದು ನಡೆದ ಘಟನೆಯಿಂದ ಆ ನಟನ ಸಿನಿಮಾ ಇಂದಿಗೂ ನೋಡ್ತಿಲ್ಲ ಎಂದ ಯಶ್​: ಯಾರು ಆ ನಟ? ಆಗಿದ್ದೇನು
Recommended image3
ನಯನತಾರಾ ಜಾಗಕ್ಕೆ ಬಂದ್ರು ಕಾಜಲ್: 25 ವರ್ಷ ದೊಡ್ಡ ನಟನಿಗೆ ಹೀರೋಯಿನ್ ಆದ್ರು!
Related Stories
Recommended image1
Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್
Recommended image2
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved