ಡಿವೋರ್ಸ್ ಮಾಡ್ಕೊಂಡು ಜನರಿಗೆ ಚಳ್ಳೆಹಣ್ಣು ತಿನಿಸ್ತಿರೋ ಖ್ಯಾತ ಕಿರುತೆರೆ ಜೋಡಿ! ಯಾರದು?
Celebrity Divorce: ಮನಸ್ತಾಪ ಅಥವಾ ಇನ್ನಾವುದೋ ಕಾರಣಕ್ಕೆ ದಂಪತಿ ಡಿವೋರ್ಸ್ ತಗೊಳೋದುಂಟು. ಆಮೇಲೆ ಕೆಲವರು ಸ್ನೇಹಿತರಾಗಿ ಇರುತ್ತಾರೆ, ಇನ್ನೂ ಕೆಲವರು ಸತ್ತರೂ ಕೂಡ ಹೋಗಲ್ಲ. ಮಕ್ಕಳಿಗೋಸ್ಕರ ಒಟ್ಟಿಗೆ ಸಮಯ ಕಳೆಯೋದಿದೆ. ಈಗ ಇಲ್ಲೊಂದು ಜೋಡಿ ಒಂದು ವರ್ಷ ಡಿವೋರ್ಸ್ ತಗೋಳತ್ತೆ, ಇನ್ನೊಮ್ಮೆ ಒಂದಾಗತ್ತೆ.

ಆ ಜೋಡಿ ಯಾವುದು?
ನನ್ನನ್ನು ಮದುವೆ ಆಗುವ ಮುನ್ನ ಇನ್ನೊಂದು ಮದುವೆ ಆಗಿತ್ತು ಎಂದು ರಾಜೀವ್ ಸೇನ್ ಅವರು ಪತ್ನಿ ಚಾರು ಆಸೋಪ ವಿರುದ್ಧ ದೂರಿದ್ದರು. ಇದಾದ ಬಳಿಕ ಚಾರು ಕೂಡ ಗಂಡನ ಮೇಲೆ ಒಂದಿಷ್ಟು ಪ್ರತ್ಯಾರೋಪ ಮಾಡಿದ್ದರು. ಈಗ ಈ ಜೋಡಿ ಡಿವೋರ್ಸ್ ತಗೊಂಡು, ಎರಡು ವರ್ಷಗಳ ಬಳಿಕ ಮತ್ತೆ ಒಂದಾಗಿದೆ.
ಹಾಲಿಡೇ ಕಳೆದರು
ಇತ್ತೀಚೆಗೆ ರಾಜೀವ್ ಸೇನ್, ಚಾರು ಆಸೋಪ ಅವರು ಹಾಲಿಡೇ ಕೂಡ ಕಳೆದಿದ್ದರು. ಈ ಬಗ್ಗೆ ಚಾರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. “ನಾನು ಮನೆ ಕಟ್ಟಲು ಆರಂಭಿಸಿದಾಗಿನಿಂದ ಸಿಂಗಲ್ ಬ್ರೇಕ್ ತಗೊಂಡಿಲ್ಲ, ನಾನು ತುಂಬ ಕಷ್ಟಪಟ್ಟಿದ್ದೇನೆ. ಈ ಹಾಲಿಡೇ ಬೇಕಾಗಿತ್ತು. ಮಸಾಜ್ ಮಾಡಿಸಿಕೊಳ್ಳಬೇಕು, ನನ್ನ ಬಗ್ಗೆ ಕೇರ್ ತಗೋಬೇಕು ಅಂತ ಬ್ಯಾಂಕಾಕ್‌ಗೆ ಹೋದೆವು. ಕೆಲ ತಿಂಗಳುಗಳಿಂದ ತುಂಬ ಕಷ್ಟಪಟ್ಟಿದ್ದಕ್ಕೆ ನನ್ನ ದೇಹದ ಭಾಗಗಳು ನೋಯುತ್ತಿವೆ. ಜಿಯಾನಾ ಶಾಲೆಗೆ ಹೋಗಬೇಕು ಅಂತ ನಾನು ನಿತ್ಯವೂ ಬೆಳಗ್ಗೆ ಬೇಗ ಏಳುತ್ತೇನೆ. ಹೀಗಾಗಿ ಬೆಳಗ್ಗಿನ ತಿಂಡಿಯನ್ನು ನೀವು ಬುಕ್ ಮಾಡಬೇಡಿ, ಆಗ ಬೇಗ ಏಳಬೇಕಾಗುತ್ತದೆ ಎಂದು ಹೇಳಿದ್ದೇನೆ” ಎಂದು ಚಾರು ಆಸೋಪ ಹೇಳಿದ್ದರು.
ಡಿವೋರ್ಸ್ ಪಡೆದಿರೋ ಜೋಡಿ
ವಿಶ್ವಸುಂದರಿ ಸುಷ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಹಾಗೂ ಚಾರು ಆಸೋಪ ಅವರು 2019ರಲ್ಲಿ ಪ್ರೀತಿಸಿ ಮದುವೆಯಾದರು. ಇದಕ್ಕೂ ಮೊದಲೇ ಚಾರು ಆಸೋಪಗೆ ಮದುವೆಯಾಗಿ ಡಿವೋರ್ಸ್ ಆಗಿದ್ದು, ಅದನ್ನು ಅವರು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇದರಿಂದಲೇ ಚಾರು-ರಾಜೀವ್ ಮಧ್ಯೆ ಬಿರುಕು ಶುರುವಾಗಿತ್ತು. 2023ರಲ್ಲಿ ಇವರಿಬ್ಬರು ಕಾನೂನಿನ ಮೂಲಕ ಡಿವೋರ್ಸ್ ಪಡೆದರು. ಈ ಮಧ್ಯೆ ಸಾಕಷ್ಟು ಬಾರಿ ಒಂದಾಗೋದು, ದೂರ ಆಗೋದು ಮಾಡಿದ್ದಾರೆ.
ಸೀರೆ ಬ್ಯುಸಿನೆಸ್ ಮಾಡ್ತಿದ್ದಾರೆ
ಮುಂಬೈನಲ್ಲಿ ಜೀವನ ಕಷ್ಟ ಎಂದು ಚಾರು ಅವರು ತವರೂರಿಗೆ ಹೋಗಿದ್ದರು. ಅಲ್ಲಿ ಅವರು ಸೀರೆ ಬ್ಯುಸಿನೆಸ್ ಮಾಡ್ತೀನಿ ಎಂದು ಹೇಳಿದ್ದರು. ಇದರ ಬಗ್ಗೆಯೂ ರಾಜೀವ್ ಆರೋಪ ವ್ಯಕ್ತಪಡಿಸಿದ್ದರು. “ಚಾರುಗೆ ಲಕ್ಷುರಿ ಜೀವನ ಬೇಕು, ಇದಕ್ಕಾಗಿಯೇ ಹೀಗೆ ಮಾಡ್ತಿದ್ದಾಳೆ. ಸೀರೆ ಬ್ಯುಸಿನೆಸ್ ಮಾಡುವ ಸ್ಥಿತಿ ಏನೂ ಬಂದಿಲ್ಲ” ಎಂದು ಕೂಡ ರಾಜೀವ್ ಹೇಳಿದ್ದರು.
ರೊಮ್ಯಾಂಟಿಕ್ ಡೇಟ್
ಹೀಗೆ ನಿತ್ಯ ಒಂದಲ್ಲ ಒಂದು ಆರೋಪ ಮಾಡಿಕೊಳ್ತಿದ್ದ ಜೋಡಿ ಈಗ ಗಣೇಶಚತುರ್ಥಿಯನ್ನು ಒಟ್ಟಾಗಿ ಆಚರಿಸಿಕೊಂಡಿದೆ. ಅಷ್ಟೇ ಅಲ್ಲದೆ ಹಾಲಿಡೇ ಕಳೆಯುತ್ತಿದೆ, ರೊಮ್ಯಾಂಟಿಕ್ ಆಗಿ ಫೋಟೋ ತಗೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದೆ.
ಈ ರೂತ
ಮಗಳು ಜಿಯಾನಾಗೋಸ್ಕರ ರಾಜೀವ್ ಹಾಗೂ ಚಾರು ಅವರು ಹಾಲಿಡೇ ಕಳೆಯೋದು, ಒಟ್ಟಿಎಗ ಸಮಯ ಕಳೆಯೋದು ಅಗತ್ಯ. ಅದನ್ನು ಬಿಟ್ಟು ಇವರ ರೊಮ್ಯಾಂಟಿಕ್ ಫೋಟೋಗಳು ವೀಕ್ಷಕರಿಗೆ ಅತಿ ಎನಿಸಿವೆ. ಡಿವೋರ್ಸ್ ಎಂದು ಈ ಜೋಡಿ ವೀಕ್ಷಕರನ್ನು ಯಾಕೆ ಮರಳು ಮಾಡುತ್ತಿವೆ ಎನ್ನೋದು ಅರ್ಥವಾಗ್ತಿಲ್ಲ.